ಪೋರ್ಷೆ – ಬೋಯಿಂಗ್ ಸಹಭಾಗಿತ್ವದಲ್ಲಿ ಬರಲಿದೆ ಹಾರುವ ವಿದ್ಯುತ್‌ಚಾಲಿತ ಕಾರು
Team Udayavani, Oct 14, 2019, 8:00 PM IST
ಆಟೋ ಮೊಬೈಲ್ ವಲಯಗಳಲ್ಲಿ ಅಪಾರ ಕೀರ್ತಿಗಳಿಸಿರುವ ಪೋರ್ಷೆ ಹಾಗೂ ಬೋಯಿಂಗ್ ಕಂಪೆನಿಗಳು ನೂತನ ಕಾರ್ಯ ಯೋಜನೆಯನ್ನು ಹಾಕಿಕೊಂಡಿದ್ದು, ಹಾರುವ ಎಲೆಕ್ಟ್ರಾನಿಕ್ ಕಾರನ್ನು ತಯಾರಿಸಲು ಮುಂದಾಗಿದೆ.
ಈ ಕುರಿತು ಇತ್ತೀಚೆಗೆ ಪತ್ರಿಕಾ ಗೋಷ್ಠಿ ನಡೆಸಿದ್ದು, ಪೋರ್ಷೆ ಮತ್ತು ಬೋಯಿಂಗ್ ಫ್ಲೈಯಿಂಗ್ ಕಾರನ್ನು ಅಭಿವೃದ್ಧಿಪಡಿಸುವ ನಿರ್ಧಾರ ಕೈಗೊಂಡಿದ್ದೇವೆ ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದು, ಈ ಕಾರು ಸಂಪೂರ್ಣ ವಿದ್ಯುತ್ ಚಾಲಿತ ನಿಯಂತ್ರಣದಿಂದ ಕಾರ್ಯ ನಿರ್ವಹಿಸಲಿದೆಯಂತೆ.
ಶ್ರೀಮಂತ ಐಷಾರಾಮಿ ಕಾರು ಖರೀದಿದಾರರನ್ನು ಗುರಿಯಾಗಿರಿಸಿಕೊಂಡು ಪ್ರೀಮಿಯಂ ಫ್ಲೈಯಿಂಗ್ ಕಾರನ್ನು ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಪೋರ್ಷೆ ಹಾಗೂ ಬೋಯಿಂಗ್ ಕಂಪೆನಿಗಳು ಜಂಟಿಯಾಗಿ ಈ ಯೋಜನೆಯನ್ನು ಪ್ರಾರಂಭಿಸಿದೆ.
ಈ ಕಾರುಗಳ ತಯಾರಿಕೆಯಿಂದ ವಾಹನ ದಟ್ಟನೆ ಸಮಸ್ಯೆಗೆ ಪರಿಹಾರ ದೊರೆಯುವುದರೊಂದಿಗೆ,ವಾಯು ಮಾಲಿನ್ಯದಂತಹ ಸಮಸ್ಯೆಗಳು ಇದರಿಂದ ನಿವಾರಣೆಯಾಗಲಿದೆ ಎಂದು ವರದಿ ತಿಳಿಸಿದೆ.
ಸದ್ಯ ಕಾರು ತಯಾರಿಸಲ್ಲಿದ್ದೇವೆ ಎಂಬ ಮಾಹಿತಿಯನ್ನು ಮಾತ್ರ ಹಂಚಿಕೊಂಡಿರುವ ಕಂಪನಿಗಳು, ಕಾರಿನ ಬೆಲೆ- ಯಾವಾಗ ಬಿಡುಗಡೆಗೊಳ್ಳಲಿದೆ ಎಂಬಿತ್ಯಾದಿ ವಿಷಯಗಳನ್ನು ಬಹಿರಂಗ ಪಡಿಸುವಲ್ಲಿ ಅಂತರ ಕಾಯ್ದು ಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.