ರಾಷ್ಟ್ರಮಟ್ಟದ ಕರಕುಶಲ ಮಹಾ ಕುಂಭಮೇಳಕ್ಕೆ ಚಾಲನೆ
Team Udayavani, Feb 12, 2018, 3:42 PM IST
ಸಿದ್ಧಗಿರಿ (ಕೊಲ್ಹಾಪುರ): ನಗರದಲ್ಲಿ ಆಯೋಜಿಸಿರುವ ರಾಷ್ಟ್ರಮಟ್ಟದ ಕರಕುಶಲ ಮಹಾ ಕುಂಭಮೇಳಕ್ಕೆ ಭಾನುವಾರ ಚಾಲನೆ ನೀಡಲಾಯಿತು. ಮೇಳದಲ್ಲಿ ದೇಶದ ವಿವಿಧೆಡೆಯ 120ಕ್ಕೂ ಅಧಿಕ ಕರಕುಶಲಕರ್ಮಿಗಳು ತಮ್ಮ ಉತ್ಪನ್ನ ಹಾಗೂ ಪ್ರತಿಭಾ ಕೌಶಲ ಪ್ರದರ್ಶಿಸಿದರು.
ಬೆಳಗ್ಗೆ ನಡೆದ ಶೋಭಾಯಾತ್ರೆಗೆ ಉತ್ತರ ಪ್ರದೇಶದ ರಾಯಬರೇಲಿ ರಾಜಮನೆತನದ ಕೌಶಲೇಂದ್ರ ಸಿಂಹ ಅವರು ಚಾಲನೆ ನೀಡಿದರು. ಸಿದ್ಧಗಿರಿ ಕರಕುಶಲ ತರಬೇತಿ ಕೇಂದ್ರವನ್ನು ಗುಜರಾತ್‌ನ ಸ್ವಾಮಿ ನಾರಾಯಣ ಸಂಸ್ಥೆಯ ತ್ಯಾಗವಲ್ಲಭದಾತ್ ಅವರು ಉದ್ಘಾಟಿಸಿದರು. ಮಹಾಕುಂಭ ಮೇಳವನ್ನು ಕೇಂದ್ರ ಕೃಷಿ ಸಹಾಯಕ ಸಚಿವೆ ಕೃಷ್ಣಾ ರಾಜಾಜಿ ಉದ್ಘಾಟಿಸಿದರು. ಆಹಾರ ಮೇಳವನ್ನು ಮಹಾರಾಷ್ಟ್ರದ ಗೃಹ ಹಾಗೂ ಹಣಕಾಸು ಸಚಿವ ದೀಪಕಭಾಯಿ ಕೇಸರಕರ ಉದ್ಘಾಟಿಸಿದರು.
ಮಹಾರಾಷ್ಟ್ರದ ಕಂದಾಯ ಮತ್ತು ಮೂಲಭೂತ ಸೌಕರ್ಯ ಸಚಿವ ಚಂದ್ರಕಾಂತ ದಾದಾಪಾಟೀಲ ಸೇರಿ ಅನೇಕರಿದ್ದರು. ಕಾಡಸಿದ್ದೇಶ್ವರ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸುಮಾರು 120 ಬಗೆಯ ದೋಸೆ, ಮಧುಮೇಹಿಗಳಿಗೆ ಪೂರಕವಾಗುವ ಸಿರಿಧಾನ್ಯಗಳಿಂದ ತಯಾರಿಸಿದ ಉಪಾಹಾರ ಮತ್ತು ಊಟ, ಸುಮಾರು 140ಕ್ಕೂ ಅಧಿಕ ಪ್ರಕಾರದ ಪೊರಕೆ ಸೇರಿ ಇನ್ನಿತರೆ ಉತ್ಪನ್ನಗಳು ಗಮನ ಸೆಳೆಯುತ್ತಿವೆ. ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಹಸು ಮತ್ತು ಹೋರಿಗಳ ಪ್ರದರ್ಶನವೂ ಗಮನ ಸೆಳೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Arrested: ಉಸಿರುಗಟ್ಟಿಸಿ ಪತ್ನಿಯ ಕೊಂದು ಮಗುವಿನ ಜೊತೆಗೆ ಪತಿ ಪರಾರಿ
Kadalekai Parishe: ಇಂದಿನಿಂದ ಬಸವನಗುಡಿ ಕಡಲೆಕಾಯಿ ಪರಿಷೆ
Parliament Winter Session: ಇಂದಿನಿಂದ ಸಂಸತ್ ಅಧಿವೇಶನ.. ವಕ್ಫ್ ಸೇರಿ 16 ಮಸೂದೆ ಮಂಡನೆ?
Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ
Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.