ನೂರು ದಿನದಲ್ಲಿ ಶತಕೋಟಿ ವ್ಯವಹಾರದ ಸಾಧನೆ ; ಪುಣೆ ಮೂಲದ ಈ ಕಂಪೆನಿ ಬಗ್ಗೆ ನಿಮಗೆ ಗೊತ್ತಾ?
Team Udayavani, Sep 15, 2020, 3:23 PM IST
ನೆಟ್ ಸರ್ಫ್ ಕಂಪೆನಿಯ ಸಂಸ್ಥಾಪಕ ಮತ್ತು ಮುಖ್ಯಸ್ಥ ಸುಜಿತ್ ಜೈನ್.
ಮುಂಬಯಿ: ಕೋವಿಡ್ 19 ಮಹಾಮಾರಿ ಭಾರತ ಮಾತ್ರವಲ್ಲದೇ ಜಗತ್ತಿನ ಆರ್ಥಿಕತೆಯನ್ನೇ ಪಾತಾಳಕ್ಕೆ ತಳ್ಳಿದೆ.
ಅದರಲ್ಲೂ ಅಭಿವೃದ್ಧಿ ಪಥದಲ್ಲಿದ್ದ ಭಾರತದ ಆರ್ಥಿಕತೆಯ ಮತ್ತು ಇಲ್ಲಿನ ವ್ಯಾಪಾರ ವಹಿವಾಟುಗಳ ಮೇಲೆ ಕೋವಿಡ್ 19 ಸಂಬಂಧಿತ ಲಾಕ್ ಡೌನ್ ನೀಡಿರುವ ಹೊಡೆತ ಅಷ್ಟಿಷ್ಟಲ್ಲ.
ಆದರೆ ಈ ಎಲ್ಲಾ ವ್ಯತಿರಿಕ್ತತೆಗಳ ನಡುವೆಯೂ ಕೆಲವೊಂದು ಭರವಸೆಯ ಬೆಳಕುಗಳು ನಮ್ಮ ಆರ್ಥಿಕತೆಯಲ್ಲಿ ಆಗೊಮ್ಮೆ ಈಗೊಮ್ಮೆ ಕಾಣಿಸಿಕೊಳ್ಳುತ್ತಿವೆ.
ಇದಕ್ಕೊಂದು ಉದಾಹರಣೆಯಾಗಿ ನಿಂತಿದೆ ಪುಣೆ ಮೂಲದ ಡೈರೆಕ್ಟ್ ಮಾರ್ಕೆಟಿಂಗ್ ಕಂಪೆನಿ ‘ನೆಟ್ ಸರ್ಫ್’ ನಡೆಸಿರುವ ವ್ಯವಹಾರ.
ಪ್ರಮುಖವಾಗಿ ಹರ್ಬಲ್ ಉತ್ಪನ್ನಗಳನ್ನು ಮತ್ತು ಸಾವಯವ ಕೃಷಿ ಔಷಧಿ ಉತ್ಪನ್ನಗಳನ್ನು ಮಾರುಕಟ್ಟೆ ಮಾಡುತ್ತಿರುವ ಈ ಕಂಪೆನಿ ಕಳೆದ ಮೂರು ತಿಂಗಳುಗಳ ಅವಧಿಯಲ್ಲಿ ಬರೋಬ್ಬರಿ 100 ಕೊಟಿ ರೂಪಾಯಿಗಳ ವ್ಯವಹಾರವನ್ನು ನಡೆಸಿ ಹೊಸ ದಾಖಲೆಯನ್ನು ಬರೆದಿದೆ.
ಕಳೆದ ಎಪ್ರಿಲ್ 10ರಿಂದ ಪ್ರಾರಂಭಿಸಿ ಈ ನೂರು ದಿನಗಳ ಅವಧಿಯಲ್ಲಿ ನೆಟ್ ಸರ್ಫ್ ಕಂಪೆನಿಯ ಒಟ್ಟು ವ್ಯವಹಾರ ನೂರು ಕೋಟಿ ರೂಪಾಯಿಗಳನ್ನು ದಾಟಿದೆ ಎಂಬ ಮಾಹಿತಿಯನ್ನು ನೆಟ್ ಸರ್ಫ್ ಕಂಪೆನಿಯ ಸಂಸ್ಥಾಪಕ ಮತ್ತು ಮುಖ್ಯಸ್ಥರಾಗಿರುವ ಸುಜಿತ್ ಜೈನ್ ಅವರು ಮನಿ ಕಂಟ್ರೋಲ್ ವೆಬ್ ಸೈಟ್ ಗೆ ನೀಡಿದ್ದಾರೆ.
