ಬಂದಿದೆ ಹೊಸ ಎಂಜಿ ಹೆಕ್ಟರ್ ಎಲೆಕ್ಟ್ರಿಕ್ ಎಸ್‌ಯುವಿ
Team Udayavani, Dec 5, 2019, 4:51 PM IST
ಹೊಸದಿಲ್ಲಿ: ಭಾರತದ ಕಾರು ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಅಮೆರಿಕದ ಪ್ರಸಿದ್ಧ ಕಾರು ತಯಾರಿಕ ಕಂಪೆನಿ ಎಂಜಿ ಹೆಕ್ಟರ್ (ಮೋರಿಸ್ ಗ್ಯಾರೇಜಸ್) ಇದೀಗ ಭಾರತದಲ್ಲಿ ತನ್ನ ಮೊತ್ತ ಮೊದಲ ಎಲೆಕ್ಟ್ರಿಕ್ ಕಾರನ್ನು ಪರಿಚಯಿಸಿದೆ.
ಬದಲಾದ ಸಂದರ್ಭದಲ್ಲಿ ಭಾರತದಲ್ಲೂ ಎಲೆಕ್ಟ್ರಿಕ್ ಕಾರುಗಳ ಹವಾ ಶುರುವಾಗಿದ್ದು ಎಂಜಿ ಹೆಕ್ಟರ್ ಕೂಡ ಈ ದೃಷ್ಟಿಯಲ್ಲಿ ಇತರ ಪ್ರಸಿದ್ಧ ಕಾರು ತಯಾರಿಕೆ ಬ್ರ್ಯಾಂಡ್‌ಗಳಿಗೆ ಪೈಪೋಟಿ ನೀಡುವ ಉದ್ದೇಶವನ್ನು ಹೊಂದಿದೆ.
ಸದ್ಯ ಈ ಕಾರಿನ ಬಿಡಿಭಾಗಗಳನ್ನು ಆಮದು ಮಾಡಿ, ಭಾರತದಲ್ಲಿ ಜೋಡಿಸಲಾಗುತ್ತದೆ. ಎಂಜಿ ಹೆಕ್ಟರ್ ನೂತನ ಕಾರಿಗೆ ಝಡ್‌ಎಸ್ ಇವಿ ಎಂದು ಹೆಸರಿಟ್ಟಿದೆ.
ವಿಶೇಷತೆಗಳೇನು?
ಸಾಕಷ್ಟು ಐಷಾರಾಮಿ ಮತ್ತು ಅತಿ ಹೆಚ್ಚು ಫೀಚರ್‌ಗಳನ್ನು ಹೊಂದಿರುವ ಕಾರು ಇದು. 44.5 ಕಿ.ವ್ಯಾ. ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು ಸಿಂಗಲ್ ಚಾರ್ಜ್‌ಗೆ 340 ಕಿ.ಮೀ. ಕ್ರಮಿಸಲಿದೆ. ಲೀಥಿಯಂ ಅಯಾನ್ ಬ್ಯಾಟರಿ ಇದ್ದು, 50 ಕಿ.ವ್ಯಾ ಡಿಸಿ ಚಾರ್ಜರ್‌ನಲ್ಲಿ ಕೇವಲ 40 ನಿಮಿಷದಲ್ಲಿ ಶೇ.80ರಷ್ಟು ಚಾರ್ಜ್ ಆಗುವ ಸಾಮರ್ಥ್ಯ ಹೊಂದಿದೆ. 7.4 ಕಿ.ವ್ಯಾ.ನ ಸಾಮಾನ್ಯ ಚಾರ್ಜರ್ ಆದರೆ ಕಾರಿನ ಬ್ಯಾಟರಿ ಪೂರ್ಣ ಚಾರ್ಜ್ ಆಗಲು 7 ತಾಸು ತಗಲುತ್ತದೆ. ಕಾರಿನೊಂದಿಗೆ ಇದೇ ಚಾರ್ಜರ್ ಉಚಿತವಾಗಿ ಸಿಗುತ್ತದೆ. ಕಾರಿನ ಮೋಟಾರು 141 ಎಚ್‌ಪಿ ಸಾಮರ್ಥ್ಯದ್ದಾಗಿದ್ದು 353 ಎನ್‌ಎಂ ಟಾರ್ಕ್ ಹೊಂದಿದೆ. ಇದರೊಂದಿಗೆ 8 ಇಂಚಿನ ಇನ್ಫೋ ಎಂಟರ್‌ಟೈನ್‌ಮೆಂಟ್ ವ್ಯವಸ್ಥೆ, ಆ್ಯಪಲ್, ಆಂಡ್ರಾಯಿಡ್ ಅಟೋ (ಕಾರು ನಿಯಂತ್ರಣ ವ್ಯವಸ್ಥೆ), ಬ್ಲೂಟೂತ್, ಕೆಮರಾ ವ್ಯವಸ್ಥೆ, ಸನ್‌ರೂಫ್, ಏರ್‌ಫಿಲ್ಟರ್‌ಗಳನ್ನು ಕಾರು ಹೊಂದಿದೆ.
ಚಾರ್ಜಿಂಗ್ ಸ್ಟೇಷನ್
ಹೊಸ ಎಲೆಕ್ಟ್ರಿಕ್ ಕಾರು ಮಾರಾಟದೊಂದಿಗೆ ಎಂಜಿ ಹೆಕ್ಟರ್ ಕಂಪೆನಿ, ಈ ಕಾರು ಮಾರಾಟವಾಗುವ ಸ್ಥಳದಲ್ಲಿ 50 ಕಿ.ವ್ಯಾ. ಡಿಸಿ ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಲಿದೆ. ಈಗಾಗಲೇ ದೇಶದ ಐದು ನಗರಗಳಾದ ದಿಲ್ಲಿ, ಹೈದರಾಬಾದ್, ಮುಂಬಯಿ, ಬೆಂಗಳೂರು, ಅಹಮದಾಬಾದ್‌ಗಳ ಷೋರೂಂಗಳಲ್ಲಿ ಈ ಚಾರ್ಜಿಂಗ್ ಸ್ಟೇಷನ್‌ಗಳು ಲಭ್ಯವಿವೆ. ಮುಂದಿನ ಐದು ವರ್ಷಗಳಲ್ಲಿ ದೇಶದ ಮೆಟ್ರೋಗಳಲ್ಲಿ ಪ್ರತಿ 5 ಕಿ.ಮೀ.ಗೆ 1 ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸುವ ಗುರಿಯನ್ನೂ ಅದು ಹೊಂದಿದೆ. ಹೈವೇಯಲ್ಲಿ ಪ್ರತಿ 25 ಕಿ.ಮೀ.ಗೆ ಒಂದರಂತೆ ಚಾರ್ಜಿಂಗ್ ಸ್ಟೇಷನ್ ಸ್ಥಾಪಿಸಲಾಗುವುದು ಎಂದು ಅದು ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
GST: ಖರೀದಿ, ಮಾರಾಟ ದರದ ವ್ಯತ್ಯಾಸಕ್ಕಷ್ಟೇ 18% ಜಿಎಸ್‌ಟಿ
Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್ ಸಿಇಒ ಸುಂದರ್ ಪಿಚೈ
RBI:ಸಾಲ ಮನ್ನಾ ಸೇರಿ ಉಚಿತ ಕೊಡುಗೆ ಆತಂಕಕಾರಿ- ಆರ್‌ಬಿಐ
Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು
Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾವು, 20 ಮಂದಿ ರಕ್ಷಣೆ
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.