ರಿಯಾಯಿತಿ ಅನ್ವಯ: ಮಾರುತಿ ಸುಜುಕಿ ಕಾರು ಉತ್ಪಾದನೆ ಹೆಚ್ಚಳ
ಹಾಲಿ ಸಾಲಿನಲ್ಲಿ ಒಟ್ಟು 1,50,221 ವಾಹನಗಳನ್ನು ಉತ್ಪಾದಿಸಿದ್ದರೆ, ಕಳೆದ ವರ್ಷ 1,41, 834 ವಾಹನಗಳನ್ನು ಉತ್ಪಾದಿಸಿತ್ತು.
Team Udayavani, Dec 7, 2020, 1:17 PM IST
ನವದೆಹಲಿ: ದೇಶದ ಪ್ರಮುಖ ಕಾರು ಉತ್ಪಾದಕ ಸಂಸ್ಥೆ ಮಾರುತಿ ಸುಜುಕಿ ಕಳೆದ ತಿಂಗಳು ಉತ್ಪಾದನೆಯಲ್ಲಿ ಶೇ.6ರಷ್ಟು ಹೆಚ್ಚಿನ ಸಾಧನೆ ಮಾಡಿದೆ. 2019ರ ನವೆಂಬರ್‌ನಲ್ಲಿ ಉತ್ಪಾದಿಸಿದ್ದ ಕಾರುಗಳಿಂತ ಪ್ರಸಕ್ತ ವರ್ಷ ಕೊಂಚ ಹೆಚ್ಚಾಗಿದೆ.
ಹಾಲಿ ಸಾಲಿನಲ್ಲಿ ಒಟ್ಟು 1,50,221 ವಾಹನಗಳನ್ನು ಉತ್ಪಾದಿಸಿದ್ದರೆ, ಕಳೆದ ವರ್ಷ 1,41, 834 ವಾಹನಗಳನ್ನು ಉತ್ಪಾದಿಸಿತ್ತು. ಪ್ರಯಾಣಿಕ ವಾಹನಗಳ ವಿಭಾಗದಲ್ಲಿ ಕಂಪೆನಿ 1,46,577 ವಾಹನಗಳನ್ನು ಉತ್ಪಾದಿಸಿತ್ತು ಎಂದು ತಿಳಿಸಿದೆ.
65 ಸಾವಿರ ರೂ. ವರೆಗೆ ರಿಯಾಯಿತಿ: ಟಾಟಾ ಮೋಟರ್ಸ್ ವರ್ಷಾಂತ್ಯದ ಹಿನ್ನೆಲೆಯಲ್ಲಿ ಗ್ರಾಹಕ ರಿಗಾಗಿ 65 ಸಾವಿರ ರೂ.ಗಳ ವರೆಗೆ ರಿಯಾಯಿತಿ
ಪ್ರಕಟಿಸಿದೆ. ಬಿಎಸ್-6 ಮಾದರಿಯ ಆಯ್ದ ಕಾರುಗಳ ಮೇಲೆ ಈ ರಿಯಾಯಿತಿ ಅನ್ವಯವಾಗುತ್ತದೆ ಎಂದು ಸಂಸ್ಥೆ ತನ್ನ ವೆಬ್‌ಸೈಟ್‌ನಲ್ಲಿ ಹೇಳಿಕೊಂಡಿದೆ.
ಇದನ್ನೂ ಓದಿ:ಕ್ಯಾರೆಟ್ ವಿದ್ ಖರ್ಜೂರ ಜ್ಯೂಸ್…ಆರೋಗ್ಯವೃದ್ಧಿ ಜ್ಯೂಸ್
ಟಿಯಾಗೋ, ಟಿಗೋರ್, ನೆಕ್ಸಾನ್, ಹ್ಯಾರಿಯರ್ ರಿಯಾಯಿತಿ ವ್ಯಾಪ್ತಿಗೆ ಬರುತ್ತವೆ. ಈ ತಿಂಗಳ 1 ರಿಂದ ರಿಯಾಯಿತಿ ಶುರು ವಾಗಿದ್ದು, 31ರ ವರೆಗೆ ಲಭ್ಯವಿದೆ.
