ಬದಲಾಗದ ರಿಪೋ; ಕುಸಿದ ರೂಪಾಯಿ, ಸೆನ್ಸೆಕ್ಸ್ 792 ಅಂಕ ಕುಸಿತ
Team Udayavani, Oct 5, 2018, 4:25 PM IST
ಮುಂಬಯಿ : ಎಲ್ಲರ ಅಚ್ಚರಿಗೆ ಕಾರಣವಾಗುವ ರೀತಿಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಇಂದು ತನ್ನ ಹಾಲಿ ಶೇ.6.50 ರಿಪೋ ದರವನ್ನು ಯಥಾವತ್ ಉಳಿಸಿಕೊಳ್ಳಲು ತೀರ್ಮಾನಿಸಿದ ಹಿನ್ನೆಲೆಯಲ್ಲಿ ಮುಂಬಯಿ ಶೇರು ಪೇಟೆ 792 ಅಂಕಗಳ ಭಾರೀ ನಷ್ಟಕ್ಕೆ ಗುರಿಯಾಗಿ 34,376.99 ಅಂಕಗಳ, ಆರು ತಿಂಗಳ ಕನಿಷ್ಠ ಮಟ್ಟದಲ್ಲಿ, ಇಂದು ಶುಕ್ರವಾರದ ವಹಿವಾಟನ್ನು ಕೊನೆಗೊಳಿಸಿತು.
ಆರ್‌ಬಿಐ ತನ್ನ ರಿಪೋ ದರವನ್ನು ಯಥಾವತ್ ಉಳಿಸಿಕೊಂಡ ಸುದ್ದಿ ಪ್ರಕಟವಾಗುತ್ತಿದ್ದಂತೆಯೇ ಡಾಲರ್ ಎದುರು ರೂಪಾಯಿ ಇದೇ ಮೊದಲ ಬಾರಿಗೆ 74.23 (ವಹಿವಾಟು ನಡುವಿನ ದರ) ಕುಸಿಯಿತು.
ಕಳೆದ ಎರಡು ದಿನಗಳ ನಿರಂತರ ಸೋಲಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ಒಟ್ಟು 1,356.98 ಅಂಕಗಳ ನಷ್ಟಕ್ಕೆ ಗುರಿಯಾಗಿತ್ತು.
ಇಂದು ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಕೂಡ 282.80 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 10,316.45 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,778 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; ಕೇವಲ 700 ಶೇರುಗಳು ಮುನ್ನಡೆ ಕಂಡವು; 1,949 ಶೇರುಗಳು ಹಿನ್ನಡೆಗೆ ಗುರಿಯಾದವು; 129 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Stock Market: ನಿನ್ನೆಯ ಕುಸಿತದಿಂದ ಪುಟಿದೆದ್ದ ಸೆನ್ಸೆಕ್ಸ್: 566 ಅಂಕ ಏರಿಕೆ
Stock: ಟ್ರಂಪ್ ನೀತಿ ಎಫೆಕ್ಟ್-ಷೇರುಪೇಟೆ ಸೂಚ್ಯಂಕ 1,200 ಅಂಕ ಕುಸಿತ, 7 ಲಕ್ಷ ಕೋಟಿ ನಷ್ಟ
Bullet Train: ಮುಂಬೈ-ಅಹಮದಾಬಾದ್ ಹೈಸ್ಪೀಡ್ ಕಾರಿಡಾರ್ ವಿದ್ಯುದ್ದೀಕರಣ ಕಾರ್ಯ ಶುರು
The Shoolin Group: ಮಂಗಳೂರಿನ ಹೊಸ ಪ್ರೀಮಿಯಂ ಹೋಟೆಲ್ ಶೂಲಿನ್ ಕಂಫರ್ಟ್ಸ್ ಉದ್ಘಾಟನೆ
Share Market: ಷೇರುಪೇಟೆ ಸೂಚ್ಯಂಕ 300 ಅಂಕ ಜಿಗಿತ: ಲಾಭಗಳಿಸಿದ ಷೇರು ಯಾವುದು?