ಇನ್ಮುಂದೆ ಈ ಪ್ರೀಪೇಯ್ಡ್ ಯೋಜನೆಯಲ್ಲಿ ಉಚಿತ ಎಸ್ ಎಮ್ ಎಸ್ ಇಲ್ಲ..! ಇಲ್ಲಿದೆ ಮಾಹಿತಿ
Team Udayavani, Aug 2, 2021, 12:41 PM IST
ಟೆಲಿಕಾಂ ನೆಟ್ ವರ್ಕ್ ನಲ್ಲಿ ದಿನ ನಿತ್ಯ ಪೈಪೋಟಿ ಕಾಣಿಸುತ್ತಿದ್ದು, ಕೋವಿಡ್ ಎರಡನೇ ಅಲೆಯ ಹಿನ್ನೆಲೆಯಲ್ಲಿ ಮತ್ತೆ ಎಲ್ಲವೂ ದುಬಾರಿಯಾಗಿದೆ. ಟೆಲಿಕಾಂ ನೆಟ್ ವರ್ಕ್ ನ ಪ್ರೀ ಪೇಯ್ಡ್ ದರದಲ್ಲಿಯೂ ಏರಿಕೆಯಗಿದ್ದು, ಮಾತ್ರವಲ್ಲದೇ ಅದರ ಪ್ರಯೋಜನಗಳಲ್ಲಿಯೂ ವ್ಯತ್ಯಾಸವಾಗಿದೆ.
ಟೆಲಿಕಾಂ ನೆಟ್ ವರ್ಕ್ ಕ್ಷೇತ್ರದಲ್ಲಿಯೇ ದೈತ್ಯ ಸಂಸ್ಥೆಗಳು ಎಂದು ಕರೆಸಿಕೊಳ್ಳುವ ಜಿಯೋ, ಏರ್‌ಟೆಲ್, ವೋಡಾಫೋನ್, ಐಡಿಯಾ ಕಂಪೆನಿಗಳು ತಮ್ಮ ಆರಂಭಿಕ ಹಂತದ ರೀಚಾರ್ಜ್ ಯೋಜನೆಯಲ್ಲಿ ಕೆಲವು ಬದಲಾವಣೆಯನ್ನು ಜಾರಿಗೆ ತಂದಿವೆ.
ಇದನ್ನೂ ಓದಿ : ಮಸ್ಕಿಯಲ್ಲೊಬ್ಬ ವಾನರ ಪ್ರೇಮಿ : ಮಸ್ಕಿ ಪಟ್ಟಣದಲ್ಲಿ ನಿತ್ಯವೂ ನಡೆಯುತ್ತಿರುವ ದೃಶ್ಯವಿದು
ಹೌದು, ಜಿಯೋ, ಏರ್ ಟೆಲ್, ವೋಡಾಫೋನ್, ಐಡಿಯಾ ಕಂಪೆನಿಗಳು ತಮ್ಮ ಆರಂಭಿಕ ಪ್ರೀಪೇಯ್ಡ್ ಯೋಜನೆಯಲ್ಲಿ ಎಸ್ ಎಮ್ ಎಸ್ ಪ್ರಯೋಜನವನ್ನು ನೀಡುವುದಿಲ್ಲವೆಂದು ಹೇಳಿವೆ.
ಎ ಆರ್ ಪಿ ಯು (ಪ್ರತಿ ಬಳಕೆದಾರರಿಗೆ ಸರಾಸರಿ ಆದಾಯ) ಹೆಚ್ಚಿಸುವ ಸಲುವಾಗಿ ಎಸ್ ಎಮ್ ಎಸ್ ಯೋಜನೆಗಳನ್ನು ನೀಡದೇ ಇರುವ ತೀರ್ಮಾನವನ್ನು ಕೈಗೊಂಡಿವೆ.
