ಪೇಟಿಎಂ ನಲ್ಲಿ 20 ಸಾವಿರ ಉದ್ಯೋಗವಕಾಶ..! ಯಾವ ಹುದ್ದೆ..? ಎಲ್ಲಿ..? ಇಲ್ಲಿದೆ ಮಾಹಿತಿ
Team Udayavani, Aug 2, 2021, 5:53 PM IST
ನವ ದೆಹಲಿ : ಕೋವಿಡ್ ಸಮಸ್ಯೆ ತಂದೊಡ್ಡಿದ ಸಂಕಷ್ಟ ಒಂದೆರಡಲ್ಲ. ಕೋವಿಡ್ ಇಡೀ ದೇಶದ ನಾಗರಿಕ ವ್ಯವಸ್ಥೆಯ ಮೇಲೆ ದೊಡ್ಡ ಮಟ್ಟದಲ್ಲಿ ಪರಿಣಾಮವನ್ನು ಬೀರಿದೆ. ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಉದ್ಯೋಗವಿಲ್ಲದೆ ಸಂಕಷ್ಟದಲ್ಲಿ ಜನ ತಿಂಗಳುಗಟ್ಟಲೆ ಸೊರಗಿದ್ದಾರೆ.
ನಿರುದ್ಯೋಗಿಗಳ ಪಾಲಿಗೆ ಡಿಜಿಟಲ್ ಪೇಮೆಂಟ್ ಆ್ಯಪ್ ಹಾಗೂ ಫೈನಾನ್ಶಿಯಲ್ ಸರ್ವೀಸಸ್ ಸಂಸ್ಥೆಯಾಗಿರುವ ಪೇಟಿಎಂ ಉದ್ಯೋಗವಕಾಶವನ್ನು ಒದಗಿಸುತ್ತಿದೆ.
ಹೌದು, ಡಿಜಿಟಲ್ ಪೇಮೆಂಟ್ ದೈತ್ಯ ಎಂದೇ ಕರೆಸಿಕೊಳ್ಳುವ ಪೇಟಿಎಂ ಸುಮಾರು 20 ಸಾವಿರ ಹುದ್ದೆಗಳ ನೇಮಕಾತಿಗಾಗಿ ಪ್ರಕ್ರಿಯೆಯನ್ನು ಆರಂಭಿಸಿದೆ.
ಇದನ್ನೂ ಓದಿ : ಮಾನವೀಯ ಮೌಲ್ಯಗಳ ಪುನರುತ್ಥಾನಕ್ಕಾಗಿ ಜ್ಞಾನ ಭಿಕ್ಷಾ ಪಾದಯಾತ್ರೆಯ ಮೂಲಕ ಗಮನ ಸೆಳೆದ ಪದವೀಧರ !
ಫೀಲ್ಡ್ ಸೇಲ್ಸ್ ಎಕ್ಸಿಕ್ಯೂಟಿವ್ ಗಳು (ಎಫ್ ಎಸ್ ಇ) ಮಾಸಿಕ ವೇತನ ಹಾಗೂ ಕಮಿಷನ್ ರೂಪದಲ್ಲಿ ರೂ, 35, 00 ಹಾಗೂ ಅದಕ್ಕಿಂತ ಹೆಚ್ಚಿನದನ್ನು ಗಳಿಸುವ ಅವಕಾಶವ ಪೇಟಿಎಂ ಒದಗಿಸಿಕೊಡುತ್ತಿದೆ. ಪದವೀಧರರಾಗಿರುವ ಯುವಕರನ್ನು ಪೇಟಿಎಂ ಈ ಹುದ್ದೆಗೆ ಬಯಸುತ್ತಿದ್ದು, ಸಂಸ‍್ಥೆಯ ಆಂತರಿಕ ಮೂಲಗಳು ನೀಡಿರುವ ಮಾಹಿತಿಯ ಪ್ರಕಾರ, ಈಗಾಗಲೇ ಈ ಹುದ್ದೆಗೆ ನೇಮಕಾತಿಗೆ ಪ್ರಕ್ರಿಯೆಗಳು ಆರಂಭವಾಗಿದೆ ಎಂದು ತಿಳಿಸಿದೆ.
ಕಂಪೆನಿಯಲ್ಲಿ ಎಫ್ ಎಸ್ ಸಿಯಾಗಿ ನೇಮಕವಾಗುವವರ ಜವಾಬ್ದಾರಿಯೇನು..?
