ಸತತ 8ನೇ ತಿಂಗಳು ಕಾರು ಉತ್ಪಾದನೆ ಕಡಿತಗೊಳಿಸಿದ ಮಾರುತಿ ಸುಝುಕಿ
Team Udayavani, Nov 9, 2019, 8:15 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಮುಂಬಯಿ: ಮಾರುಕಟ್ಟೆಯಲ್ಲಿ ಬೇಡಿಕೆ ಕೊರತೆ ಹಿನ್ನೆಲೆಯಲ್ಲಿ ದೇಶದ ಅತಿ ದೊಡ್ಡ ಕಾರು ತಯಾರಿಕೆ ಕಂಪೆನಿ ಮಾರುತಿ ಸುಝುಕಿ ಉತ್ಪಾದನೆಯನ್ನು ಕಡಿತಗೊಳಿಸಿದೆ.
ಸತತ 8ನೇ ತಿಂಗಳೂ ಉತ್ಪಾದನೆ ಕಡಿತವಾಗಿದ್ದು, ಕಳೆದ ತಿಂಗಳು 1,19,337ಕ್ಕೆ ಉತ್ಪಾದನೆ ಕುಸಿದಿದೆ.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಇದು 1,50,497 ಆಗಿತ್ತು. ಇದರೊಂದಿಗೆ ಪ್ರಯಾಣಿಕ ವಾಹನಗಳ ಉತ್ಪಾದನೆಯೂ ಇಳಿಕೆಯಾಗಿದೆ. 1,17,383 ಕಳೆದ ತಿಂಗಳಿನ ಉತ್ಪಾದನೆಯಾಗಿದ್ದರೆ, ಕಳೆದ ವರ್ಷ ಅಕ್ಟೋಬರ್‌ನಲ್ಲಿ ಇದು 1,48,318 ಆಗಿತ್ತು. ವ್ಯಾನ್ ಉತ್ಪಾದನೆಯೂ ಅರ್ಧಕ್ಕರ್ಧ ಕಡಿತಗೊಂಡಿದೆ. ಕಳೆದ ವರ್ಷ ಇದು 13,817 ಇದ್ದರೆ ಕಳೆದ ತಿಂಗಳು 7,661 ಆಗಿತ್ತು. ಸಣ್ಣ ಕಾರುಗಳ ಉತ್ಪಾದನೆ ಸೆಪ್ಟೆಂಬರ್‌ನಲ್ಲಿ 34,295 ಆಗಿದ್ದರೆ, ಕಳೆದ ತಿಂಗಳು ಇದು 20,985 ಆಗಿತ್ತು.
ಆದಾಗ್ಯೂ ಮಾರುಕಟ್ಟೆ ಮಾರುತಿ ಸುಝುಕಿ ಕಾರುಗಳ ಮಾರಾಟ ತುಸು ಚೇತರಿಕೆ ಕಂಡಿದೆ. ಅಕ್ಟೋಬರ್‌ನಲ್ಲಿ 1,44,277 ಕಾರುಗಳ ಮಾರಾಟವಾಗಿದ್ದು, ಕಳೆದ ವರ್ಷ ಇದೇ ಅವಧಿಗಿಂತ ಶೇ.4.5 ಏರಿಕೆ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.