ಮಾರಾಟದ ಒತ್ತಡ : ಮುಂಬಯಿ ಶೇರು ಪೇಟೆಗೆ 222 ಅಂಕ ನಷ್ಟ
Team Udayavani, Mar 22, 2017, 11:03 AM IST
ಮುಂಬಯಿ : ಫಾರ್ಮಾ, ಆಟೋ ಮತ್ತು ತೈಲ ಕ್ಷೇತ್ರದ ಶೇರುಗಳು ದೊಡ್ಡ ಮಟ್ಟದಲ್ಲಿ ಮಾರಾಟದ ಒತ್ತಡಕ್ಕೆ ಗುರಿಯಾದ ಪ್ರಯುಕ್ತ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಬುಧವಾರದ ಆರಂಭಿಕ ವಹಿವಾಟಿನಲ್ಲಿ 222 ಅಂಕಗಳ ನಷ್ಟಕ್ಕೆ ಗುರಿಯಾಯಿತು.
ಬೆಳಗ್ಗೆ 11 ಗಂಟೆಯ ಹೊತ್ತಿಗೆ ಸೆನ್ಸೆಕ್ಸ್ 234.40 ಅಂಕಗಳ ನಷ್ಟದೊಂದಿಗೆ 29,251.05 ಅಂಕಗಳ ಮಟ್ಟದಲ್ಲೂ, ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 77.70 ಅಂಕಗಳ ನಷ್ಟದೊಂದಿಗೆ 9,043.80 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಇಂದು ಬುಧವಾರ ನಿರಂತರ ಮೂರನೇ ದಿನ ನಷ್ಟವನ್ನು ಕಂಡಿರುವ ಮುಂಬಯಿ ಶೇರು ಪೇಟೆಗೆ, ಉತ್ತರ ಕೊರಿಯದ ಕ್ಷಿಪಣಿ ಪರೀಕ್ಷೆ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ತೆರಿಗೆ ಭರವಸೆಗಳ ಬಗ್ಗೆ ಕಳವಳ ಉಂಟಾಗಿರುವುದೇ ಹಿನ್ನಡೆಗೆ ಕಾರಣ ಎನ್ನಲಾಗಿದೆ.
ನಿನ್ನೆ ಮಂಗಳವಾರ ಅಮೆರಿಕನ್ ಶೇರು ಪೇಟೆ ಕುಸಿತ ಕಂಡಿರುವುದನ್ನು ಅನುಸರಿಸಿ ಇಂದು ಏಶ್ಯನ್ ಶೇರು ಪೇಟೆಗಳಲ್ಲಿ ದೌರ್ಬಲ್ಯದ ಪ್ರವೃತ್ತಿ ತೋರಿ ಬಂತು. ಹಾಂಕಾಂಗ್ನ ಹ್ಯಾಂಗ್ಸೆಂಗ್ ಶೇ.1.39, ಶಾಂಘೈ ಕಾಂಪೋಸಿಟ್ ಇಂಡೆಕ್ಸ್ ಶೇ.0.77 ಮತ್ತು ಜಪಾನಿನ ನಿಕ್ಕಿ ಶೇ.2.01ರಷ್ಟು ಇಂದಿನ ಆರಂಭಿಕ ವಹಿವಾಟಿನಲ್ಲಿ ಕುಸಿದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kitchen appliance: ಬಜಾಜ್ ನಿಂದ ಅಡುಗೆ ಮನೆಗೆ ಬಂತು ಮತ್ತೊಂದು ಸಾಧನ!
ರಿಲಯನ್ಸ್ನಿಂದ ‘ರಸ್ಕಿಕ್’ ಎನರ್ಜಿ ಡ್ರಿಂಕ್ ಬಿಡುಗಡೆ
Table Space: ಟೇಬಲ್ ಸ್ಪೇಸ್ ಸ್ಥಾಪಕ ಅಮಿತ್ ಬ್ಯಾನರ್ಜಿ ಹೃದಯಾಘಾತದಿಂದ ನಿಧನ
Stock Market: HMPV ಎಫೆಕ್ಟ್ – ಷೇರುಪೇಟೆ ಸೆನ್ಸೆ*ಕ್ಸ್ 1,000ಕ್ಕೂ ಅಧಿಕ ಅಂಕ ಕುಸಿತ!
2024ರಲ್ಲಿ ಆಟೋ ಮೊಬೈಲ್ ಕ್ಷೇತ್ರಕ್ಕೆ ಲಾಭ: ದಾಖಲೆ ಮಾರಾಟ
MUST WATCH
ಹೊಸ ಸೇರ್ಪಡೆ
Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು
Bengaluru: 7 ಮದುವೆ ಮುಚ್ಚಿಟ್ಟು 8ನೇ ಮದುವೆಯಾಗಿ ಪತಿಗೆ ವಂಚನೆ!
Udupi: 2024ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆ
RenukaswamyCase: ದರ್ಶನ್ ಸೇರಿ ಎಲ್ಲಾ ಆರೋಪಿಗಳು ಕೋರ್ಟ್ಗೆ ಹಾಜರು; ವಿಚಾರಣೆ ಮುಂದೂಡಿಕೆ
Bengaluru: ಮಲಗಿದ ನಾಯಿ ಮೇಲೆ ಕಾರು ಹತ್ತಿಸಿದ ಚಾಲಕ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.