ಸರ್ಕಾರಿ ಬ್ಯಾಂಕ್‌ಗಳ ಎನ್‌ಪಿಎ 7ಲಕ್ಷ ಕೋಟಿ: RBI
Team Udayavani, Dec 25, 2017, 12:32 PM IST
ನವದೆಹಲಿ: ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಅನುತ್ಪಾದಕ ಆಸ್ತಿ (ಎನ್‌ಪಿಎ) 7.34 ಲಕ್ಷ ಕೋಟಿ ರೂ.ಗೆ ತಲುಪಿದೆ. ಇದು ಸೆಪ್ಟೆಂಬರ್ ಅಂತ್ಯದ ವರೆಗಿನ ಮಾಹಿತಿ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ದೃಢಪಡಿಸಿದೆ. ಖಾಸಗಿ ಕ್ಷೇತ್ರದ ಬ್ಯಾಂಕ್ ಗಳ ಅನುತ್ಪಾದಕ ಆಸ್ತಿಯ ಪ್ರಮಾಣ ಇದೇ ಅವಧಿಯಲ್ಲಿ 1.03 ಲಕ್ಷ ಕೋಟಿ ರೂ. ಆಗಿದೆ. ಆರ್ ಬಿಐ ದಾಖಲೆಗಳಿಗೆ ಪೂರಕವಾಗಿ ಕೇಂದ್ರ ಹಣಕಾಸು
ಸಚಿವಾಲಯ ನೀಡಿದ ದಾಖಲೆಗಳೂ ಸ್ಪಷ್ಟವಾಗಿ ಇದೇ ಅಂಶವನ್ನೂ ಸೂಚಿಸಿವೆ.
ಕೇಂದ್ರ ಸರ್ಕಾರವೇ ನೀಡಿದ ಮಾಹಿತಿ ಪ್ರಕಾರ, ಬ್ಯಾಂಕಿಂಗ್ ಕ್ಷೇತ್ರದ ಒಟ್ಟು ಎನ್‌ಪಿಎ ಪೈಕಿ ಶೇ.77ರಷ್ಟನ್ನು ಖಾಸಗಿ ಕ್ಷೇತ್ರದ ಪ್ರಮುಖ ಕಂಪನಿಗಳು ಮತ್ತು ಕಾರ್ಪೊರೇಟ್ ಸಂಸ್ಥೆಗಳೇ ಹೊಂದಿವೆ.
ಸರ್ಕಾರಿ ಬ್ಯಾಂಕ್‌ಗಳ ಪೈಕಿ ಎಸ್‌ಬಿಐ 1.86 ಲಕ್ಷ ಕೋಟಿ ರೂ, ಪಂಜಾಬ್ ನ್ಯಾಷನಲ್ ಬ್ಯಾಂಕ್ 57,630 ಕೋಟಿ ರೂ., ಬ್ಯಾಂಕ್ ಆಫ್ ಇಂಡಿಯಾ 49,307 ಕೋಟಿ ರೂ., ಬ್ಯಾಂಕ್ ಆಫ್ ಬರೋಡಾ 46,307 ಕೋಟಿ ರೂ., ಕೆನರಾ ಬ್ಯಾಂಕ್ 39, 166 ಕೋಟಿ ರೂ.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ 38,286 ಕೋಟಿ ರೂ. ಎನ್‌ಪಿಎ ಹೊಂದಿವೆ. ಖಾಸಗಿ ರಂಗದ ಬ್ಯಾಂಕ್‌ಗಳ ಪೈಕಿ ಐಸಿಐಸಿಐ ಬ್ಯಾಂಕ್ 44,237 ಕೋಟಿ ರೂ, ಆ್ಯಕ್ಸಿಸ್ ಬ್ಯಾಂಕ್ 22,136 ಕೋಟಿ ರೂ. ಮೌಲ್ಯದ ಎನ್‌ಪಿಎ ಹೊಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kitchen appliance: ಬಜಾಜ್ ನಿಂದ ಅಡುಗೆ ಮನೆಗೆ ಬಂತು ಮತ್ತೊಂದು ಸಾಧನ!
ರಿಲಯನ್ಸ್‌ನಿಂದ ‘ರಸ್‌ಕಿಕ್’ ಎನರ್ಜಿ ಡ್ರಿಂಕ್ ಬಿಡುಗಡೆ
Table Space: ಟೇಬಲ್ ಸ್ಪೇಸ್ ಸ್ಥಾಪಕ ಅಮಿತ್ ಬ್ಯಾನರ್ಜಿ ಹೃದಯಾಘಾತದಿಂದ ನಿಧನ
Stock Market: HMPV ಎಫೆಕ್ಟ್ – ಷೇರುಪೇಟೆ ಸೆನ್ಸೆ*ಕ್ಸ್ 1,000ಕ್ಕೂ ಅಧಿಕ ಅಂಕ ಕುಸಿತ!
2024ರಲ್ಲಿ ಆಟೋ ಮೊಬೈಲ್ ಕ್ಷೇತ್ರಕ್ಕೆ ಲಾಭ: ದಾಖಲೆ ಮಾರಾಟ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.