ಇದನ್ನೂ ಓದಿ: ಸ್ಯಾಂಡಲ್ ವುಡ್ ನಶೆ ನಂಟು: ಸೆಲೆಬ್ರೆಟಿ ದಂಪತಿ ದಿಗಂತ್ – ಐಂದ್ರೀತಾಗೆ ಸಿಸಿಬಿ ನೋಟಿಸ್
ದೇಶದಲ್ಲಿ ಲಾಕ್ ಡೌನ್ ಪರಿಸ್ಥಿತಿ ಇದ್ದ ಸಂದರ್ಭದಲ್ಲೂ ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ 2,31,600 ನೇರ ಮಾರಾಟಗಾರರು (ಡೈರೆಕ್ಟ್ ಸೆಲ್ಲರ್ಸ್) ನೆಟ್ ಸರ್ಫ್ ಮೂಲಕ ತಮ್ಮ ವ್ಯವಹಾರವನ್ನು ನಡೆಸಿದ್ದಾರೆ, ಮತ್ತು ಸದ್ಯ ಈ ಕಂಪೆನಿ ಭಾರತದಲ್ಲಿ 2.5 ಮಿಲಿಯನ್ ಗ್ರಾಹಕರನ್ನು ಹೊಂದಿದೆ ಎಂದು ಜೈನ್ ಮಾಹಿತಿ ನೀಡಿದ್ದಾರೆ.
ಭಾರತದಲ್ಲಿ 2019ರಲ್ಲಿ ನೇರ ಮಾರಾಟ ಮಾರುಕಟ್ಟೆ (ಡೈರೆಕ್ಟ್ ಸೆಲ್ಲಿಂಗ್ ಇಂಡಸ್ಟ್ರಿ) ಒಟ್ಟಾರೆಯಾಗಿ 18,144 ಕೋಟಿ ರೂಪಾಯಿಗಳ ವ್ಯವಹಾರವನ್ನು ದಾಖಲಿಸಿದೆ ಮತ್ತು ಆಮ್ ವೇಯಂತಹ ಕಂಪೆನಿಗಳು ಇದರಲ್ಲಿ ಪಾರಮ್ಯವನ್ನು ಸಾಧಿಸಿವೆ.
ಗ್ರಾಹಕರಿಗೆ ನೇರವಾಗಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವ ವ್ಯವಸ್ಥೆಗೆ ನೇರ ಮಾರುಕಟ್ಟೆ ಅಥವಾ ಡೈರೆಕ್ಟ್ ಸೆಲ್ಲಿಂಗ್ ಎಂದು ಕರೆಯಲಾಗುತ್ತದೆ. ಇಲ್ಲಿ ವ್ಯಕ್ತಿಗಳಿಂದ ವ್ಯಕ್ತಿಗಳಿಗೆ ನಿರ್ದಿಷ್ಟ ಕಂಪೆನಿಗಳ ಉತ್ಪನ್ನಗಳ ಮಾರಾಟ ಮತ್ತು ಪ್ರಚಾರ ನಡೆಯುವುದು ವಿಶೇಷವಾಗಿದೆ.
ಇನ್ನು ನೆಟ್ ಸರ್ಫ್ ಕಂಪೆನಿಯು ಒಟ್ಟು 5 ವಿಭಾಗಗಳಲ್ಲಿ ಸುಮಾರು 60 ಪ್ರಾಕೃತಿಕ ಮತ್ತು ಗಿಡಮೂಲಿಕಾ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ಹೆಲ್ತ್ ಕೇರ್, ಪರ್ಸನಲ್ ಕೇರ್, ಹೋಂ ಕೇರ್ , ಕಲರ್ ಕಾಸ್ಮೆಟಿಕ್ಸ್ ಮತ್ತು ಕೃಷಿಗೆ ಸಂಬಂಧಿಸಿದ ರಾಸಾಯನಿಕ ರಹಿತ ಉತ್ಪನ್ನಗಳನ್ನು ದೇಶವ್ಯಾಪಿಯಾಗಿ ಮಾರಾಟ ಮಾಡುತ್ತಿರುವುದು ನೆಟ್ ಸರ್ಫ್ ಕಂಪೆನಿಯ ವಿಶೇಷತೆಯಾಗಿದೆ.
ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಳವಾಗಲು ನ್ಯಾಚುರಾಮೋರ್, ಸಾವಯವ ಕೃಷಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಬಯೋಫಿಟ್ ಸರಣಿ ಉತ್ಪನ್ನಗಳು ಸಹಿತ ಹಲವಾರು ಜನಸ್ನೇಹಿ ಉತ್ಪನ್ನಗಳನ್ನು ನೆಟ್ ಸರ್ಫ್ ತನ್ನ ವಿಶಾಲ ಗ್ರಾಹಕರಿಗೆ ನೀಡುತ್ತಿದೆ.
