ಬ್ಯಾಂಕಿಂಗ್ ವಂಚನೆಗೆ ಒಳಗಾಗಿದ್ದೀರಾ..? ನಿಮ್ಮ ಹಣವನ್ನು ನೀವು ಹಿಂಪಡೆಯಬಹುದು..!
ಬ್ಯಾಂಕಿಂಗ್ ವಂಚನೆಗೊಳಗಾಗಿದ್ದಲ್ಲಿ ದೂರು ಸಲ್ಲಿಸಿದರೆ ಹಣ ಹಿಂಪಡೆಯಬಹುದು : ಆರ್ ಬಿ ಐ ಹೇಳಿದ್ದೇನು..?
Team Udayavani, Jun 4, 2021, 4:53 PM IST
ನವ ದೆಹಲಿ : ತಾಂತ್ರಿಕತೆ ಎಷ್ಟು ಅನುಕೂಲ ತಂದುಕೊಟ್ಟಿದೆಯೋ ಅಷ್ಟೇ ಅನಾನುಕೂಲತೆಯನ್ನು ತಂದುಕೊಟ್ಟಿದೆ ಎನ್ನುವುದು ಸತ್ಯ. ಡಿಜಿಟಲ್ ಯುಗದಲ್ಲಿ ವಂಚನೆಯ ಘಟನೆಗಳು ದಿನ ನಿತ್ಯ ಎಗ್ಗಿಲ್ಲದೇ ನಡೆಯುತ್ತದೆ.
ಬ್ಯಾಂಕಿಂಗ್ ವಿಚಾರದಲ್ಲಿ ಇತ್ತೀಚಿಗಿನ ದಿನಗಳಲ್ಲಿ ಲೆಕ್ಕವಿಲದಲದಿಷ್ಟು ಬ್ಯಾಂಕಿಂಗ್ ಸೈಬರ್ ವಂಚನೆಗಳು ನಡಯುತ್ತಿವೆ. ಈ ಸೈಬರ್ ವಂಚನೆಯ ಪ್ರಕರಣಗಳನ್ನು ತಡೆಗಟ್ಟುವ ಉದ್ದೇಶದಿಂದಲೇ ಈಗಾಗಲೇ ಹಲವಾರು ಬ್ಯಾಂಕುಗಳು ತನ್ನ ಗ್ರಾಹಕರಿಗೆ ಎಚ್ಚರಿಕೆಯನ್ನು ನೀಡಿವೆ.
ಇದನ್ನೂ ಓದಿ : ಸರ್ಕಾರದ ಎಡಬಿಡಂಗಿತನ ಕಂಡು ಜನತೆ ಹಾದಿ ಬೀದಿಯಲ್ಲಿ ನಗುವಂತಾಗಿದೆ: ಕುಮಾರಸ್ವಾಮಿ
ವಂಚಕರು ನೇರವಾಗಿ ನಿಮ್ಮ ಖಾತೆಗೆ ಕೈ ಹಾಕಿ ನಿಮ್ಮ ಖಾತೆಯನ್ನು ಕಾಲಿ ಮಾಡುತ್ತಿರವ ಪೊ್ರಕರಣಗಳು ಇತ್ತೀಚಿಗಿನ ದಿನಗಳಲ್ಲಿ ಬೆಳಕಿಗೆ ಬಂದಿವೆ. ನಿಮಗೆ ಗೊತ್ತಿಲ್ಲದ ಹಾಗೆ ಬ್ಯಾಂಕ್ ಸಿಬ್ಬಂದಿಗಳೆಂದು ವಂಚಿಸಿ ನಿಮ್ಮ ಬ್ಯಾಂಕ್ ಖಾತೆಯ ವಿವರಗಳನ್ನು ಪಡೆದು ನಿಮಗೆ ತಿಳಿಯದಂತೆ ನಿಮ್ಮ ಖಾತೆ ಖಾಲಿ ಮಾಡುತ್ತಾರೆ. ಆದರೇ, ಇಂತಹ ಪ್ರಕರಣಗಳು ಜಾಸ್ತಿಯಾದ ಹಿನ್ನೆಲೆಯಲ್ಲಿ ಗ್ರಾಹಕ ಸ್ನೇಹಿ ಮಾಹಿತಿಯೊಂದನ್ನು ಆರ್ ಬಿ ಐ ಇತ್ತೀಚೆಗೆ ತಿಳಿಸಿದೆ.
