ನೋಟು ಅಮಾನ್ಯ, GST ಚೇತರಿಕೆ; ಭಾರತದ ಜಿಡಿಪಿ ಶೇ.7.6: Moody’s
Team Udayavani, Feb 28, 2018, 12:16 PM IST
ಹೊಸದಿಲ್ಲಿ : ಭಾರತ 2018ರ ಕ್ಯಾಲೆಂಡರ್ ವರ್ಷದಲ್ಲೇ 7.6ರ ದರದಲ್ಲಿ ಜಿಡಿಪಿ ಪ್ರಗತಿ ಸಾಧಿಸಲಿದೆ ಎಂದು ಪ್ರಖ್ಯಾತ ಮೂಡೀಸ್ ಇನ್‌ವೆಸ್ಟರ್ ಸರ್ವೀಸ್ ಇಂದು ಹೇಳಿದೆ.
ನೋಟು ಅಮಾನ್ಯ ಮತ್ತು ಜಿಎಸ್‌ಟಿಯಿಂದಾಗಿ ಉಂಟಾಗಿದ್ದ ಅಡಚಣೆಗಳು ಮತ್ತು ನೇತ್ಯಾತ್ಮಕ ಪರಿಣಾಮಗಳಿಂದ ಭಾರತದ ಆರ್ಥಿಕತೆ ಹೊರಬರುತ್ತಿದೆ. ಹಾಗಾಗಿ ಜಿಡಿಪಿಯಲ್ಲಿ ಬೆಳವಣಿಗೆ ಕಂಡು ಬರುತ್ತಿದೆ ಎಂದು ಮೂಡೀಸ್ ಹೇಳಿದೆ.
ಮೂಡೀಸ್ ಪ್ರಕಟಿಸಿರುವ 2018 ಮತ್ತು 2019ರ ಜಾಗತಿಕ ಆರ್ಥಿಕ ಭವಿಷ್ಯದಲ್ಲಿ ಈ ವರ್ಷ ಎಪ್ರಿಲ್ 1ರಿಂದ ಜಾರಿಗೆ ಬರುವ (2018-19) ಬಜೆಟ್, ದೇಶದ ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸಲಿದೆ ಎಂದು ಹೇಳಿದೆ. 500 ಮತ್ತು 1,000 ರೂ. ನೋಟು ಅಮಾನ್ಯದಿಂದಾಗಿ ಭಾರತದ ಗ್ರಾಮೀಣ ಆರ್ಥಿಕತೆಯ ಮೇಲೆ ಭಾರೀ ಹೊಡೆತ ಬಿದ್ದಿತ್ತು ಎಂದು ಅದು ನೆನಪಿಸಿಕೊಟ್ಟಿದೆ.
2018ರ ಕ್ಯಾಲೆಂಡರ್ ವರ್ಷದಲ್ಲಿ ಭಾರತದ ಜಿಡಿಪಿ ಶೇ.7.6 ಆಗಲಿದೆ ಮತ್ತು 2019ರಲ್ಲಿ ಇದು ಶೇ.7.5 ಆಗಲಿದೆ ಎಂದು ಮೂಡೀಸ್ ಹೇಳಿದೆ.
ವಿಶ್ವದ ಉದಯೋನ್ಮುಖ ಆರ್ಥಿಕ ರಾಷ್ಟ್ರಗಳ ಪೈಕಿ ಭಾರತ ಮತ್ತು ಇಂಡೋನೇಶ್ಯದ ಆರ್ಥಿಕ ಪ್ರಗತಿಯ ಅಂದಾಜನ್ನು ನಾವು ಯಾವುದೇ ಬದಲಾವಣೆ ಮಾಡದೆ ಹಾಗೆಯೇ ಉಳಿಸಿಕೊಂಡಿದ್ದೇವೆ ಎಂದು ಮೂಡೀಸ್ ಹೇಳಿದೆ.
ಕಳೆದ ವರ್ಷ ನವೆಂಬರ್‌ಲ್ಲಿ ಮೂಡೀಸ್, ಭಾರತದ ಸೊವರೀನ್ ರೇಟಿಂಗನ್ನು ಕಳೆದ 13 ವರ್ಷಗಳಲ್ಲೇ ಮೊದಲ ಬಾರಿಗೆ ಏರಿಸಿತ್ತು. ಭಾರತ ಸರಕಾರ ಕೈಗೊಂಡಿರುವ ಹಲವಾರು ಆರ್ಥಿಕ ಮತ್ತು ಸಾಂಸ್ಥಿಕ ಸುಧಾರಣೆಗಳ ಫಲವಾಗಿ ಪ್ರಗತಿಯ ಸಾಧ್ಯತೆಗಳು ಸುಧಾರಿಸುತ್ತಿವೆ ಎಂದು ಅದು ಹೇಳಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.