ಶಾಲೆ, ವೃತಿಪರ ಸಂಸ್ಥೆಗಳಿಗಾಗಿ ಎಂಟಿಎಲ್‌ನಿಂದ ಮೈಕ್ಲಾಸ್‌ ಪ್ಲ್ಯಾಟ್‌ಫಾರ್ಮ್


Team Udayavani, May 15, 2020, 7:23 AM IST

ಶಾಲೆ, ವೃತಿಪರ ಸಂಸ್ಥೆಗಳಿಗಾಗಿ ಎಂಟಿಎಲ್‌ನಿಂದ ಮೈಕ್ಲಾಸ್‌ ಪ್ಲ್ಯಾಟ್‌ಫಾರ್ಮ್

ಸಾಂದರ್ಭಿಕ ಚಿತ್ರ

ಮಣಿಪಾಲ: ಗೌತಮ್‌ ಪೈ ನೇತೃತ್ವದ ಮಣಿಪಾಲ ಸಮೂಹ ಸಂಸ್ಥೆಯ ಅಂಗಸಂಸ್ಥೆ ಯಾಗಿರುವ ಮಣಿಪಾಲ ಟೆಕ್ನಾಲಜೀಸ್‌ ಲಿಮಿಟೆಡ್‌(ಎಂಟಿಎಲ್‌) ತಂತ್ರಜ್ಞಾನ ಆಧಾರಿತ ಪ್ಲ್ರಾಟ್‌ಫಾರ್ಮ್ ಒಂದನ್ನು ಅಭಿವೃದ್ಧಿಪಡಿಸಿದೆ. ಪ್ರಾಥಮಿಕ ಶಾಲೆಗಳು ಮತ್ತು ವೃತ್ತಿಪರ ಕಲಿಕೆಗಾಗಿ “ಮೈಕ್ಲಾಸ್‌ (MiClass)’ ಎಂಬ ಈ ಪ್ಲ್ರಾಟ್‌ಫಾರ್ಮ್ ಶೈಕ್ಷಣಿಕ ಸಂಸ್ಥೆಗಳಿಗೆ ಮಾತ್ರವಲ್ಲದೆ ವಿದ್ಯಾರ್ಥಿಗಳ ಕಲಿಕೆಗೆ ಬಹಳಷ್ಟು ಸಹಕಾರಿಯಾಗಿದೆ. “ಮೈಕ್ಲಾಸ್‌’ ಪ್ರಾಥಮಿಕ ಆವೃತ್ತಿಯಲ್ಲಿ ಡಿಜಿಟಲ್‌ ಪಠ್ಯಗಳ ಅಳವಡಿಕೆ, ಪರೀಕ್ಷೆಗಳನ್ನು ನಡೆಸುವುದು ಮತ್ತು ವಿದ್ಯಾರ್ಥಿಗಳ ಬಗೆಗೆ ತಿಳಿದುಕೊಳ್ಳಲು ಶಿಕ್ಷಕರಿಗೆ ಸಹಕಾರಿಯಾಗಲಿದೆ. ಇನ್ನು ವೃತ್ತಿಪರ ವಿಭಾಗದ ಆವೃತ್ತಿ ಉನ್ನತ ಶಿಕ್ಷಣ ಮತ್ತು ಕೋಚಿಂಗ್‌ ಶಿಕ್ಷಣ ಸಂಸ್ಥೆಗಳಿಗೆ ಬೋಧನೆಗಳ ನೇರಪ್ರಸಾರ, ರೆಕಾರ್ಡಿಂಗ್‌ ಮಾಡಲಾದ ಆಡಿಯೋ, ವೀಡಿಯೋಗಳ ಸ್ಟ್ರೀಮಿಂಗ್‌ ಮತ್ತು ವಿದ್ಯಾರ್ಥಿಗಳ ಮೌಲ್ಯಮಾಪನಕ್ಕೆ ನೆರವಾಗಲಿದೆ.