ಇದನ್ನೂ ಓದಿ: ಜಿನ್‌ಪಿಂಗ್‌ಗೆ ತೀವ್ರ ಮುಖಭಂಗ; ಭಾರತದ ಮೇಲೆ ಚೀನಾದಿಂದ ದೊಡ್ಡ ದಾಳಿಗೆ ಸಿದ್ಧತೆ?
2001ರಲ್ಲಿ ಸಾಫ್ಟ್ ವೇರ್ ಉತ್ಪನ್ನಗಳ ನೇರ ಮಾರಾಟ ಮಾಡುವ ಸಂಸ್ಥೆಯಾಗಿ ಜನ್ಮತಳೆದ ನೆಟ್ ಸರ್ಫ್ ಕಳೆದ 20 ವರ್ಷಗಳಲ್ಲಿ ಡೈರೆಕ್ಟ್ ಮಾರ್ಕೆಟಿಂಗ್ ಕ್ಷೇತ್ರದಲ್ಲಿ ದೈತ್ಯ ಶಕ್ತಿಯಾಗಿ ಹೊರಹೊಮ್ಮಿದೆ. ಮಾತ್ರವಲ್ಲದೇ 2020ನೇ ಹಣಕಾಸು ವರ್ಷದಲ್ಲಿ ಈ ಕಂಪೆನಿಯು 275 ಕೋಟಿ ರೂಪಾಯಿಗಳ ವ್ಯವಹಾರವನ್ನು ಈಗಾಗಲೇ ದಾಖಲಿಸಿದೆ. ಅಮೆರಿಕಾ ಮತ್ತು ಥಾಯ್ಲೆಂಡ್ ಗಳಲ್ಲೂ ತನ್ನ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳುವ ಯೋಜನೆಯನ್ನು ಸಂಸ್ಥೆಯು ಹೊಂದಿದೆ.
ಜಾಗತಿಕ ನೇರ ಮಾರುಕಟ್ಟೆ ವಿಚಾರಕ್ಕೆ ಸಂಬಂಧಿಸಿದಂತೆ 2019ರಲ್ಲಿ ಭಾರತ ವರ್ಷದಿಂದ ವರ್ಷದ ಪ್ರಗತಿಯಲ್ಲಿ 12.1% ಬೆಳವಣಿಗೆಯನ್ನು ದಾಖಲಿಸಿದೆ. ಇನ್ನು ಜಗತ್ತಿನ 20 ದೈತ್ಯ ನೇರ ಮಾರುಕಟ್ಟೆ ಕಂಪೆನಿಗಳ ಪ್ರಗತಿ ವಿಚಾರದಲ್ಲಿ ಕಳೆದ ಮೂರು ವರ್ಷದಲ್ಲಿ ಭಾರತದ ಕಂಪೆನಿಗಳು 16.3% ಬೆಳವಣಿಗೆಯನ್ನು ದಾಖಲಿಸಿದೆ. ಭಾರತದಲ್ಲಿ ಡೈರೆಕ್ಟ್ ಸೆಲ್ಲಿಂಗ್ ಮಾರ್ಕೆಟ್ ಕ್ಷೇತ್ರವು 57.50 ಲಕ್ಷ ಜನರಿಗೆ ಉದ್ಯೋಗವಕಾಶವನ್ನು ನೀಡಿದೆ.
ಒಟ್ಟಿನಲ್ಲಿ ಪ್ರಧಾನಮಂತ್ರಿಯವರ ‘ವೋಕಲ್ ಫಾರ್ ಲೋಕಲ್’ ಮತ್ತು ಆತ್ಮ ನಿರ್ಭರ ಭಾರತ ಪರಿಕಲ್ಪನೆಗೆ ಸೂಕ್ತವಾಗಿ ನೆಟ್ ಸರ್ಫ್ ಕಂಪೆನಿಯು ತನ್ನ ವ್ಯವಹಾರ ಕ್ಷೇತ್ರವನ್ನು ವಿಸ್ತರಿಸುತ್ತಾ ಸಾಗುತ್ತಿದೆ.
ಇದನ್ನೂ ಓದಿ: ವಯಸ್ಸು ಒಂದು ಸಂಖ್ಯೆಯಷ್ಟೇ: ಅದ್ಭುತ ಕ್ಯಾಚ್ ನೊಂದಿಗೆ ಗತಕಾಲ ನೆನಪಿಸಿದ ಜಾಂಟಿ ರೋಡ್ಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.