ಸೈಬರ್ ವಂಚನೆಗೆ ಒಳಗಾದವರು ತಮ್ಮ ಹಣವನ್ನು ಮರಳಿ ಪಡೆಯುವುದು ಹೇಗೆ ಎಂಬ ಬಗ್ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಾಹಿತಿ ನೀಡಿದೆ. ಯಾವುದೇ ಅನಧಿಕೃತ ವಹಿವಾಟಿನ ನಂತರವೂ ನಿಮ್ಮ ಪೂರ್ಣ ಹಣವನ್ನು ಮರಳಿ ಪಡೆಯಬಹುದು ಎಂದು ರಿಸರ್ವ್ ಬ್ಯಾಂಕ್ ಹೇಳಿದೆ.
ಬ್ಯಾಂಕಿಂಗ್ ವಂಚನೆಗೆ ಒಳಗಾಗಿದ್ದಲ್ಲಿ ತಕ್ಷಣವೇ ಬ್ಯಾಂಕ್ ಗಳಿಗೆ ವಿಚಾರವನ್ನು ತಲುಪಿಸುವುದರ ಮೂಲಕ ನಿಮ್ಮ ಖಾತೆಗೆಯಲ್ಲಿದ್ದಷ್ಟು ಪೂರ್ತಿ ಹಣವನ್ನು ಮರಳಿ ಪಡೆಯಬಹುದು ಎಂದು ಆರ್ ಬಿ ಐ ಮಾಹಿತಿ ನೀಡಿದೆ.
ಪೂರ್ಣ ಹಣವನ್ನು ಹಿಂಪಡೆಯುವುದು ಸಾಧ್ಯವೇ.?
ಸೈಬರ್ ವಂಚನೆಯ ದೃಷ್ಟಿಯಿಂದ ಬ್ಯಾಂಕುಗಳು ವಿಮಾ ಪಾಲಿಸಿಯನ್ನು ಮಾಡುತ್ತದೆ. ನಿಮಗೆ ಸಂಭವಿಸಿದ ವಂಚನೆಯ ಬಗ್ಗೆ ಎಲ್ಲಾ ಮಾಹಿತಿಯನ್ನು ಬ್ಯಾಂಕ್ ನೇರವಾಗಿ ವಿಮಾ ಕಂಪನಿಗೆ ತಿಳಿಸುತ್ತದೆ ಮತ್ತು ಅಲ್ಲಿಂದ ವಿಮಾ ಹಣವನ್ನು ತೆಗೆದುಕೊಳ್ಳುವ ಮೂಲಕ ನಿಮ್ಮ ನಷ್ಟವನ್ನು ಸರಿದೂಗಿಸುತ್ತದೆ.
ನಿಮ್ಮ ಬ್ಯಾಂಕ್ ಖಾತೆಯಿಂದ ಯಾರಾದರೂ ನಿಮಗೆ ಗೊತ್ತಿಲ್ಲದೇ ಹಣವನ್ನು ಹಿಂತೆಗೆದುಕೊಂಡರೆ ಮತ್ತು ನೀವು ಮೂರು ದಿನಗಳೊಳಗೆ ಈ ವಿಷಯದ ಬಗ್ಗೆ ಬ್ಯಾಂಕಿಗೆ ದೂರು ನೀಡಿದರೆ, ನೀವು ಈ ನಷ್ಟ ಅನುಭವವಿಸಬೇಕಾಗಿಲ್ಲ. ಗ್ರಾಹಕರ ಖಾತೆಯಿಂದ ಮೋಸದಿಂದ ಪಡೆಯಲಾದ ಮೊತ್ತವನ್ನು ನಿಗದಿತ ಸಮಯದೊಳಗೆ ಬ್ಯಾಂಕ್ ಗೆ ತಿಳಿಸಿದರೆ ನಂತರ 10 -30 ದಿನಗಳಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಹಣ ಹಿಂತಿರುಗಿಸಲಾಗುತ್ತದೆ. ಮೂರು ದಿನಗಳಾದ ಮೇಲೆ ಬ್ಯಾಂಕ್ ಖಾತೆ ವಂಚನೆ ಬಗ್ಗೆ ದೂರ ದಾಖಲಿಸಿದರೆ ಗ್ರಾಹಕರು 25 ಸಾವಿರ ರೂ.ಗಳ ನಷ್ಟವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಆರ್ ಬಿ ಐ ಮಾಹಿತಿ ನೀಡಿದೆ.
