ಕೋವಿಡ್ ಬಿಕ್ಕಟ್ಟಿನಲ್ಲೂ ಮೈಕ್ರೋಸಾಫ್ಟ್ ಉದ್ಯೋಗಿಗಳಿಗೆ ಸಿಗುತ್ತಿದೆ 1 ಲಕ್ಷ ರೂ.ಬೋನಸ್..!
Team Udayavani, Jul 15, 2021, 4:21 PM IST
ನವ ದೆಹಲಿ : ಕೋವಿಡ್ ಸಂಕಷ್ಟದ ಸ್ಥಿತಿಯ ಕಾರಣದಿಂದಾಗಿ ಉದ್ಯಮ ಕ್ಷೇತ್ರಗಳು ನಷ್ಟ ಅನುಭವಿಸಿವೆ. ನಿರುದ್ಯೋಗದ ಸಮಸ್ಯೆ ಮೂಟೆ ಕಟ್ಟಿಕೊಳ್ಳುತ್ತಿರುವ ಸಂದರ್ಭದ ಎದುರಾಗಿದೆ. ಒಂದಿಷ್ಟು ಮಮದಿ ಕೆಲಸದಲ್ಲಿದ್ದರೂ ಕಡಿಮೆ ಸಂಬಳಕ್ಕೆ ದುಡಿಯುವ ಪರಿಸ್ಥಿತಿಯನ್ನು ಕೋವಿಡ್ ತಂದೊಡ್ಡಿದೆ.
ಕಂಪೆನಿಗಳಲ್ಲಿ ವಾರ್ಷಿಕವಾಗಿ ಸಿಗುವ ಬೋನಸ್ ಹಾಗೂ ಇನ್ನಿತರೇ ಸೌಲಭ್ಯಗಳು ಈ ವರ್ಷ ಹೇಳಹೆಸರಿಲ್ಲದಂತಾಗಿದೆ. ಆದರೇ, ತಂತ್ರಜ್ಞಾನ ಕಂಪೆನಿಗಳ ದೈತ್ಯ ಎಂದೇ ಕರೆಸಿಕೊಳ್ಳುವ ಮೈಕ್ರೋಸಾಫ್ಟ್ ಉದ್ಯೋಗಿಗಳಿಗೆ ಈ ಕೋವಿಡ್ ನ ಬಿಕ್ಕಟ್ಟಿನ ಸಂದರ್ಭದಲ್ಲಿಯೂ ಬೋನಸ್ ನೀಡಿದೆ.
ಹೌದು, ತಂತ್ರಜ್ಞಾನ ಕ್ಷೇತ್ರಗಳಲ್ಲಿಯೇ ಬೃಹತ್ ಸಂಸ್ಥೆ ಎಂದು ಗುರುತಿಸಿಕೊಳ್ಳುವ ಮೈಕ್ರೋಸಾಫ್ಟ್, ತನ್ನ ಉದ್ಯೋಗಿಗಳಿಗೆ ಬಂಪರ್ ಬೋನಸ್ ನೀಡುವುದಕ್ಕೆ ಮುಂದಾಗಿದೆ. ತನ್ನ ನೌಕರರಿಗೆ ಒಂದು ಲಕ್ಷ ಬೋನಸ್ ನೀಡಲು ಸಂಸ್ಥೆ ನಿರ್ಧರಿಸಿದೆ ಎಂದು ದಿ ವರ್ಜ್ ವರದಿ ಮಾಡಿದೆ.
ಇದನ್ನೂ ಓದಿ : ಜು.21ರಂದು ಕೆಲವು ಶಾಸಕರೊಂದಿಗೆ ದೆಹಲಿಗೆ ಹೋಗುತ್ತೇನೆ: ರೇಣುಕಾಚಾರ್ಯ
ಕೋವಿಡ್ ಸೋಂಕಿನ ಕಾರಣದಿಂದಾಗಿ ವರ್ಕ್ ಫ್ರಂ ಹೋಂ ನಲ್ಲಿ ಕಾರ್ಯ ನಿರವಹಿಸುತ್ತಿರುವ ಉದ್ಯೋಗಿಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಮೈಕ್ರೋಸಾಫ್ಟ್ ಈ ನಿರ್ಧಾರಕ್ಕೆ ಬಂದಿದೆ ಎಂದು ವರದಿಯಾಗಿದೆ.
