ಸುಪ್ರೀಂ ಗೆ ಬ್ಯಾಂಕ್ ಸಾಲ ಸುಸ್ತಿಗಾರರ ಪಟ್ಟಿ; ಹೆಸರು ಬಹಿರಂಗ ಇಲ್ಲ
Team Udayavani, Apr 18, 2017, 3:52 PM IST
ಹೊಸದಿಲ್ಲಿ : ಪ್ರತೀ ಬ್ಯಾಂಕಿಗೆ 500 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಸಾಲವನ್ನು ಬಾಕಿ ಇಟ್ಟಿರುವ ಎಲ್ಲ ಕಾರ್ಪೊರೇಟ್ ಸಂಸ್ಥೆಗಳ ಹೆಸರುಗಳಿರುವ ಪಟ್ಟಿಯನ್ನು ಪ್ರಧಾನಿ ನರೇಂದ್ರ ಮೋದಿ ಸರಕಾರ ಸುಪ್ರೀಂ ಕೋರ್ಟಿಗೆ ಎ.17ರಂದು ಸಲ್ಲಿಸಿದೆ. ಆದರೆ ಪಟ್ಟಿಯಲ್ಲಿನ ಕಂಪೆನಿಗಳ ಹೆಸರುಗಳನ್ನು ಮೋದಿ ಸರಕಾರ ಬಹಿರಂಗಪಡಿಸಿಲ್ಲ.
ಕೋಟಿಗಟ್ಟಲೆ ಬ್ಯಾಂಕ್ ಸಾಲ ಮೊತ್ತವನ್ನು ಮರುಪಾವತಿಸದೆ ಬಾಕಿ ಇಟ್ಟಿರುವ ಕಂಪೆನಿಗಳ ಹೆಸರನ್ನು ಒಳಗೊಂಡ ಪಟ್ಟಿಯನ್ನು ಮೋದಿ ಸರಕಾರ ಅತ್ಯಂತ ರಹಸ್ಯಾತ್ಮಕವಾಗಿ ಸುಪ್ರೀಂ ಕೋರ್ಟಿಗೆ ಸಲ್ಲಿಸಿದೆ. ಇದಲ್ಲದೆ ಇನ್ನೂ 7,000ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಕನಿಷ್ಠ ತಲಾ ಐದು ಲಕ್ಷಕ್ಕೂ ಅಧಿಕ ಮೊತ್ತದ ಸಾಲವನ್ನು ಬಾಕಿ ಇರಿಸಿರುವ ಕಂಪೆನಿಗಳ ಹೆಸರುಗಳನ್ನು ಕೂಡ ಕೋರ್ಟಿಗೆ ಸಲ್ಲಿಸಿದೆ.
ರಿಸರ್ವ್ ಬ್ಯಾಂಕ್ ಸಲಹೆಯ ಪ್ರಕಾರ, ದೇಶದ ಆರ್ಥಿಕ ಹಿತಾಸಕ್ತಿಯಲ್ಲಿ, ಬ್ಯಾಂಕ್ ಸಾಲ ಸುಸ್ತಿಗಾರ ಕಂಪೆನಿಗಳ ಹೆಸರುಗಳನ್ನು ಸರಕಾರ ಬಹಿರಂಗಪಡಿಸಿಲ್ಲ ಎಂದು ಮೂಲಗಳು ಹೇಳಿವೆ.
ಬ್ಯಾಂಕ್ ಸಾಲ ಸುಸ್ತಿಗಾರ ಕಂಪೆನಿಗಳ ಹೆಸರುಗಳ ಪಟ್ಟಿಯನ್ನು ತನಗೆ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಈ ವರ್ಷ ಜನವರಿಯಲ್ಲಿ ಕೇಂದ್ರ ಸರಕಾರಕ್ಕೆ ಆದೇಶ ನೀಡಿತ್ತು. ಆ ಪ್ರಕಾರ ಕೇಂದ್ರ ಹಣಕಾಸು ಸಚಿವಾಲಯವು ಅಫಿದಾವಿತ್ ಮೂಲಕ ಬ್ಯಾಂಕ್ ಸಾಲ ಸುಸ್ತಿಗಾರ ಕಂಪೆನಿಗಳ ಹೆಸರುಗಳುಳ್ಳ ಪಟ್ಟಿಯನ್ನು ಮುಚ್ಚಿದ ಲಕೋಟೆಯಲ್ಲಿ ಇರಿಸಿ ಸುಪ್ರೀಂ ಕೋರ್ಟಿಗೆ ಸಲ್ಲಿಸಿರುವುದಾಗಿ ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jio domain ಗಲಾಟೆ ನಡುವೆಯೇ “ಜಿಯೋಸ್ಟಾರ್’ ಹೊಸ ವೆಬ್‌ಸೈಟ್ ಪ್ರತ್ಯಕ್ಷ!
Haldiram ಭುಜಿಯಾವಾಲಾದಲ್ಲಿ ₹235 ಕೋಟಿ ಹೂಡಿಕೆ ಮಾಡಿದ ಭಾರತ್ ವ್ಯಾಲ್ಯು ಫಂಡ್
Gold Rates:ಡಾಲರ್ ಬೆಲೆ ಏರಿಕೆ-18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?
Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….
Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ
MUST WATCH
ಹೊಸ ಸೇರ್ಪಡೆ
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Maharashtra Election: ಬೂತ್ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.