ಡಿಜಿಟಲ್ ಜಪದ ಹೊರತಾಗಿಯೂ ನಗದೇ ರಾಜ !
ಎಟಿಎಂ ಮೂಲಕ ನಗದು ಹಿಂಪಡೆಯುವಿಕೆ, ವ್ಯವಹಾರ ಪ್ರಮಾಣ ಹೆಚ್ಚಳ
Team Udayavani, Dec 15, 2020, 6:15 AM IST
ಸಾಂದರ್ಭಿಕ ಚಿತ್ರ
ಅಪನಗದೀಕರಣ ಘೋಷಣೆಯಾಗಿ ನಾಲ್ಕು ವರ್ಷ ಪೂರ್ಣಗೊಂಡ ಬಳಿಕವೂ ನಗದಿನ ಕಡೆಗಿನ ಜನರ ಒಲವು ಕಡಿಮೆ ಯಾಗಿಲ್ಲ. ಕೇಂದ್ರ ಸರಕಾರ ಡಿಜಿಟಲ್ ವ್ಯವಹಾರಕ್ಕೆ ಹೆಚ್ಚಿನ ಉತ್ತೇಜನ ನೀಡುತ್ತಿದೆಯಾದರೂ ಜನರು ಮಾತ್ರ ಇನ್ನೂ ನಗದನ್ನೇ ತಮ್ಮ ವ್ಯವಹಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಅಪನಗದೀಕರಣ ಗೊಳ್ಳುವ ಮೊದಲು ಇದ್ದ ನಗದು ವಹಿವಾಟುಗಳಿಗೆ ಹೋಲಿಸಿದರೆ 2020ರಲ್ಲಿ ಶೇ. 45.7 ಹೆಚ್ಚಳ ಕಂಡು ಬಂದಿದೆ.
ಏನು ಕಾರಣ?
ಒಂದೆಡೆಯಿಂದ ಡಿಜಿಟಲ್ ಪಾವತಿಯ ಪ್ರಮಾಣವು ನಿಧಾನಗತಿಯಲ್ಲಿ ಏರಿಕೆಯನ್ನು ಕಾಣುತ್ತಿದೆಯಾದರೂ ನಿರೀಕ್ಷಿತ ಯಶಸ್ಸು ಲಭಿಸಿಲ್ಲ. ಹಿಂದಿನಿಂದಲೂ ಜನರು ಅದರಲ್ಲೂ ಅರೆಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳ ಜನರು ಇಂದಿಗೂ ತಮ್ಮ ಎಲ್ಲ ವ್ಯವಹಾರಗಳಿಗೆ ನಗದನ್ನೇ ಆಶ್ರಯಿಸಿರುವುದರಿಂದ ಒಟ್ಟಾರೆಯಾಗಿ ನಗದಿನ ಪ್ರಮಾಣ ಹೆಚ್ಚಾಗಿದೆ. ಇನ್ನು ಕೊರೊನಾ ಮತ್ತು ಈ ಹಿನ್ನೆಲೆಯಲ್ಲಿ ಜಾರಿಗೊಳಿಸಲಾದ ಲಾಕ್‌ಡೌನ್‌ನ ಹಿನ್ನೆಲೆಯಲ್ಲಿ ಸಾರ್ವಜನಿಕರು ಎಟಿಎಂಗಳಿಂದ ನಗದು ಹಿಂಪಡೆಯುವುದಕ್ಕೆ ಮುಗಿಬಿದ್ದಿದ್ದರಿಂದ ಈ ಬೆಳವಣಿಗೆ ಆಗಿದೆ. ದಿನಬಳಕೆ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗಾಗಿ ಜನರು ನಗದು ಡ್ರಾ ಮಾಡಿಟ್ಟುಕೊಂಡಿದ್ದರು. ಇನ್ನು ಯುಪಿಐ ಅಥವಾ ಪಿಒಎಸ್ ಮೂಲಕ ಶಾಪಿಂಗ್ ಮಾಡುವವರ ಸಂಖ್ಯೆಯೂ ಕಡಿಮೆಯಾಗಿದೆ. ಇದಕ್ಕೆ ಲಾಕ್‌ಡೌನ್ ಅವಧಿಯಲ್ಲಿ ಅಂಗಡಿಗಳು ಮುಚ್ಚಿದ್ದು ಕಾರಣ ಎಂದು ಹೇಳಲಾಗುತ್ತದೆ. ಸಣ್ಣ ಮೊತ್ತದ ವ್ಯವಹಾರಗಳಲ್ಲಿ ಜನರು ಡಿಜಿಟಲ್ ಪಾವತಿಗೆ ಆದ್ಯತೆ ನೀಡುತ್ತಿದ್ದರೆ ದೊಡ್ಡ ಮೊತ್ತದ ವ್ಯವಹಾರ ನಡೆಸುವ ಸಂದರ್ಭದಲ್ಲಿ ನಗದಿಗೇ ಒತ್ತು ನೀಡುತ್ತಿದ್ದಾರೆ. ತೆರಿಗೆ ಹೊರೆಯಿಂದ ತಪ್ಪಿಸಿಕೊಳ್ಳುವುದೇ ಇದರ ಹಿಂದಿನ ಕಾರಣ ಎಂಬುದು ಆರ್ಥಿಕ ತಜ್ಞರ ವಿಶ್ಲೇಷಣೆ.