ಇನ್ನು, ಸೈಬರ್ ವಂಚನೆಯಿಂದ ಪಾರಾಗಲು ನೀವು ವಿಮೆಯನ್ನು ಸಹ ಪಡೆಯಬಹುದು. ಬಜಾಜ್ ಅಲಿಯಾನ್ಸ್ ಮತ್ತು ಎಚ್ ಡಿ ಎಫ್ ಸಿ ಅರ್ಗೋ ಮುಂತಾದ ಕಂಪನಿಗಳು ಅಂತಹ ವಿಮೆಯನ್ನು ಒದಗಿಸುತ್ತವೆ. ಇದರಲ್ಲಿ, ನಿಮ್ಮ ಖಾತೆಯಲ್ಲಿ ಯಾವುದೇ ಸೈಬರ್ ವಂಚನೆ ನಡೆದರೆ ನಿಮ್ಮ ಹಣವನ್ನು ನೀವು ಮರಳಿ ಪಡೆಯಲು ಸಾಧ್ಯವಿದೆ.
ಇದನ್ನೂ ಓದಿ : ಜೂ.15ರಿಂದ ಶೈಕ್ಷಣಿಕ ವರ್ಷಾರಂಭವಿಲ್ಲ; 2021-22ನೇ ಸಾಲಿನ ನೂತನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IRCTC Down: ತಾಂತ್ರಿಕ ದೋಷ- ರೈಲು ಟಿಕೆಟ್ ಬುಕ್ಕಿಂಗ್ ಸಮಸ್ಯೆ-ಪ್ರಯಾಣಿಕರ ಆಕ್ರೋಶ
GST: ಖರೀದಿ, ಮಾರಾಟ ದರದ ವ್ಯತ್ಯಾಸಕ್ಕಷ್ಟೇ 18% ಜಿಎಸ್‌ಟಿ
Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್ ಸಿಇಒ ಸುಂದರ್ ಪಿಚೈ
RBI:ಸಾಲ ಮನ್ನಾ ಸೇರಿ ಉಚಿತ ಕೊಡುಗೆ ಆತಂಕಕಾರಿ- ಆರ್‌ಬಿಐ
Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Airtel Outage:ದೇಶದ ಹಲವೆಡೆ ಏರ್ ಟೆಲ್ Network ಸಮಸ್ಯೆ; ಏರ್ ಟೆಲ್ ಗ್ರಾಹಕರಿಂದ ದೂರು
BBK11: ದಯವಿಟ್ಟು ಬಿಗ್ ಬಾಸ್ ಮನೆಯಿಂದ ಹೋಗು.. ಚೈತ್ರಾಗೆ ಕೈಮುಗಿದು ಕೇಳಿಕೊಂಡ ರಜತ್
Belagavi: ನಕಲಿ ಗಾಂಧಿಗಳನ್ನು ಮೆಚ್ಚಿಸಲು ಕನ್ನಡಿಗರ ತೆರಿಗೆ ಹಣ ಪೋಲು: ಜಗದೀಶ್ ಶೆಟ್ಟರ್
Sonu Sood: ನನಗೆ ಸಿಎಂ, ಡಿಸಿಎಂ ಹುದ್ದೆಗೆ ಆಫರ್ ಬಂದಿತ್ತು ಆದರೆ, ಸೋನು ಸೂದ್ ಹೇಳಿದ್ದೇನು?
Manipal: ಅಪಘಾತ ತಡೆಯಲು ಹೀಗೆ ಮಾಡಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.