ಡಿಬಿಯು ಎಂಬ ಆಪತ್ಬಾಂಧವ; ಯಾವೆಲ್ಲ ವಹಿವಾಟು ನಡೆಸಬಹುದು ಗೊತ್ತಾ?
Team Udayavani, Oct 17, 2022, 7:50 AM IST
ದೇಶದ 75 ಜಿಲ್ಲೆಗಳಲ್ಲಿ ಪ್ರಧಾನಿ ಮೋದಿ ಅವರು ಭಾನುವಾರು 75 ಡಿಜಿಟಲ್ ಬ್ಯಾಂಕಿಂಗ್ ಘಟಕ (ಡಿಬಿಯು) ಗಳನ್ನು ಅನಾವರಣ ಮಾಡಿದ್ದಾರೆ. ಡಿಜಿಟಲ್ ಬ್ಯಾಂಕಿಂಗ್‌ನ ಅನುಕೂಲತೆಯು ದೇಶದ ಮೂಲೆ ಮೂಲೆಗೂ ತಲುಪಲಿ ಎನ್ನುವುದೇ ಇದರ ಉದ್ದೇಶ. ಈ ಡಿಬಿಯುಗಳಲ್ಲಿ ಯಾವೆಲ್ಲ ವಹಿವಾಟು ನಡೆಸಬಹುದು ಗೊತ್ತಾ?
ಎರಡು ವಲಯಗಳು
ಕೆನರಾ ಬ್ಯಾಂಕ್, ಕರ್ನಾಟಕ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್ ಸಿ ಬ್ಯಾಂಕುಗಳು ಡಿಬಿಯು ಸ್ಥಾಪನೆಯ ಘೋಷಣೆ ಮಾಡಿವೆ. ಈ ಡಿಬಿಯು ಗಳು ಸ್ವಯಂಸೇವಾ ವಲಯ ಮತ್ತು ಡಿಜಿಟಲ್ ಸಹಾಯಕ ವಲಯ ಎಂಬ
2 ವಿಶೇಷ ಫೀಚರ್‌ಗಳನ್ನು ಹೊಂದಿವೆ.
ಸ್ವಯಂಸೇವಾ ವಲಯ
ಸ್ವಯಂಸೇವಾ ವಲಯದಲ್ಲಿ ಎಟಿಎಂ, ನಗದು ಜಮೆ ಮಾಡುವ ಯಂತ್ರ, ಇಂಟರ್ಯಾಕ್ಟಿವ್ ಡಿಜಿಟಲ್ ವಾಲ್, ನೆಟ್ ಬ್ಯಾಂಕಿಂಗ್ ಕಿಯೋಸ್ಕ್ಗಳು, ವಿಡಿಯೋ ಕಾಲ್, ಟ್ಯಾಬ್ ಬ್ಯಾಂಕಿಂಗ್‌ನಂಥ ಸೌಲಭ್ಯ ಕಲ್ಪಿಸಲಾಗಿರುತ್ತದೆ. ಇನ್ನು, ಪಾಸ್‌ಬುಕ್ ಪ್ರಿಂಟಿಂಗ್, ಚೆಕ್ ಡೆಪಾಸಿಟ್, ಇಂಟರ್ನೆಟ್ ಬ್ಯಾಂಕಿಂಗ್ ಸೇವೆ ಒದಗಿಸುವ ಬಹೂಪ ಯೋಗಿ ಕಿಯೋಸ್ಕ್ ಕೂಡ ಇಲ್ಲಿರುತ್ತದೆ. ಡಿಜಿಟಲ್ ಸಂವಾದ ಪರದೆ ಕೂಡ ಇಲ್ಲಿದ್ದು, ಚಾಟ್‌ಬೋಟ್ ಮೂಲಕ ಗ್ರಾಹಕರು ವಿವಿಧ ಉತ್ಪನ್ನ, ಆಫರ್, ಕಡ್ಡಾಯ ನೋಟಿಸ್‌ಗಳ ಮಾಹಿತಿ ಪಡೆಯಬಹುದು.
ಡಿಜಿಟಲ್
ಸಹಾಯಕ ವಲಯ
ಉಳಿತಾಯ, ಚಾಲ್ತಿ ಖಾತೆ, ನಿಶ್ಚಿತ ಠೇವಣಿ, ಆರ್‌ಡಿ ಇತ್ಯಾದಿಗಳನ್ನು ತೆರೆಯಲು ಗ್ರಾಹಕರಿಗೆ ಇಲ್ಲಿರುವ ಬ್ಯಾಂಕ್ ಅಧಿಕಾರಿಗಳೇ ಸಹಾಯ ಮಾಡುತ್ತಾರೆ. ಆಧಾರ್ ಕೆವೈಸಿ ಮೂಲಕ ಡಿಜಿಟಲ್ ರೂಪದಲ್ಲೇ ಈ ಪ್ರಕ್ರಿಯೆ ಪೂರ್ಣಗೊಳಿಸಲಾಗುತ್ತದೆ.
ಜನ ಬ್ಯಾಂಕ್ ಡಿಬಿಯು
ಜನ ಎಸ್‌ಎಫ್ಬಿ ಎನ್ನುವುದು ಡಿಬಿಯು ಸೇವೆ ನೀಡುವ ಏಕೈಕ ಸಣ್ಣ ಹಣಕಾಸು ಬ್ಯಾಂಕ್ ಆಗಿದೆ. ಇಲ್ಲಿ ಮಹಿಳಾ ಸಿಬ್ಬಂದಿ ಮಾತ್ರ ಇರುತ್ತಾರೆ. ಡಿಜಿಟಲ್ ಉತ್ಪನ್ನ, ಸೇವೆಗಳನ್ನು ಹೇಗೆ ಬಳಕೆ ಮಾಡ ಬೇಕು ಎಂಬ ಬಗ್ಗೆ ಅವರು ಗ್ರಾಹಕ ರಿಗೆ ಅರಿವು ಮೂಡಿಸುತ್ತಾರೆ. ಇಲ್ಲಿ “ಡಿಜಿಜೆನ್’ ಡಿಜಿಟಲ್ ಬ್ಯಾಂಕಿಂಗ್ ಪ್ಲಾಟ್‌ಫಾರಂ, ಕಿಯೋಸ್ಕ್, ಕ್ಯಾಶ್ ರೀಸೈಕ್ಲರ್ ಮಷೀನ್ ಇರುತ್ತದೆ.
ಉದ್ದೇಶ- ಇತರೆ ಸೇವೆ?
ಡಿಜಿಟಲ್ ಬ್ಯಾಂಕಿಂಗ್‌ನ ಅನುಕೂಲತೆ ದೇಶದೆಲ್ಲೆಡೆಗೆ ತಲುಪಿಸುವುದು
ಗ್ರಾಹಕರಿಗೆ ಡಿಜಿಟಲ್ ಹಣಕಾಸು ಸಾಕ್ಷರತೆ
ಸೈಬರ್ ಭದ್ರತೆಯ ಕುರಿತು ಅರಿವು
ಗ್ರಾಹಕರ ಕುಂದುಕೊರತೆಗಳಿಗೆ ಪರಿಹಾರ ಒದಗಿಸುವುದು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.