BS VI ಸ್ಟಾಂಡರ್ಡ್ ಮಾದರಿಯಲ್ಲಿ ಮಾರುತಿ ಹೊರತರುತ್ತಿರುವ ಕಾರುಗಳ ಮಾಹಿತಿ
Team Udayavani, Nov 22, 2019, 8:49 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಹೊಸದಿಲ್ಲಿ: ದೇಶದ ಪ್ರಮುಖ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ, ಬ್ರೆಜ್ಜಾ ಮತ್ತು ಎಸ್-ಕ್ರಾಸ್ ಮಾದರಿಯ ಕಾರುಗಳುನ್ನು ಅನ್ನು ಬಿಎಸ್-VI ಪೆಟ್ರೋಲ್ ಆವೃತ್ತಿಗೆ ಉನ್ನತೀಕರಿಸಿ ಮಾರುಕಟ್ಟೆಗೆ ಪರಿಚಯಿಸಲಿದೆ ಎಂದು ಕಂಪನಿ ಮೂಲಗಳು ತಿಳಿಸಿವೆ.
ನೂತನ ಭಾರತ್ ಸ್ಟೇಜ್-VI (ಬಿಎಸ್VI) ಇಂಧನ ಹೊರಸೂಸುವಿಕೆಯ ಮಾನದಂಡಗಳು 2020ರ ಏಪ್ರಿಲ್ 1ರಿಂದ ಜಾರಿಗೆ ಬರಲಿದ್ದು, ಈ ಹಿನ್ನಲೆ ಬಹುತೇಕ ಕಂಪನಿಗಳು ತಮ್ಮ ವಾಹನಗಳ ಇಂಧನ ಕಾರ್ಯಕ್ಷಮತೆ ತಂತ್ರಜ್ಞಾನವನ್ನು ಇದಕ್ಕೆ ಅನುಗುಣವಾಗಿ ಮೇಲ್ದರ್ಜೆಗೆ ಏರಿಸುತ್ತಿವೆ.
ಕಂಪನಿಯು ಶೀಘ್ರದಲ್ಲೇ ಬ್ರೆಜ್ಜಾ , ಎಸ್- ಕ್ರಾಸ್ ಮತ್ತು ಬಿಎಸ್ -VI ಸ್ಟಾಂಡರ್ಡ್ ಮಾದರಿಯ ವಾಹನಗಳನ್ನು ಬಿಎಸ್-6 ಪೆಟ್ರೋಲ್ ಆವೃತ್ತಿಯ ರೂಪಾಂತರದಲ್ಲಿ ಮಾರುಕಟ್ಟೆಗೆ ತರಲಿದ್ದು, ಹೊಗೆ ಹೊರಸೂಸುವಿಕೆಯ ನೂತನ ಮಾನದಂಡಗಳಿಗೆ ಅನುಗುಣವಾಗಿ ಕಾರುಗಳ ಇಂಧನ ಕಾರ್ಯಕ್ಷಮತೆಯನ್ನು ಉನ್ನತೀಕರಿಸಲಿದೆ.
2020ರ ಏಪ್ರಿಲ್ 1ರಿಂದ ಈ ನಿಯಮ ಜಾರಿಗೆ ಬರಲಿದ್ದು, ನಾಲ್ಕನೇ ತ್ತೈಮಾಸಿಕದಲ್ಲಿ (ಹಣಕಾಸು ವರ್ಷದ ಜನವರಿ- ಮಾರ್ಚ್) ಬಿಎಸ್ -6 ಪೆಟ್ರೋಲ್ ಶ್ರೇಣಿಯ ಬ್ರೆಜ್ಜಾ ಮತ್ತು ಎಸ್- ಕ್ರಾಸ್ ಅನ್ನು ಪರಿಚಯಿಸಲಿದ್ದೇವೆ ಎಂದು ಮಾರುತಿ ಸುಜುಕಿ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ ಶಶಾಂಕ್ ಶ್ರೀವಾಸ್ತವ ತಿಳಿಸಿದ್ದಾರೆ.
ಪ್ರಸ್ತುತ ಕಂಪನಿಯು ಬ್ರೆಜ್ಜಾ ಮತ್ತು ಎಸ್- ಕ್ರಾಸ್‌ನ ಡೀಸೆಲ್ ಶ್ರೇಣಿಯ ಕಾರುಗಳನ್ನು ಮಾತ್ರವೇ ಮಾರಾಟ ಮಾಡುತ್ತಿದ್ದು, ಮಾರುಕಟ್ಟೆ ಟ್ರೆಡಿಂಗ್ ಅನ್ನು ಗಮನದಲ್ಲಿ ಇರಿಸಿಕೊಂಡು ಬಿಎಸ್- VI ಮಾನದಂಡಗಳಿಗೆ ಅನುಗುಣವಾಗಿ ಮಾರುಕಟ್ಟೆಗೆ ಕಾರುಗಳು ಪರಿಚಯಿಸಲ್ಲಿದೆ ಎಂದು ಕಂಪನಿ ತಿಳಿಸಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.