ಕೋವಿಡ್ ನಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ಉದ್ಯೋಗಿಗಳ ಮತ್ತು ಕಂಪನಿಯ ಮೌಲ್ಯಯುತ ಸಂಬಂಧವನ್ನು ಇರಿಸಿಕೊಳ್ಳುವ ಉದ್ದೇಶದಿಂದ ಈ ಬೋನಸ್ ನೀಡಲಾಗುತ್ತಿದೆ.
ಈ ಬೋನಸ್ ನೀಡುವುದರಿಂದ ಕಂಪನಿಗೆ ಸುಮಾರು 200 ಮಿಲಿಯನ್ ಡಾಲರ್ ಆರ್ಥಿಕ ವೆಚ್ಚ ಹೆಚ್ಚಾಗಲಿದೆ, ಆದರೆ ಉದ್ಯೋಗಿ ಮತ್ತು ಕಂಪನಿ ನಡುವಿನ ನಂಬಿಕೆ ಉಳಿಸಿಕೊಳ್ಳಲು, ಸಂಸ್ಥೆಗಾಗಿ ಶ್ರಮ ಪಡುತ್ತಿರುವು ಉದ್ಯೋಗಿಗಳಿಗೆ ಇದು ಅಗತ್ಯ ಎಂದು ಸಂಸ್ಥೆ ತಿಳಿಸಿರುವುದಾಗಿ ವರದಿಯಲ್ಲಿ ವಿವರಿಸಲಾಗಿದೆ.
ಇನ್ನು, ಈ ವರ್ಷದ ಮೊದಲ ತ್ರೈ ಮಾಸಿಕದ ಕೊನೆಯಾಗುವ ಸಂದರ್ಭದಲ್ಲಿ ಮೈಕ್ರೋಸಾಫ್ಟ್ 125 ಬಿಲಿಯನ್ ಡಾಲರ್ ಹೂಡಿಕೆ ಮಾಡಿದೆ. ಈ ಬೋನಸ್ ಕುರಿತು ಇತ್ತೀಚೆಗೆ ಪ್ರಕಟಿಸಿದ ಮೈಕ್ರೋಸಾಫ್ಟ್ ಸಿಪಿಒ, ಜುಲೈ ಮತ್ತು ಆಗಸ್ಟ್ ಒಳಗೆ ಕಂಪನಿಯ ಪ್ರಪಂಚದ ಎಲ್ಲ ಮೂಲೆಯಲ್ಲಿರುವ ಉದ್ಯೋಗಿಗಳಿಗೆ ಈ ಬೋನಸ್ ಕೈ ಸೇರಲಿದೆ ಎಂದು ಹೇಳಿದೆ.
31 ಮಾರ್ಚ್ 2021 ರ ಮೊದಲೇ ಕಾರ್ಪೊರೇಟ್ ಉಪಾಧ್ಯಕ್ಷನ ಕೆಳ ಹುದ್ದೆಗಳಿಗೆ ಸಂಸ್ಥೆಯಲ್ಲಿ ಉದ್ಯೋಗಕ್ಕೆ ಸೇರ್ಪಡೆಗೊಂಡ ಎಲ್ಲಾ ನೌಕರರಿಗೆ ಈ ಬೋನಸ್ ದೊರಕಲಿದೆ.
ಮೈಕ್ರೋಸಾಫ್ಟ್ ಸಂಸ್ಥೆಯಲ್ಲಿ ಸುಮಾರು 155,508 ಉದ್ಯೋಗಿಗಳು ಕಾರ್ಯ ನಿರ್ವಹಿಸುತ್ತಿದ್ದು, ಆಯಾಯ ಉದ್ಯೋಗಿಗಳ ಹುದ್ದೆಯ ಮಾನದಂಡವನ್ನು ಆಧಾರಿಸಿ ಈ ವಿಶೇಷ ಭತ್ಯೆ ಲಭಿಸಲಿದೆ.
ಇದನ್ನೂ ಓದಿ : ಭಾರತ ಮಹಿಳಾ ಕ್ರಿಕೆಟ್ ತಂಡದಲ್ಲಿ ‘ಸೈದ್ಧಾಂತಿಕ ಬದಲಾವಣೆ’ ಅಗತ್ಯವಿದೆ: ಕೋಚ್ ರಮೇಶ್ ಪೊವಾರ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.