ಸಣ್ಣ ಉಳಿತಾಯಗಳ ಮೇಲಿನ ಬಡ್ಡಿ ಇಳಿಕೆ
Team Udayavani, Jun 30, 2019, 6:00 AM IST
ನವದೆಹಲಿ: ಪಿಪಿಎಫ್ ಹಾಗೂ ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರದಂತಹ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರವನ್ನು ಶೇ. 0.1ರಷ್ಟು ಇಳಿಕೆ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಕೆಲವೇ ದಿನಗಳ ಹಿಂದೆ ಆರ್‌ಬಿಐ ಬಡ್ಡಿ ದರವನ್ನು ಇಳಿಕೆ ಮಾಡಿದ್ದಕ್ಕೆ ಪೂರಕವಾಗಿ ಸರ್ಕಾರ ಈ ಕ್ರಮ ಕೈಗೊಂಡಿದೆ. ಜುಲೈ-ಸೆಪ್ಟೆಂಬರ್ ತ್ತೈಮಾಸಿಕಕ್ಕೆ ಬದಲಾದ ಬಡ್ಡಿ ದರ ಅನ್ವಯವಾಗಲಿದೆ.
ಪಿಪಿಎಫ್, ಎನ್‌ಎಸ್‌ಸಿಗೆ ಶೇ.8ರ ಬದಲಿಗೆ ಶೇ.7.9 ಬಡ್ಡಿ ದರ ಅನ್ವಯವಾಗಲಿದೆ. ಕಿಸಾನ್ ವಿಕಾಸ ಪತ್ರವು 113 ದಿನಗಳಲ್ಲಿ ಪ್ರಾಪ್ತವಾಗಲಿದ್ದು, ಶೇ.7.6ರಷ್ಟು ಬಡ್ಡಿ ಲಭ್ಯವಾಗಲಿದೆ. ಪ್ರಸ್ತುತ ಕಿಸಾನ್ ವಿಕಾಸ ಪತ್ರಕ್ಕೆ ಶೇ.7.7 ಬಡ್ಡಿ ದರ ಇದ್ದು, 112 ತಿಂಗಳ ಅವಧಿ ಇದೆ. ಇನ್ನು ಸುಕನ್ಯಾ ಸಮೃದ್ಧಿ ಯೋಜನೆ ಅಡಿಯಲ್ಲಿ ಶೇ.8.5ರ ಬದಲಿಗೆ ಶೇ.8.4 ಬಡ್ಡಿ ಸಿಗಲಿದೆ. ಹಿರಿಯ ನಾಗರಿಕರ ಐದು ವರ್ಷದ ಉಳಿತಾಯ ಯೋಜನೆಗೆ ಶೇ.8.7ರ ಬದಲಿಗೆ ಶೇ.8.6 ಬಡ್ಡಿ ಸಿಗಲಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.