2020ರಲ್ಲಿ 26.19 ಲಕ್ಷ
2020ರ ಅಕ್ಟೋಬರ್ 23ಕ್ಕೆ ಜನರ ಬಳಿ 26.19 ಲಕ್ಷ ಕೋಟಿ ರೂ. ಕರೆನ್ಸಿ ಇತ್ತು. ಅದೇ 4 ವರ್ಷಗಳ ಹಿಂದೆ 2016ರ ನವೆಂಬರ್ 4ರಲ್ಲಿ 8.22 ಲಕ್ಷ ಕೋಟಿ ರೂ. ಮಾತ್ರ ಇತ್ತು. ಅಂದರೆ ಜನರ ಬಳಿ ಇದ್ದ ನಗದು ಪ್ರಮಾಣದಲ್ಲಿ ಶೇ.45.7ರಷ್ಟು ಏರಿಕೆಯಾಗಿದೆ.
7.8 ಲಕ್ಷ ಕೋಟಿಗೆ ಇಳಿಕೆ
ಅಪನಗದೀಕರಣದ ಪರಿಣಾಮವಾಗಿ 2017ರ ಜನವರಿಯಲ್ಲಿ ಜನರ ಬಳಿ ಇದ್ದ ನಗದು 7.8 ಲಕ್ಷ ಕೋಟಿ ರೂ.ಗಳಿಗೆ ಇಳಿಕೆಯಾಯಿತು. ಇದೀಗ ಒಟ್ಟಾರೆ ವ್ಯವಹಾರದಲ್ಲಿ ನಗದು ನಿಧಾನಕ್ಕೆ ಏರಿಕೆ ಯಾಗುತ್ತಾ ಇದೆ. ಜನರು ನಗದು ಬಳಕೆ ಯನ್ನು ಕಡಿಮೆ ಮಾಡಲು ಸರಕಾರ ಮತ್ತು ಆರ್‌ಬಿಐ ನಾನಾ ಕ್ರಮ ಗಳನ್ನು ಕೈಗೊಂಡು ಡಿಜಿಟಲ್ ವ್ಯವಹಾರಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಅದರಂತೆ ಡಿಜಿಟಲ್ ಪಾವತಿ ಹೆಚ್ಚಿಸಲು ವಿವಿಧ ವ್ಯವಹಾರಗಳಲ್ಲಿ ನಗದು ಬಳಕೆಗೆ ನಿರ್ಬಂಧ ಹೇರಲಾಗಿದೆಯಾದರೂ ಇದು ಅಂತಹ ಪರಿಣಾಮ ಬೀರಿಲ್ಲ. ಕಳೆದ ಹತ್ತು ತಿಂಗಳುಗಳಲ್ಲಿ ನಗದು ಬಳಕೆ ಪ್ರಮಾಣ ತೀವ್ರ ಏರಿಕೆಯಾಗಿದೆ. 2020ರ ಜ. 3ರಲ್ಲಿ 21.79 ಲಕ್ಷ ಕೋಟಿ ರೂ. ಇದ್ದ ನಗದು, ಅ.23ಕ್ಕೆ 26.19 ಲಕ್ಷ ಕೋಟಿ ರೂ.ಗಳಿಗೆ ಹೆಚ್ಚಿದೆ.
ಡಿಜಿಟಲ್ ಪಾವತಿ ಮೊತ್ತ, ಪ್ರಮಾಣ ಹೆಚ್ಚಳ
ಆರ್‌ಬಿಐ ಪ್ರಕಾರ ಡಿಜಿಟಲ್ ಪಾವತಿಯ ಮೊತ್ತ ಹಾಗೂ ಪ್ರಮಾಣಗಳೆರಡೂ ಹೆಚ್ಚಾಗಿದೆ. ಎಟಿಎಂ ಮೂಲಕ ನಗದು ಹಿಂಪಡೆಯುವಿಕೆ ಸ್ಥಿರವಾಗಿ ಹೆಚ್ಚಾಗುತ್ತಲೇ ಇದೆ. ಜನವರಿ 2017ರಲ್ಲಿ ಡೆಬಿಟ್ ಕಾರ್ಡ್ ವ್ಯವಹಾರ ಎಟಿಎಂ ಮತ್ತು ಪಿಒಎಸ್ ಹಿಂಪಡೆಯುವಿಕೆ 2,00,648 ಕೋಟಿ ರೂ.ಗಳಾಗಿದ್ದರೆ, 2020ರ ಆಗಸ್ಟ್ ವೇಳೆಗೆ ಅದು 2,37,778 ಕೋಟಿ ರೂ. ಗಳಿಗೆ ಹೆಚ್ಚಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಿಲಯನ್ಸ್‌ನಿಂದ ‘ರಸ್‌ಕಿಕ್’ ಎನರ್ಜಿ ಡ್ರಿಂಕ್ ಬಿಡುಗಡೆ
Table Space: ಟೇಬಲ್ ಸ್ಪೇಸ್ ಸ್ಥಾಪಕ ಅಮಿತ್ ಬ್ಯಾನರ್ಜಿ ಹೃದಯಾಘಾತದಿಂದ ನಿಧನ
Stock Market: HMPV ಎಫೆಕ್ಟ್ – ಷೇರುಪೇಟೆ ಸೆನ್ಸೆ*ಕ್ಸ್ 1,000ಕ್ಕೂ ಅಧಿಕ ಅಂಕ ಕುಸಿತ!
2024ರಲ್ಲಿ ಆಟೋ ಮೊಬೈಲ್ ಕ್ಷೇತ್ರಕ್ಕೆ ಲಾಭ: ದಾಖಲೆ ಮಾರಾಟ
Share Market: ಹೊಸ ವರ್ಷದ ಮೊದಲ ದಿನ 368 ಅಂಕ ಏರಿದ ಸೆನ್ಸೆಕ್ಸ್
MUST WATCH
ಹೊಸ ಸೇರ್ಪಡೆ
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!
Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.