ನಿಯಮ ಒಪ್ಪದಿದ್ದರೆ ವಾಟ್ಸಾಪ್ ಡಿಲೀಟ್!
ನವದೆಹಲಿ:ಮುಂದಿನ ವರ್ಷ ವಾಟ್ಸಾಪ್ ತನ್ನ ಸೇವಾ ನಿಯಮಗಳಲ್ಲಿ ಬದಲಾವಣೆ ತರಲು ನಿರ್ಧರಿಸಿದ್ದು, “ನಿಯಮಗಳಿಗೆ ಒಪ್ಪಿಗೆ ಸೂಚಿಸದ’ ಬಳಕೆದಾರರ
ಖಾತೆಯನ್ನು ಡಿಲೀಟ್ ಮಾಡಲು ಸಂಸ್ಥೆ ಸೂಚಿಸಲಿದೆ.
ಪ್ರಸ್ತುತ ವಾಟ್ಸಾಪ್ ಡೌನ್‌ಲೋಡ್ ಮಾಡಿದಾಗ ಪ್ರತಿ ಬಳಕೆದಾರನಿಗೂ ಆರಂಭದಲ್ಲಿ “ಸ್ವಾಗತ’ಕೋರಿ, ಸೇವಾ ನಿಯಮಗಳನ್ನು ತಿಳಿಸಿ, “ಅಗ್ರೀ ಆ್ಯಂಡ್‌ಕಂಟಿನ್ಯೂ’ ಎಂಬ ಆಯ್ಕೆ ನೀಡಲಾಗುತ್ತಿದೆ. ಇದನ್ನುಕ್ಲಿಕ್ಕಿಸಿದರಷ್ಟೇ ವಾಟ್ಸಾಪ್ ನಲ್ಲಿ ಮುಂದುವರಿಯಲು ಅವಕಾಶ ಲಭಿಸುತ್ತಿದೆ.
ನಿಯಮ ಒಪ್ಪದಿದ್ದರೆ?: 2021ರ ಫೆ.8ರಿಂದ ವಾಟ್ಸಾಪ್ “ಅಗ್ರೀ’ ಅಥವಾ”ಡೋಂಟ್ ಅಗ್ರೀ’- ಈ ಎರಡೂ ಆಯ್ಕೆಗಳನ್ನೂ ಪರಿಚಯಿಸುತ್ತಿದೆ. “ಡೋಂಟ್ ಅಗ್ರೀ’ ಕ್ಲಿಕ್ಕಿಸುವ ಬಳಕೆದಾರರಿಗೆ ಸೆಟ್ಟಿಂಗ್ಸ್ ಮೂಲಕ ತಮ್ಮಖಾತೆಗಳನ್ನು ಶಾಶ್ವತವಾಗಿ ಡಿಲೀಟ್ ಮಾಡಲು ಸೂಚಿಸಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಿಲಯನ್ಸ್‌ನಿಂದ ‘ರಸ್‌ಕಿಕ್’ ಎನರ್ಜಿ ಡ್ರಿಂಕ್ ಬಿಡುಗಡೆ
Table Space: ಟೇಬಲ್ ಸ್ಪೇಸ್ ಸ್ಥಾಪಕ ಅಮಿತ್ ಬ್ಯಾನರ್ಜಿ ಹೃದಯಾಘಾತದಿಂದ ನಿಧನ
Stock Market: HMPV ಎಫೆಕ್ಟ್ – ಷೇರುಪೇಟೆ ಸೆನ್ಸೆ*ಕ್ಸ್ 1,000ಕ್ಕೂ ಅಧಿಕ ಅಂಕ ಕುಸಿತ!
2024ರಲ್ಲಿ ಆಟೋ ಮೊಬೈಲ್ ಕ್ಷೇತ್ರಕ್ಕೆ ಲಾಭ: ದಾಖಲೆ ಮಾರಾಟ
Share Market: ಹೊಸ ವರ್ಷದ ಮೊದಲ ದಿನ 368 ಅಂಕ ಏರಿದ ಸೆನ್ಸೆಕ್ಸ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…
Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್
540 ಅಡಿ ಆಳದ ಬೋರ್ವೆಲ್ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.