ವರ್ಕ್ ಫ್ರಮ್ ಹೋಂ ಓಕೆ ..! ಸಂಬಳ ಕಡಿತ ಯಾಕೆ..? : ವರದಿ
Team Udayavani, Mar 19, 2021, 7:06 PM IST
ನವ ದೆಹಲಿ : ಕೋವಿಡ್ 19 ಭಾರತದ ಮೇಲೆ ಅತ್ಯಂತ ದೊಡ್ಡ ಪ್ರಮಾಣದಲ್ಲಿ ಪರಿಣಾಮ ಬೀರಿದೆ. ಆರ್ಥಿಕ ಸ್ಥಿತಿ, ಉದ್ಯಮ ಕ್ಷೇತ್ರಗಳ ಮೇಲಂತೂ ಬಾರಿ ಪ್ರಹಾರ ಮಾಡಿರುವುದು ಸುಳ್ಳಲ್ಲ. ಪರಿಸ್ಥಿತಿ ಚೇತರಿಕೆಯಾಗುವತ್ತ ಮುಖ ಮಾಡುತ್ತಿದೆ ಎನ್ನುವಷ್ಟರಲ್ಲೆ ರೂಪಾಂತರಿ ಕೋವಿಡ್ ಮತ್ತೆ ಅಲೆ ಎಬ್ಬಿಸಿದೆ. ಕೇಂದ್ರ ಸರ್ಕಾರ ಲಾಕ್ ಡೌನ್ ಮಾಡುವ ಪರಿಸ್ಥಿತಿ ಇಲ್ಲ ಎಂದು ಹೇಳಿದ್ದರೂ ಕೂಡ ಜನರಲ್ಲಿ ಮತ್ತೆ ಲಾಕ್ ಡೌನ್ ಆಗಬಹುದು ಎಂಬ ಭೀತಿ ಆರಂಭವಾಗಿದೆ.
ಕೋವಿಡ್ ಕಾರಣದಿಂದ ಅನೇಕ ಕಂಪೆನಿಗಳು ವರ್ಕ್ ಫ್ರಮ್ ಹೋಮ್ ಗೆ ವಾಲಿದ್ದು, ಈ ನಡುವೆ ಒಂದು ವರದಿ ಕುತೂಹಲಕಾರಿ ಅಂಶವನ್ನು ಹೊರ ಹಾಕಿದೆ.
ಓದಿ : ವಿಡಿಯೋ : ಹೆಲಿಕಾಪ್ಟರ್ ಬಾಲಕ್ಕೆ ಸಿಕ್ಕಿಕೊಂಡ ಪ್ಯಾರಾಚೂಟ್ : ನೇತಾಡಿದ ವ್ಯಕ್ತಿ
ಕೋವಿಡ್ ಕಾರಣದಿಂದಾಗಿ ವರ್ಕ್ ಫ್ರಮ್ ಹೋಮ್ ಪದ್ಧತಿಯನ್ನು ಅನುಸರಿಸುತ್ತಿದ್ದ ಕಂಪೆನಿಗಳಲ್ಲಿ ಶೇಕಡಾ 59 ರಷ್ಟು ಕಂಪೆನಿಗಳು ವರ್ಕ್ ಫ್ರಮ್ ಹೋಮ್ ನಿಂದ ಹೊರಬರಲು ಬಯಸಿವೆ ಎಂದು ವರದಿಯೊಂದು ತಿಳಿಸಿದೆ.
ರಿಮೋಟ್ ವರ್ಕಿಂಗ್ ಸೆಟಪ್ ನಲ್ಲಿ ಕಂಪನಿಗಳು ತೃಪ್ತಿ ಹೊಂದಿಲ್ಲ :
ದೇಶದ ಶೇಕಡಾ 67 ರಷ್ಟು ದೊಡ್ಡ ಕಂಪನಿಗಳು ಹಾಗೂ ಮಧ್ಯಮ ಗಾತ್ರದ ಶೇಕಡಾ 70 ರಷ್ಟು ಕಂಪನಿಗಳು, ಜಾಗತಿಕವಾಗಿ ಶೇಕಡಾ 60 ರಷ್ಟು ದೊಡ್ಡ ಕಂಪನಿಗಳು ಮತ್ತು ಶೇಕಡಾ 34 ರಷ್ಟು ಮಧ್ಯಮ ಮಟ್ಟದ ಕಂಪನಿಗಳು ವರ್ಕ್ ಫ್ರಮ್ ಹೋಮ್ ಪದ್ಧತಿಯಿಂದ ಹೊರಬರಲು ಬಯಸಿವೆ ಎಂದು ಜಾಬ್ ಸೈಟ್ ವರದಿ ತಿಳಿಸಿದೆ.
ಕೋವಿಡ್ ಸಾಂಕ್ರಾಮಿಕ ಸೋಂಕಿನ ಸಂದರ್ಭದಲ್ಲೂ ಕೂಡ ವರ್ಕ್ ಫ್ರಮ್ ಹೋಂ ಪೂರಕವಾಗಿರಲಿಲ್ಲ. ಮಾತ್ರವಲ್ಲದೇ, ಸಂಪೂರ್ಣವಾಗಿ ಆನ್ ಲೈನ್ ನಲ್ಲಿ ಕಾರ್ಯ ನಿರ್ವಹಿಸುವ ಶೇಕಡಾ 90 ರಷ್ಟು ಕಂಪನಿಗಳು ಸಹ ಕಚೇರಿಯಿಂದಲೇ ಕಾರ್ಯ ನಿರ್ವಹಿಸಲು ಬಯಸುತ್ತವೆ ಎಂದು ವರದಿ ಹೇಳಿದೆ.
