ಪಿಎನ್‌ಬಿ ಮುಂಬಯಿ ಶಾಖೆಯಲ್ಲಿ 1.77 ಬಿಲಿಯ ಡಾಲರ್ ವಂಚನೆ ?
Team Udayavani, Feb 14, 2018, 3:35 PM IST
ಮುಂಬಯಿ : ಸರಕಾರಿ ಒಡೆತನದ ಪಂಜಾಬ್ ನ್ಯಾಶನಲ್ ಬ್ಯಾಂಕ್ ಇಂದು ಬುಧವಾರ ಮುಂಬಯಿಯಲ್ಲಿನ ತನ್ನ ಕೆಲವು ಶಾಖೆಗಳಲ್ಲಿ 1.77 ಶತಕೋಟಿ ಡಾಲರ್‌ಗಳ ಬೃಹತ್ ವಂಚನೆ ಮತ್ತು ಅನಧಿಕೃತ ವಹಿವಾಟು ನಡೆದಿರುವುದನ್ನು ತಾನು ಪತ್ತೆ ಹಚ್ಚಿರುವುದಾಗಿ ಹೇಳಿದೆ.
ಆಯ್ದ ಕೆಲವು ಖಾತೆದಾರರ ಲಾಭಕ್ಕಾಗಿ ಮತ್ತು ಅವರಿಗೆ ಗೊತ್ತಿರುವ ರೀತಿಯಲ್ಲೇ ಈ ಅನಧಿಕೃತ ಮತ್ತು ವಂಚನೆಯ ವಹಿವಾಟುಗಳು ನಡೆದಿದ್ದು ಈ ವಹಿವಾಟುಗಳ ಆಧಾರದಲ್ಲಿ ಇತರ ಬ್ಯಾಂಕುಗಳು ವಿದೇಶದಲ್ಲಿನ ಆ ಗ್ರಾಹಕರಿಗೆ ಬೃಹತ್ ಮೊತ್ತದ ಸಾಲ ನೀಡಿರುವುದು ಕಂಡು ಬಂದಿದೆ; ಈ ವಿಷಯವನ್ನು ತಾನು ಹಣಕಾಸು ನಿಯಂತ್ರಣ ಸಂಸ್ಥೆಗೆ ಸಲ್ಲಿಸಿರುವ ಮಾಹಿತಿಯಲ್ಲಿ ತಿಳಿಸಿದ್ದೇನೆ ಎಂದು ಪಂಜಾಬ್ ನ್ಯಾಶನಲ್ ಬ್ಯಾಂಕ್ ಹೇಳಿದೆ.
ಪಂಜಾಬ್ ನ್ಯಾಶನಲ್ ಬ್ಯಾಂಕ್ ಗ್ರಾಹಕರಿಗೆ ಬೃಹತ್ ಪ್ರಮಾಣದಲ್ಲಿ ಸಾಲ ನೀಡುವ ದೇಶದ ಎರಡನೇ ಅತೀ ದೊಡ್ಡ ಸರಕಾರಿ ಒಡೆತನದ ಬ್ಯಾಂಕ್ ಆಗಿದೆ ಮತ್ತು ಅದು ಹೊಂದಿರುವ ಒಟ್ಟಾರೆ ಆಸ್ತಿಯಿಂದಾಗಿ ದೇಶದ ನಾಲ್ಕನೇ ಅತೀ ದೊಡ್ಡ ಬ್ಯಾಂಕ್ ಎನಿಸಿದೆ.
ತಾನು ಪತ್ತೆ ಹಚ್ಚಿರುವ ಬೃಹತ್ ಮೊತ್ತದ ವಂಚನೆ ಮತ್ತು ಅನಧಿಕೃತ ವಹಿವಾಟಿನಲ್ಲಿ ಶಾಮೀಲಾದ ವ್ಯಕ್ತಿಗಳನ್ನು ಪಿಎನ್‌ಬಿ ಹೆಸರಿಸಿಲ್ಲ. ಆದರೆ ಈ ವಹಿವಾಟುಗಳ ಪರಿಣಾಮವಾಗಿ ತಾನು ಯಾವುದೇ ರೀತಿಯ ಹಣಕಾಸು ಬಾಧ್ಯತೆಯನ್ನು ಎದುರಿಸಬೇಕಾದೀತೇ ಎಂಬುದನ್ನು ತಾನು ಮುಂಬರುವ ದಿನಗಳಲ್ಲಿ ವಿಶ್ಲೇಷಿಸುವುದಾಗಿ ಅದು ಕಾನೂನು ಅನುಷ್ಠಾನ ಸಂಸ್ಥೆಗೆ ತಿಳಿಸಿದೆ.
‘ಬ್ಯಾಂಕಿನಲ್ಲಿ ಈ ಬಗೆಯ ವಹಿವಾಟುಗಳು ತುರ್ತು ಸ್ವರೂಪದ್ದಾಗಿವೆ. ಇವುಗಳಲ್ಲಿನ ಸಾಚಾತನದಿಂದ ತನಗೆ ಕಾನೂನಿನ ಪ್ರಕಾರ ಉಂಟಾಗುವ ಹಣಕಾಸು ಬಾಧ್ಯತೆಗಳನ್ನು ತಾನು ನಿರ್ಧರಿಸುವುದಾಗಿ ಪಿಎನ್‌ಬಿ ಹೇಳಿದೆ.
ಈ ಬೃಹತ್ ಪ್ರಮಾಣದ ಅನಧಿಕೃತ ಮತ್ತು ವಂಚನೆಯ ವಹಿವಾಟುಗಳು ಪತ್ತೆಯಾದ ಸುದ್ದಿ ಬಹಿರಂಗವಾದೊಡನೆಯೇ ಶೇರು ಮಾರುಕಟ್ಟೆಯಲ್ಲಿ ಪಿಎನ್‌ಬಿ ಶೇರುಗಳು ಬೆಳಗ್ಗೆ 10 ಗಂಟೆಯ ಸುಮಾರಿಗೆ ಶೇ.4.1ರಷ್ಟು ಕಡಿಮೆ ಧಾರಣೆಯಲ್ಲಿ ವಹಿವಾಟಾಗುತ್ತಿದ್ದವು. ಆರಂಭಿಕ ವಹಿವಾಟಿನಲ್ಲಿಂದು ಪಿಎನ್‌ಬಿ ಶೇರುಗಳು ಶೇ.5.7ರಷ್ಟು ಪತನಗೊಂಡಿದ್ದವು.
ಪಿಎನ್‌ಬಿ ಈಗಾಗಲೇ ಇತರ ವಂಚನೆಯ ವಹಿವಾಟುಗಳ ಆಪಾದನೆಯನ್ನು ಎದುರಿಸುತ್ತಿದೆ. ಕಳೆದ ವಾರ ಭಾರತೀಯ ಫೆಡರಲ್ ಏಜಂಟರುಗಳು ತಾವು ದೇಶದ ಅತ್ಯಂತ ಸಿರಿವಂತ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ಬಿಲಿಯಾಧಿಪತಿ ಜ್ಯುವೆಲ್ಲರ್ ನೀರವ್ ಮೋದಿ ವಿರುದ್ಧ ತನಿಖೆ ಆರಂಭಿಸಿರುವುದಾಗಿ ಹೇಳಿದ್ದರು. ನೀರವ್ ಮೋದಿ ಪಿಎನ್‌ಬಿಗೆ 44 ದಶಲಕ್ಷ ಡಾಲರ್ ವಂಚಿಸಿರುವ ಆರೋಪವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.