ಅಂಚೆ ಕಚೇರಿಯ ‘ಈ’ ಹೂಡಿಕೆಯ ಬಗ್ಗೆ ನಿಮಗೆಷ್ಟು ಗೊತ್ತು..? ಇಲ್ಲಿದೆ ಮಾಹಿತಿ
Team Udayavani, May 17, 2021, 3:03 PM IST
ನವ ದೆಹಲಿ : ಅಂಚೆ ಕಚೇರಿಗಳಲ್ಲಿ ಹಣ ಹೂಡಿಕೆ ಮಾಡಲು ಅನೇಕ ಆಯ್ಕೆಗಳಿವೆ. ಹಣ ಹೂಡಿಕೆ ಮಾಡುವ ಯೋಜನೆಗಳಲ್ಲಿ ಅಂಚೆ ಕಚೇರಿಯ ಈ ಆಯ್ಕೆ ನಿಮಗೆ ಪ್ರಯೋಜನ ಕಾರಿಯಾಗಿದೆ ಎನ್ನುವುದರಲ್ಲಿ ಅನುಮಾನವಿಲ್ಲ. ಈ ಯೋಜನೆ ಗ್ರಾಹಕ ಸ್ನೇಹಿಯಾಗಿದ್ದು ಹಣ ಹೂಡಿಕೆ ಮಾಡಲು ಉತ್ತಮ ಯೋಜನೆಯಾಗಿದೆ.
ಇದನ್ನೂ ಓದಿ : ಕೋವಿಡ್ ಸೋಂಕು ನಿರ್ಮೂಲನೆಗೆ ಜಿಲ್ಲಾಡಳಿತಕ್ಕೆ ಹೆಗಲು ಕೊಟ್ಟ ಸಹೃದಯಿ ವೈದ್ಯರು
ಎನ್ ಎಸ್ ಸಿ ಅಥವಾ ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ ನಲ್ಲಿ ಕನಿಷ ಠನೀವು 100 ರೂಪಾಯಿ ಪಾವತಿ ಮಾಡುವುದರ ಮೂಲಕ ಕೂಡು ನೀವು ಈ ಹೂಡಿಕೆಯ ಯೋಜನೆಯನ್ನು ಪ್ರಾರಂಭಿಸಬಹುದು. ತೆರಿಗೆಯನ್ನು ಉಳಿಸಿಬೇಕು ಅಂತಿದ್ದರೇ ನೀವು ವರ್ಷಕ್ಕೆ 1.5 ಲಕ್ಷ ರೂ ನಲ್ಲಿ ಪಾವತಿ ಮಾಡುವ ಮೂಲಕವೂ ನಿಮ್ಮ ಉಳಿತಾಯವನ್ನು ಖಾತೆಯನ್ನು ತೆರೆಯಬಹುದು.
ಈ ಯೋಜನೆಯಲ್ಲಿ ಸದ್ಯ ಶೇ. 6.8 ರಷ್ಟು ಬಡ್ಡಿ ಬರುತ್ತಿದೆ. 5 ವರ್ಷಗಳ ಎಫ್ ಡಿ ಗೆ ಶೇಕಡಾ 7.5ರಷ್ಟು ಬಡ್ಡಿ ಲಭಿಸುತ್ತಿದೆ.
ಎನ್ ಎಸ್ ಸಿ ಆರಂಭಿಸುವ ಸಂದರ್ಭದಲ್ಲಿ ಇದ್ದ ಬಡ್ಡಿ ದರ ನಿರ್ಧಾರಿಸಲಾಗುತ್ತದೆ. ಈ ಬಡ್ಡಿದರ ನಿಮ್ಮ ಹಣದ ಮ್ಯಾಚುರಿಟಿ (ಐದು ವರ್ಷ) ಬಳಿಕವೂ ಅಷ್ಟೇ ಇರಲಿದೆ.
ಎನ್ ಎಸ್ ಸಿ ಯಲ್ಲಿ ನಿಮ್ಮ ಹಣ ತೊಡಗಿಸಿ ನೀವು ತೆರಿಗೆಯನ್ನೂ ಸಹ ಉಳಿತಾಯ ಮಾಡಬಹುದಾಗಿದ್ದು, ಇಲ್ಲಿ ಠೇವಣಿ ಮಾಡಿರುವ ರಾಶಿಯ ಮೇಲೆ ನೀವು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಸಿ ಅಡಿ ತೆರಿಗೆ ಉಳಿತಾಯ ಮಾಡಬಹುದು. ಒಂದು ಆರ್ಥಿಕ ವರ್ಷದಲ್ಲಿ ಅತ್ಯಧಿಕ ಅಂದರೆ ರೂ.1.5 ಲಕ್ಷವರೆಗಿನ ಎನ್ ಎಸ್ ಸಿ ಉಳಿತಾಯದ ಮೇಲೆ ನೀವು ಈ ತೆರಿಗೆ ವಿನಾಯಿತಿಯನ್ನು ಕೂಡ ಪಡೆಯಬಹುದು. ಆದರೆ, ೆನ್ ಎಸ್ ಸಿ ಮೇಲೆ ಸಿಗುವ ಬಡ್ಡಿಗೆ ಟ್ಯಾಕ್ಸ್ ವಿಧಿಸಲಾಗುತ್ತದೆ.
ಇನ್ನು ಅಂಚೆ ಕಚೇರಿಯ ಈ ಎನ್ ಎಸ್ ಸಿ ಯೋಜನೆಯನ್ನು ನೀವು ದೇಶದ ಯಾವುದೇ ಅಂಚೆ ಕಚೇರಿಯಲ್ಲಿ ಆರಂಭಿಸಬಹುದು. ಅಷ್ಟೇ ಅಲ್ಲ ದೇಶದ ಯಾವುದೇ ಅಂಚೆ ಕಚೇರಿಗೆ ವರ್ಗಾಯಿಸುವ ಆಯ್ಕೆಯೂ ಕೂಡ ಇದೆ.
ಇದನ್ನೂ ಓದಿ : ನಾರದ ಸ್ಟಿಂಗ್ ಕೇಸ್: ನನ್ನನ್ನೂ ಬಂಧಿಸಿ… ಸಿಬಿಐ ಕಚೇರಿಯಲ್ಲಿ ಮಮತಾ ಹೈಡ್ರಾಮಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.