ಇನ್ನು, ರ್ಕ್ ಫ್ರಮ್ ಹೋಂ ಪದ್ಧತಿಯಿಂದಾಗಿ ಕಂಪನಿಗಳು ಕೆಲಸ ಮಾಡುವ ವಿಧಾನದಲ್ಲಿ ಬದಲಾವಣೆಗಳಾಗಿವೆ. ಸೂಕ್ತ ವಿಧಾನಗಳನ್ನು ಪ್ರೋತ್ಸಾಹಿಸಬೇಕಾಗಿದೆ. ಇದರಿಂದಾಗಿ ಹೊಸ ಪರಿಕಲ್ಪನೆಗಳು ಮತ್ತು ಕೆಲಸದ ವಿಧಾನದಲ್ಲಿ ಫ್ಲೆಕಸಿಬಿಲಿಟಿ ತರುವ ಮೂಲಕ ಉತ್ಪಾದಕತೆಯನ್ನು ಹೆಚ್ಚಿಸಬಹುದು ಎಂದು ಇಂಡೀಡ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಶಶಿ ಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ.
ಕೋವಿಡ್ ಸಾಂಕ್ರಾಮಿಕ ಸೋಂಕನ್ನು ತಡೆಯುವಲ್ಲಿ ವರ್ಕ್ ಫ್ರಮ್ ಹೋಂ ನೀಡಿದ ಕೊಡುಗೆ ಮಹತ್ವದ್ದಾಗಿದೆ ಎಂದು ಶೇಕಡಾ 24 ರಷ್ಟು ಮಂದಿ ಅಭಿಪ್ರಾಯಪಟ್ಟಿರೇ, ಶೇಕಡಾ 29ರಷ್ಟು ಮಂದಿ ವರ್ಕ್ ಫ್ರಮ್ ಹೋಂ ಪರವಾಗಿದ್ದಾರೆ ಮತ್ತು ಶೇಕಡಾ 32 ರಷ್ಟು ಜನರು ಸಂಬಳ ಕಡಿತದ ಹೊರತಾಗಿಯೂ ವರ್ಕ್ ಫ್ರಮ್ ಹೋಂ ಮುಂದುವರೆಸಲು ಬಯಸುತ್ತಾರೆ ಎಂದು ಸಮೀಕ್ಷಾ ವರದಿ ತಿಳಿಸುತ್ತದೆ.
ಉದ್ಯಮ ಕ್ಷೇತ್ರಕ್ಕೆ ಸೇರುವ 1200 ಉದ್ಯೋಗಿಗಳು ಮತ್ತು ಅಂತಹ 600 ಅರೆಕಾಲಿಕ ಉದ್ಯೋಗಿಗಳನ್ನು ಒಳಗೊಂಡು ಮಾಡಿದ ಈ ಸಮೀಕ್ಷೆಯಲ್ಲಿ. ಶೇಕಡಾ 50 ರಷ್ಟು ಮಂದಿ ಕೋವಿಡ್ ನ ಭಯದಿಂದ ಸಿಟಿಯಿಂದ ತಮ್ಮ ಊರಿಗೆ ಮರಳಿ ವರ್ಕ್ ಫ್ರಮ್ ಹೋಂ ನಲ್ಲಿ ದುಡಿಯಲು ಬಯಸಿದ್ದಾರೆ. ಶೇಕಡಾ 32 ರಷ್ಟು ಮಂದಿ ತಮ್ಮ ಸಂಬಳ ಕಡಿತದ ಹೊರತಾಗಿಯೂ ವರ್ಕ್ ಫ್ರಮ್ ಹೋಂ ಮುಂದುವರೆಸಲು ಬಯಸಿದ್ದಾರೆ. ಮಧ್ಯಮ ಮಟ್ಟದ ಶೇಕಡಾ 88 ರಷ್ಟು ಮಂದಿ ಯಾವುದೇ ರೀತಿಯ ವೇತನ ಕಡಿತದಿಂದ ದುಡಿಯಲು ಸಾಧ್ಯವಿಲ್ಲವೆಂದಿದ್ದಾರೆ. ಶೇಕಡಾ 60 ರಷ್ಟು ಮಂದಿ ವರ್ಕ್ ಫ್ರಮ್ ಹೋಂ ನಲ್ಲಿ ಯಾವುದೇ ರೀತಿಯ ವೇತನ ಕಡಿತವನ್ನು ಎದುರಿಸಲು ಬಯಸುವುದಿಲ್ಲ ಎಂದರೆ, ಶೇಕಡಾ 9 ರಷ್ಟು ಮಂದಿ ವರ್ಕ್ ಫ್ರಮ್ ಹೋಮ್ ಬೆಸ್ಟ್ ಅಂದಿದ್ದಾರೆ ಎನ್ನುವುದು ಸಮೀಕ್ಷಾ ವರದಿ ತಿಳಿಸಿದೆ.
ಓದಿ : ಕೋವಿಡ್ ಪ್ರಕರಣ ಹೆಚ್ಚಳ: ಲಾಕ್ ಡೌನ್ ಒಂದು ಆಯ್ಕೆಯಾಗಿದೆ: ಉದ್ಧವ್ ಠಾಕ್ರೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.