1 ಪುಟದ ಹೊಸ ITR ಪ್ರಕಟ: 2 ಲಕ್ಷ ಮೀರಿದ ಠೇವಣಿ ವಿವರ, ಆಧಾರ್ ಕಡ್ಡಾಯ
Team Udayavani, Mar 31, 2017, 7:50 PM IST
ಹೊಸದಿಲ್ಲಿ : ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಯ ಒಂದು ಪುಟದ ಸರಳ ಅರ್ಜಿ ನಮೂನೆಯನ್ನು ಕೇಂದ್ರ ಸರಕಾರ ಇಂದು ಶುಕ್ರವಾರ ಅಧಿಸೂಚನೆ ಮೂಲಕ ಪ್ರಕಟಿಸಿದೆ.
ನೋಟು ನಿಷೇಧದ ಬಳಿಕ ತಮ್ಮ ಖಾತೆಗೆ ಎರಡು ಲಕ್ಷ ರೂ.ಗಿಂತ ಹೆಚ್ಚಿನ ಮೊತ್ತವನ್ನು ಜಮೆ ಮಾಡಿರುವವರು ಆ ಬಗ್ಗೆ ವಿವರಣೆ ನೀಡುವುದನ್ನು ಮತ್ತು ಆಧಾರ್ ಕಾರ್ಡ್ ನಂಬರ್ ಕಾಣಿಸುವುದನ್ನು ಸರಕಾರ ಕಡ್ಡಾಯ ಮಾಡಿದೆ.
ಸರಕಾರ ಇಂದು ಪ್ರಕಟಿಸಿರುವ ಆದಾಯ ತೆರಿಗೆ ರಿಟರ್ನ್ ಫಾರ್ಮ್ 1 (ಸಹಜ್) ಈ ಹಿಂದಿನ ಏಳು ಪುಟಗಳ ಅರ್ಜಿಯನ್ನು ಬದಲಾಯಿಸಲಿದೆ. ಆದಾಯದಲ್ಲಿ ಕಳೆಯಬೇಕಿರುವ ಹಲವಾರು ಬಗೆಯ ಕಡಿತಗಳನ್ನು ಇದು ತೆಗೆದುಹಾಕಲಿದೆ.
ತಿಂಗಳ ಸಂಬಳ, ವಸತಿ ಸೊತ್ತು ಹಾಗೂ ಬಡ್ಡಿಯ ಮೂಲಕ 50 ಲಕ್ಷ ರೂ.ವರೆಗೆ ಆದಾಯ ಪಡೆಯುವ ವ್ಯಕ್ತಿಗಳು ಸಹಜ್ ಅರ್ಜಿಯನ್ನು ಬಳಸಬಹುದಾಗಿದೆ.
ಪ್ರಕೃತ ಸಹಜ್ (ಐಟಿಆರ್1) ಅರ್ಜಿಯನ್ನು ತಿಂಗಳ ವೇತನ ಪಡೆಯುವ ನೌಕರರು ಮತ್ತು ಐಟಿಆರ್2 ಅರ್ಜಿಯನ್ನು ಔದ್ಯಮಿಕ ಆದಾಯವನ್ನು ಒಳಗೊಳ್ಳದ ಆದಾಯವಿರುವ ವ್ಯಕ್ತಿಗಳು ಮತ್ತು ಹಿಂದೂ ಅವಿಭಜಿತ ಕುಟುಂಬದವರು (ಎಚ್‌ಯುಎಫ್) ಬಳಸುತ್ತಿದ್ದಾರೆ. ಸರಕಾರ ಈಗ ಐಟಿಆರ್2 ಅರ್ಜಿಯನ್ನು ಈ ವರ್ಗದವರಿಗೆ ಮತ್ತು ವಿದೇಶದಲ್ಲಿ ಆಸ್ತಿಪಾಸ್ತಿ ಹೊಂದಿಲ್ಲದವರ ಬಳಕೆಯಿಂದ ತೆಗೆದು ಹಾಕಿದೆ.
ಪಾನ್ ಹೊಂದಿರುವ 29 ಕೋಟಿ ಜನರ ಪೈಕಿ ಕೇವಲ 6 ಕೋಟಿ ಜನರು ಮಾತ್ರವೇ ಈಗ ಸರಕಾರಕ್ಕೆ ತೆರಿಗೆ ಪಾವತಿಸುತ್ತಿದ್ದಾರೆ.
ಐಟಿಆರ್ 1ರ ಇ-ಫೈಲಿಂಗನ್ನು ಎಪ್ರಿಲ್ 1ರಿಂದಲೇ ಮಾಡಬಹುದಾಗಿದೆ. ಅಂತೆಯೇ ಜುಲೈ 31ರ ವರೆಗಿನ ಗಡುವಿನ ತನಕ ಐಟಿಆರ್‌ಗಳನ್ನು ಸಲ್ಲಿಸುವುದಕ್ಕೆ ಅವಕಾಶವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಿಲಯನ್ಸ್‌ನಿಂದ ‘ರಸ್‌ಕಿಕ್’ ಎನರ್ಜಿ ಡ್ರಿಂಕ್ ಬಿಡುಗಡೆ
Table Space: ಟೇಬಲ್ ಸ್ಪೇಸ್ ಸ್ಥಾಪಕ ಅಮಿತ್ ಬ್ಯಾನರ್ಜಿ ಹೃದಯಾಘಾತದಿಂದ ನಿಧನ
Stock Market: HMPV ಎಫೆಕ್ಟ್ – ಷೇರುಪೇಟೆ ಸೆನ್ಸೆ*ಕ್ಸ್ 1,000ಕ್ಕೂ ಅಧಿಕ ಅಂಕ ಕುಸಿತ!
2024ರಲ್ಲಿ ಆಟೋ ಮೊಬೈಲ್ ಕ್ಷೇತ್ರಕ್ಕೆ ಲಾಭ: ದಾಖಲೆ ಮಾರಾಟ
Share Market: ಹೊಸ ವರ್ಷದ ಮೊದಲ ದಿನ 368 ಅಂಕ ಏರಿದ ಸೆನ್ಸೆಕ್ಸ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Percentage War: ಮತ್ತೆ 60 ಪರ್ಸೆಂಟ್ ಕಮಿಷನ್ ಯುದ್ಧ ; ಆರೋಪ – ಪ್ರತ್ಯಾರೋಪ
Dinner Meet: ಸಚಿವರ ಮನೆ ಔತಣಕೂಟಕ್ಕೆ ಅಪಾರ್ಥ ಕಲ್ಪಿಸುವುದು ಬೇಡ: ಡಿ.ಕೆ.ಶಿವಕುಮಾರ್
State Budget Meeting: ಇಂದಿನಿಂದ ಸಿಎಂ ಬಜೆಟ್ ಪೂರ್ವಭಾವಿ ಸರಣಿ ಸಭೆ
Naxal Surrender: ಮುಂಡಗಾರು ಲತಾ ಸೇರಿ 6 ನಕ್ಸಲರು ನಾಳೆ ಶರಣಾಗತಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.