100 ರೂ. ಒಳಗಿನ ರೀಚಾರ್ಜ್ ಪ್ಯಾಕ್ ನಲ್ಲಿ ಎಸ್ ಎಮ್ ಎಸ್ ಯೋಜನೆಯಲ್ಲಿ ಬದಲಾವಣೆ ಮಾಡಿವೆ. ಇತ್ತೀಚಿಗೆ ಟೆಲಿಕಾಂ ನೆಟ್ ವರ್ಕ್ ಸಂಸ್ಥೆಗಳು ಜಾರಿಗೆ ತಂದ ತಮ್ಮ ಪ್ರೀಪೇಯ್ಡ್ ಯೋಜನೆಗಳ ಬದಲಾವಣೆಗೂ ಮೊದಲು ಆರಂಭಿಕ ಹಂತದ ರೀಚಾರ್ಜ್ ಪ್ಯಾಕ್ ಗಳೊಂದಿಗೆ ಕರೆ, ಎಸ್ ಎಮ್ ಎಸ್, ಇಂಟರ್ ನೆಟ್ ಬಳಕೆಗಾಗಿ ಡೇಟಾ ಒದಗಿಸಿದ್ದವು. ಇದೀಗ ಕೈಗೊಂಡಿರುವ ಹೊಸ ನಿರ್ಧಾರವು ಎಸ್ ಎಮ್ ಎಸ್ ಆಫರ್ ನನ್ನು ಈ ಸಾಲಿನಿಂದ ತೆಗೆದುಹಾಕಿದೆ.
ಏರ್ ಟೆಲ್ ಇದೀಗ ಅತ್ಯಂತ ಕಡಿಮೆ ದರದ ಪ್ರೀಪೇಯ್ಡ್ ರೀಚಾರ್ಜ್ ಪ್ಲ್ಯಾನ್ ಅಂದರೆ 79 ರೂ.ಗೆ ನೀಡಿದ್ದು ಇದರಲ್ಲಿ ಗ್ರಾಹಕರು 64 ರೂ. ಟಾಕ್ ಟೈಮ್ ಹಾಗೂ 200 ಎಮ್ ಬಿ ಡೇಟಾವನ್ನು 28 ದಿನಗಳ ಸಿಂಧುತ್ವದೊಂದಿಗೆ ಪಡೆಯುತ್ತಾರೆ. ಏರ್ ಟೆಲ್ ನೀಡುತ್ತಿರುವ ಆರಂಭಿಕ ದರದ ಪ್ರೀ ಪೇಯ್ಡ್ ಯೋಜನೆಯಲ್ಲಿ ಪ್ರಮುಖಾಂಶವೇನೆಂದರೇ ಔಟ್ ಗೋಯಿಂಗ್ ಎಸ್ ಎಮ್ ಎಸ್ ಯೋಜನೆಯಿಲ್ಲ. ಎಸ್ ಎಮ್ ಎಸ್ ಮಾಡುವುದಕ್ಕೆ, ಗ್ರಾಹಕರು ಹೆಚ್ಚುವರಿ ಶುಲ್ಕವನ್ನು ನೀಡಬೇಕಾಗಿದೆ.
ಜಿಯೋ 98 ರೂ. ಪ್ರೀಪೇಯ್ಡ್ ರೀಚಾರ್ಜ್ ಯೋಜನೆಯನ್ನು ಒದಗಿಸಿದ್ದು ಇದು ಗ್ರಾಹಕರಿಗೆ 1.5ಜಿಬಿ ಡೇಟಾವನ್ನು 14 ದಿನಗಳಿಗೆ ನೀಡಲಿದೆ. ಈ ಯೋಜನೆಯಲ್ಲಿ ಅನಿಯಮಿತ ವಾಯ್ಸ್ ಕಾಲಿಂಗ್ ಹಾಗೂ ಜಿಯೋ ಚಾಲಿತ ಸೇವೆಗಳಿಗೆ ಚಂದಾದಾರಿಕೆಗಳನ್ನು ನೀಡಲಾಗಿದ್ದು ಎಸ್‌ಎಮ್‌ಎಸ್ ಯೋಜನೆಯನ್ನು ನಮೂದಿಸಿಲ್ಲ.
ಇದನ್ನೂ ಓದಿ : ಆಗಸ್ಟ್ ಎರಡನೇ ವಾರದಲ್ಲಿ ಸೋಂಕಿನ ಪ್ರಮಾಣ ಹಠಾತ್ ಏರಿಕೆ ಸಾಧ್ಯತೆ : ಅಧ್ಯಯನ ವರದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.