ಪ್ರಮುಖವಾಗಿ ಗ್ರಾಹಕರಿಗೆ ಮತ್ತು ವ್ಯಾಪಾರಿಗಳಿಗೆ, ಬಳಕೆದಾರರಿಗೆ ಡಿಜಿಟಲ್ ಪೇಮೆಂಟ್ ಮಾಡಲು ಉತ್ತೇಜಿಸುವುದು ಹಾಗೂ ತರಬೇತಿಯನ್ನು ನೀಡುವುದಾಗಿದೆ. ಇನ್ನು ಪೇಟಿಎಂ ನ ಪ್ರಾಡೆಕ್ಟ್ ಗಳಾಗಿರುವ, ಆಲ್ ಇನ್ ಒನ್ ಕ್ಯೂ ಆರ್ ಕೋಡ್, ಪಿಒಎಸ್, ಮಶೀನ್, ಪೇಟಿಎಂ ಸೌಂಡ್ ಬಾಕ್ಸ್ ಇತ್ಯಾದಿಗಳನ್ನು ಪ್ರಮೋಟ್ ಅತೌಆ ಉತ್ತೇಜಿಸುವುದು. ಇದಲ್ಲದೆ ಕಂಪನಿಯ ವ್ಯಾಲೆಟ್, ಯುಪಿಐ , ಪೇಟಿಎಂ ಪೋಸ್ಟ್ ಪೇಯ್ಡ್ , ವ್ಯಾಪಾರಿಗಳ ಸಾಲ ಹಾಗೂ ವಿಮೆಯ ಕುರಿತಾದ ಪ್ರಮೋಶನ್ ಗಳನ್ನು ನಿಭಾಯಿಸುವುದಾಗಿದೆ.
18 ವರ್ಷ ಮೇಲ್ಪಟ್ಟವರು, ಎಸ್ ಎಸ್ ಎಲ್ ಸಿ, ಪದವಿ ಪೂರ್ವ ಶಿಕ್ಷಣ ಅಥವಾ ಪದವೀಧರರು ಪೇಟಿಎಂ ಆ್ಯಪ್ ಮೂಲಕವೇ ಅರ್ಜಿಯನ್ನು ಸಲ್ಲಿಸಬಹುದಾಗಿದ್ದು, ಆರಂಭಿಕ ವೇತನ 35, 000 ದಿಂದ ಇತರೆ ಕಮಿಷನ್ ಆಧಾರಿತ ಸಂಬಳವೂ ಸಿಗಲಿದೆ ಎಂದು ಸಂಸ್ಥೆ ಮಾಹಿತಿ ನೀಡಿದೆ.
ಇದನ್ನೂ ಓದಿ : ಡೆಲ್ಟಾ ಪ್ಲಸ್ ರೂಪಾಂತರಿ ವಿರುದ್ಧ ಕೋವ್ಯಾಕ್ಸಿನ್ ಲಸಿಕೆ ಪರಿಣಾಮಕಾರಿಯಾಗಿದೆ: ಐಸಿಎಂಆರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
2024ರಲ್ಲಿ ಆಟೋ ಮೊಬೈಲ್ ಕ್ಷೇತ್ರಕ್ಕೆ ಲಾಭ: ದಾಖಲೆ ಮಾರಾಟ
Share Market: ಹೊಸ ವರ್ಷದ ಮೊದಲ ದಿನ 368 ಅಂಕ ಏರಿದ ಸೆನ್ಸೆಕ್ಸ್
New Year 2025: ಜಿಎಸ್‌ಟಿ, ಎಲ್‌ಪಿಜಿ, ಯುಪಿಐ..: ಜನವರಿ 1 ರಿಂದ ಇದೆಲ್ಲಾ ನಿಯಮ ಬದಲಾವಣೆ
GST on Sale: ಹಳೆ ಕಾರು ಮಾರಾಟ: ಲಾಭಕ್ಕೆ ಮಾತ್ರ ಜಿಎಸ್‌ಟಿ
IRCTC Down: ತಾಂತ್ರಿಕ ದೋಷ- ರೈಲು ಟಿಕೆಟ್ ಬುಕ್ಕಿಂಗ್ ಸಮಸ್ಯೆ-ಪ್ರಯಾಣಿಕರ ಆಕ್ರೋಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.