ಇಂದು GST ಸಭೆ: ವಿಪಕ್ಷ ಆಳ್ವಿಕೆಯ ರಾಜ್ಯಗಳ ಗದ್ದಲ?
Team Udayavani, Oct 5, 2020, 7:09 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಹೊಸದಿಲ್ಲಿ: ಜಿಎಸ್‌ಟಿ ಮಂಡಳಿಯ 42ನೇ ಸಭೆಯು ಸೋಮವಾರ (ಅ.5) ನಡೆಯಲಿದ್ದು, ರಾಜ್ಯಗಳ ಜಿಎಸ್‌ಟಿ ಬಾಕಿ ಹಣ ಬಿಡುಗಡೆಯ ವಿಚಾರವಾಗಿ ಗದ್ದಲಮಯವಾಗುವ ಸಂಭವವಿದೆ.
ರಾಜ್ಯಗಳಿಗೆ ನೀಡಬೇಕಾಗಿರುವ ಜಿಎಸ್‌ಟಿ ಬಾಕಿಯನ್ನು ಸಾಲವಾಗಿ ನೀಡುವ ಕೇಂದ್ರ ಸರಕಾರದ ಆಯ್ಕೆಯನ್ನು 21 ರಾಜ್ಯಗಳು ಸ್ವೀಕರಿಸಿವೆ.
ಇವುಗಳಲ್ಲಿ ಬಿಜೆಪಿ ಆಳ್ವಿಕೆಯ ರಾಜ್ಯಗಳೇ ಅಧಿಕ. ಆದರೆ ವಿಪಕ್ಷಗಳ ಆಡಳಿತ ಇರುವ ಪಂಜಾಬ್, ಕೇರಳ, ಪ. ಬಂಗಾಲದಂತಹ ರಾಜ್ಯಗಳು ಈ ಆಯ್ಕೆಯನ್ನು ವಿರೋಧಿಸಿವೆ.
ಸೋಮವಾರದ ಸಭೆಯಲ್ಲಿ ಈ ರಾಜ್ಯಗಳು ಕೇಂದ್ರ ಸರಕಾರದ ಸಾಲ ಆಯ್ಕೆಯನ್ನು ಬಲವಾಗಿ ವಿರೋಧಿಸುವ ಸಾಧ್ಯತೆಯಿದ್ದು, ಪರ್ಯಾಯ ಮಾರ್ಗಕ್ಕಾಗಿ ಆಗ್ರಹಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಸಾಲ ಆಯ್ಕೆಗೆ ವಿರೋಧ
ಪ್ರಸ್ತುತ ಆರ್ಥಿಕ ವರ್ಷದಲ್ಲಿ ರಾಜ್ಯಗಳು 2.35 ಲಕ್ಷ ಕೋ.ರೂ. ಜಿಎಸ್‌ಟಿ ಆದಾಯ ಕೊರತೆ ಅನುಭವಿಸಿವೆ. ಕೇಂದ್ರದ ಲೆಕ್ಕಾಚಾರದಂತೆ ಈ ಪೈಕಿ 97 ಸಾವಿರ ಕೋ.ರೂ. ಜಿಎಸ್‌ಟಿ ಜಾರಿ ಸಂಬಂಧಿಯದ್ದಾದರೆ ಇನ್ನುಳಿದ 1.38 ಲಕ್ಷ ಕೋ.ರೂ. ರಾಜ್ಯಗಳ ಜಿಎಸ್‌ಟಿ ಆದಾಯದ ಮೇಲೆ ಕೋವಿಡ್ 19 ಪರಿಣಾಮದಿಂದ ಉಂಟಾಗಿದೆ.
ಕೊರತೆಯಾಗಿರುವ 97 ಸಾವಿರ ಕೋ. ರೂ.ಗಳನ್ನು ಆರ್‌ಬಿಐ ಮೂಲಕ ಸಾಲವಾಗಿ ಪಡೆಯುವ ಅಥವಾ 2.35 ಲಕ್ಷ ಕೋ. ರೂ.ಗಳನ್ನು ಬಾಹ್ಯ ಸಾಲವಾಗಿ ಪಡೆಯುವ ಆಯ್ಕೆಗಳನ್ನು ಕೇಂದ್ರ ಸರಕಾರವು ರಾಜ್ಯಗಳ ಮುಂದೆ ಇರಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Stock Market: ಷೇರುಪೇಟೆ ಸಂವೇದಿ ಸೂಚ್ಯಂಕ 1,000 ಅಂಕ ಕುಸಿತ; ಲಾಭಗಳಿಸಿದ ಷೇರು ಯಾವುದು?
Gold Rate: ಚಿನ್ನದ ಬೆಲೆ ಮತ್ತೆ ಇಳಿಕೆ: 10 ಗ್ರಾಂಗೆ 77240 ರೂ!
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್ ಷೇರು ಮೌಲ್ಯ ಏರಿಕೆ
ಮೆಜೆಂಟಾ ಮೊಬಿಲಿಟಿ ಸಂಸ್ಥೆ ವಾಹನ ಬಳಗಕ್ಕೆ ಟಾಟಾ ಏಸ್ ಇವಿ ಸೇರ್ಪಡೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Mangaluru: ವೆನ್ಲಾಕ್ ಆಸ್ಪತ್ರೆ ಹೊರರೋಗಿ ವಿಭಾಗ ವಿಸ್ತರಣೆ
Bengaluru ಭಯೋ*ತ್ಪಾದಕ ಚಟುವಟಿಕೆ ಆರೋಪಿ, ಉ*ಗ್ರ ಖಾನ್ ರುವಾಂಡದಿಂದ ಭಾರತಕ್ಕೆ ಗಡಿಪಾರು!
Kundapura: ಹತ್ತೂರು ಸೇರುವ ಮುಳ್ಳಿಕಟ್ಟೆಗೆ ಬೇಕು ಬಸ್ ನಿಲ್ದಾಣ
IPL 2024: ನನಗೆ ಪ್ರೀತಿ ಗೌರವ ಕೊಡಿ ಸಾಕು..: ಡೆಲ್ಲಿ ಮಾಲಿಕರ ಮುಂದೆ ರಾಹುಲ್ ಬೇಡಿಕೆ
Tollywood: ಒಂದೇ ದಿನ ವಿವಾಹವಾಗಲಿದ್ದಾರಾ ಅಕ್ಕಿನೇನಿ ಸಹೋದರರು? ನಾಗಾರ್ಜುನ್ ಹೇಳಿದ್ದೇನು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.