ವಿದ್ಯಾರ್ಥಿಗಳು ಎಷ್ಟೇ ದೂರದಲ್ಲಿದ್ದರೂ ಇಂಟರ್‌ನೆಟ್‌ ಸಾಮರ್ಥ್ಯ ಕಡಿಮೆ ಇದ್ದರೂ ಅಥವಾ ಆಫ್‌ಲೈನ್‌ ಮೋಡ್‌ನ‌ಲ್ಲಿದ್ದರೂ ತಮ್ಮ ಅಧ್ಯಯನವನ್ನು “ಮೈಕ್ಲಾಸ್‌’ ಪ್ಲ್ರಾಟ್‌ಫಾರ್ಮ್ ಬಳಸಿ ಪೂರ್ಣಗೊಳಿಸಲು ಸಾಧ್ಯವಿದೆ. ಕೀನ್ಯಾದಲ್ಲಿ ಮೂರು ವರ್ಷಗಳಿಂದೀಚೆಗೆ 26 ಶಾಲೆಗಳ 2,50,000 ಲಕ್ಷ ವಿದ್ಯಾರ್ಥಿಗಳು, ಭಾರತದಲ್ಲಿ ವೃತ್ತಿಪರ ಶಿಕ್ಷಣ ಸಂಸ್ಥೆಯವರು ಈ ಪ್ಲ್ರಾಟ್‌ ಫಾರ್ಮ್ ಅನ್ನು ಯಶಸ್ವಿಯಾಗಿ ಬಳಸಿಕೊಳ್ಳುತ್ತಿದ್ದಾರೆ. “ಮೈಕ್ಲಾಸ್‌’ನ ಪ್ರಾಥಮಿಕ ಆವೃತ್ತಿಯ (Mi Class School) ಮೂಲಕ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಅಂದರೆ ಒಂದರಿಂದ ಹತ್ತನೇ ತರಗತಿ ವರೆಗಿನ ಕೆಟಿಬಿಎಸ್‌ ಪಠ್ಯಪುಸ್ತಕಗಳು ಅಥವಾ ಸಂಬಂಧಿಸಿದ ಪಠ್ಯಗಳನ್ನು ಡಿಜಿಟಲ್‌ ರೂಪದಲ್ಲಿ ಒದಗಿಸಬಹುದಾಗಿದೆ.

ವಿದ್ಯಾರ್ಥಿಗಳು ಪಠ್ಯಕ್ರಮಕ್ಕೆ ಅನುಸಾರವಾಗಿ ತಮ್ಮ ಮನೆ ಅಥವಾ ಹಾಸ್ಟೆಲ್‌ಗಳಲ್ಲಿಯೇ ಕುಳಿತು ಪ್ರತಿಯೊಂದು ಪಾಠವನ್ನು “ಮೈಕ್ಲಾಸ್‌’ ಪ್ಲ್ರಾಟ್‌ಫಾರ್ಮ್ ಬಳಸಿ ಓದಿಕೊಳ್ಳಬಹುದಾಗಿದೆ. ಅಲ್ಲದೆ ಶಿಕ್ಷಕರು ಪ್ರತಿಯೊಂದೂ ಪಾಠಕ್ಕೂ ಪ್ರಶ್ನೋತ್ತರಗಳನ್ನು ಸಿದ್ಧಪಡಿಸಿ ವಿದ್ಯಾರ್ಥಿಗಳಿಗೆ ಕಿರು ಅಭ್ಯಾಸಗಳನ್ನು ನಡೆಸಬಹುದಾಗಿದೆ. ಇದರಿಂದ ವಿದ್ಯಾರ್ಥಿಗಳು ತತ್‌ಕ್ಷಣ ಫಲಿತಾಂಶವನ್ನು ತಿಳಿದುಕೊಳ್ಳಬಹುದಾಗಿದೆ. ಇದರಿಂದ ಶಿಕ್ಷಕರಿಗೆ ಪ್ರತಿಯೋರ್ವ ವಿದ್ಯಾರ್ಥಿಯ ಕಲಿಕಾ ಪ್ರಗತಿಯ ಮೇಲೆ ನಿಗಾ ಇಡಲು ಅನುಕೂಲವಾಗಲಿದೆ. “ಮೈಕ್ಲಾಸ್‌’ನ್ನು ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ಸಿದ್ಧಪಡಿಸಲಾಗಿದೆ. ಇದೇ ವೇಳೆ ಶಾಲೆಗಳ ಅಗತ್ಯಕ್ಕನುಸಾರವಾಗಿ ಕನ್ನಡ, ಇಂಗ್ಲಿಷ್‌, ಹಿಂದಿ ಅಥವಾ ಇನ್ನಾವುದೇ ಭಾಷೆಯಲ್ಲಿ ವಿಷಯವನ್ನು ತಲುಪಿಸಲು “ಮೈಕ್ಲಾಸ್‌’ ಸನ್ನದ್ಧವಾಗುತ್ತಿದೆ. ವಿದ್ಯಾರ್ಥಿಗಳು ಈ ಪ್ಲ್ರಾಟ್‌ಫಾರ್ಮ್ ನ್ನು ಇಂಟರ್ನೆಟ್‌ ಸಂಪರ್ಕ ಹೊಂದಿರುವ ಸ್ಮಾರ್ಟ್‌ಪೋನ್‌, ಟ್ಯಾಬ್ಲೆಟ್‌, ಡೆಸ್ಕ್ ಟಾಪ್‌ಗ್ಳಲ್ಲಿ ಅಳವಡಿಸಿಕೊಳ್ಳಬಹುದಾಗಿದೆ.

