ಕೇಂದ್ರದ ಕಾನೂನು ವೆಚ್ಚ ಮತ್ತಷ್ಟು ಹೆಚ್ಚಳ
Team Udayavani, May 7, 2018, 8:40 AM IST
ಹೊಸದಿಲ್ಲಿ : ಕಾನೂನು ಹೋರಾಟಗಳನ್ನು ಕಡಿಮೆ ಮಾಡಲು ಕೇಂದ್ರ ಸರಕಾರ ಯೋಚಿಸುತ್ತಿರುವಂತೆಯೇ, ಸುಪ್ರೀಂಕೋರ್ಟಲ್ಲಿ ಕಾನೂನು ಹೋರಾಟಕ್ಕೆಂದು ಕೇಂದ್ರ ಸರಕಾರ ಮಾಡುತ್ತಿರುವ ವೆಚ್ಚದ ಪ್ರಮಾಣ ಹೆಚ್ಚಳವಾಗಿರುವ ಮಾಹಿತಿ ಲಭ್ಯವಾಗಿದೆ. 2011-12ನೇ ಸಾಲಿನಲ್ಲಿ 11 ಕೋಟಿ ರೂ. ಆಗಿದ್ದ ವೆಚ್ಚ, 2017-18ನೇ ಸಾಲಿನಲ್ಲಿ 42.40 ಕೋಟಿ ರೂ. ಆಗಿದೆ. ಸಂಸತ್ ಸಮಿತಿಯೊಂದಕ್ಕೆ ಕೇಂದ್ರ ಕಾನೂನು ಸಚಿವಾಲಯ ಸಲ್ಲಿಸಿರುವ ಮಾಹಿತಿಯಲ್ಲಿ ಈ ಅಂಶ ಉಲ್ಲೇಖವಾಗಿದೆ. 2011-12ನೇ ಸಾಲಿನಲ್ಲಿ ಕಾನೂನು ಸಚಿವಾಲಯ 10.99 ಕೋಟಿ ರೂ. ಮೊತ್ತವನ್ನು ಕಾನೂನು ಅಧಿಕಾರಿಗಳಿಗೆ ಮತ್ತು ನ್ಯಾಯವಾದಿಗಳಿಗೆ ಶುಲ್ಕವಾಗಿಯೇ ಪಾವತಿಸಿದೆ. ಫೆ.22ರ ವರೆಗಿನ 2017-18ನೇ ಸಾಲಿನ ವರ್ಷದಲ್ಲಿ ಕೇಂದ್ರ 42.40 ಕೋಟಿ ರೂ. ಮೊತ್ತವನ್ನು ಶುಲ್ಕ ಪಾವತಿ ಮತ್ತು ಇತರ ವೆಚ್ಚಗಳಿಗಾಗಿ ಖರ್ಚು ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Threat: ಹೆಬ್ಬಾಳ್ಕರ್ ಕ್ಷಮೆ ಕೇಳದೆ ಹೋದ್ರೆ ಹತ್ಯೆ: ಸಿ.ಟಿ.ರವಿಗೆ ಬೆದರಿಕೆ ಪತ್ರ ರವಾನೆ
Daily Horoscope: ವಸ್ತ್ರ ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ, ಆರೋಗ್ಯ ತಕ್ಕಮಟ್ಟಿಗೆ ಉತ್ತಮ
Naxal Surrender: ‘ಶರಣಾಗುವಾಗ ಬಂದೂಕು ಹಿಡಿದುಕೊಂಡು ಬರುತ್ತಾರಾ?’: ಡಿ.ಕೆ.ಶಿವಕುಮಾರ್
ಅಂಗಾಂಗ ದಾನ ಮಾಡುವ ನೌಕರರಿಗೆ 42 ದಿನ ಸಾಂದರ್ಭಿಕ ರಜೆ
Fraud: ಅರಣ್ಯ ಸಚಿವರ ಆಪ್ತನ ಸೋಗಿನಲ್ಲಿ 6 ಲಕ್ಷ ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.