ವೃತ್ತಿಪರ ಕಾಲೇಜುಗಳು ಮತ್ತು ಕೋಚಿಂಗ್‌ ಸಂಸ್ಥೆಗಳನ್ನು ಗಮನದಲ್ಲಿರಿಸಿಕೊಂಡು “ಮೈಕ್ಲಾಸ್‌’ ವೃತ್ತಿಪರ’ (MiClass Professional) ಆವೃತ್ತಿಯನ್ನು ರೂಪಿಸಲಾಗಿದೆ. ಈ ಪ್ಲ್ರಾಟ್‌ಫಾರ್ಮ್ ನಮೂಲಕ ಈ ಕಾಲೇಜುಗಳ ಪ್ರಾಧ್ಯಾಪಕರು ವಿದ್ಯಾರ್ಥಿಗಳಿಗೆ ಪಠ್ಯಕ್ರಮಕ್ಕನುಸಾರವಾಗಿ ನೇರವಾಗಿ ವಿಷಯಗಳನ್ನು ಬೋಧಿಸಬಹುದಲ್ಲದೆ ರೆಕಾರ್ಡ್‌ ಮಾಡಿ ಅಪ್ಲೋಡ್‌ ಮಾಡಬಹುದಾಗಿದೆ. ಜತೆಯಲ್ಲಿ ದೂರದಿಂದಲೇ ವಸ್ತುನಿಷ್ಠವಾಗಿ ಪ್ರಾಕ್ಟೀಸ್‌ ಟೆಸ್ಟ್‌ ಕೂಡ ನಡೆಸಬಹುದಾಗಿದೆ. ಪಠ್ಯ ವಿಷಯಕ್ಕೆ ಸಂಬಂಧಿಸಿದ ಯಾವುದೇ ಅನುಮಾನ ಅಥವಾ ಪ್ರಶ್ನೆಗಳಿಗೆ ನೇರವಾಗಿ ಪ್ರಾಧ್ಯಾಪಕರಿಂದ ಪರಿಹಾರ, ಉತ್ತರವನ್ನು ಪಡೆದುಕೊಳ್ಳಬಹುದು. ಭಾರತದ ಪ್ರಮುಖ IAS ಕೋಚಿಂಗ್‌ ಸಂಸ್ಥೆಯೊಂದು ಈಗಾಗಲೇ ದೇಶಾದ್ಯಾಂತ ತನ್ನ ವಿದ್ಯಾರ್ಥಿಗಳಿಗೆ ಬೋಧಿಸಲು ಈ ಪ್ಲ್ರಾಟ್‌ ಫಾರ್ಮ್ ನ್ನು ಬಳಸಿಕೊಳ್ಳುತ್ತಿದೆ.

“ಬ್ಯಾಂಡ್‌ವಿಡ್ತ್ ಕಾರಣದಿಂದಾಗಿ ಭಾರತದಲ್ಲಿ ಪೂರ್ಣ ಪ್ರಮಾಣದಲ್ಲಿ ಆನ್‌ಲೈನ್‌ ಶಿಕ್ಷಣ ವ್ಯವಸ್ಥೆ ಅಳವಡಿಸಲು ಶಿಕ್ಷಣ ಸಂಸ್ಥೆಗಳಿಗೆ ಸಾಧ್ಯವಾಗಿಲ್ಲ. ಇದನ್ನು ಪರಿಗಣಿಸಿ ಎಂಟಿಎಲ್‌ “ಮೈಕ್ಲಾಸ್‌’ ಪ್ಲ್ರಾಟ್‌ ಫಾರ್ಮ್ ಅಭಿವೃದ್ಧಿಪಡಿ ಸಿದೆ’ ಎನ್ನುತ್ತಾರೆ ಎಂಟಿಎಲ್‌ ನ ಡಿಜಿಟಲ್‌ ಸೊಲ್ಯೂಷನ್ಸ್‌ ಬ್ಯುಸಿನೆಸ್‌ನ ಉಪಾಧ್ಯಕ್ಷ ಗುರುಪ್ರಸಾದ್‌ ಕಾಮತ್‌. ಮಾಹಿತಿ, ಡೆಮೊಗಾಗಿ
miclasslearning.com ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

ಟಾಪ್ ನ್ಯೂಸ್

1-lll

Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ

ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

Yasin Malik

Yasin Malik ವಿಚಾರಣೆಗೆ ತಿಹಾರ್‌ ಜೈಲಿನಲ್ಲೇ ಕೋರ್ಟ್‌ ರೂಂ: ಸುಪ್ರೀಂ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

sensex

Sensex ಪತನ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

Nirmala Sitharaman: ಬ್ಯಾಂಕುಗಳು ಬಡ್ಡಿದರ ಕೈಗೆಟಕುವಂತೆ ಕ್ರಮ ಕೈಗೊಳ್ಳಬೇಕು

Nirmala Sitharaman: ಬ್ಯಾಂಕುಗಳು ಬಡ್ಡಿದರ ಕೈಗೆಟಕುವಂತೆ ಕ್ರಮ ಕೈಗೊಳ್ಳಬೇಕು

Stock Market: ಷೇರುಪೇಟೆ ಸೂಚ್ಯಂಕ 500ಕ್ಕೂ ಅಧಿಕ ಅಂಕ ಕುಸಿತ; 23,400ಕ್ಕೆ ಇಳಿದ ನಿಫ್ಟಿ

Stock Market: ಷೇರುಪೇಟೆ ಸೂಚ್ಯಂಕ 500ಕ್ಕೂ ಅಧಿಕ ಅಂಕ ಕುಸಿತ; 23,400ಕ್ಕೆ ಇಳಿದ ನಿಫ್ಟಿ

“Jiostar” new website live amid jio domain uproar!

Jio domain ಗಲಾಟೆ ನಡುವೆಯೇ “ಜಿಯೋಸ್ಟಾರ್‌’ ಹೊಸ ವೆಬ್‌ಸೈಟ್‌ ಪ್ರತ್ಯಕ್ಷ!

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-lll

Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ

ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

Yasin Malik

Yasin Malik ವಿಚಾರಣೆಗೆ ತಿಹಾರ್‌ ಜೈಲಿನಲ್ಲೇ ಕೋರ್ಟ್‌ ರೂಂ: ಸುಪ್ರೀಂ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

1-wqewe

Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.