200ರೂ. ನೋಟು ಮುದ್ರಣ ಶುರು
Team Udayavani, Jun 29, 2017, 4:30 PM IST
ಮುಂಬೈ/ಕೋಲ್ಕತಾ: 200 ರೂ. ನೋಟು ಬಿಡುಗಡೆಗೆ ರಿಸರ್ವ್ ಬ್ಯಾಂಕ್ ತೀರ್ಮಾನಿಸಿರುವಂತೆಯೇ, ನೋಟು
ಮುದ್ರಣ ಆರಂಭಗೊಂಡಿದೆ. ರಿಸರ್ವ್ ಬ್ಯಾಂಕ್‌ನಿಂದ ಬೇಡಿಕೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ನೋಟು ಮುದ್ರಣ ಘಟಕದಲ್ಲಿ 200 ರೂ. ನೋಟು ಮುದ್ರಣ ಆರಂಭಗೊಂಡಿದೆ.
ಈ ನೋಟು ಅತ್ಯಾಧುನಿಕ ಸುರಕ್ಷತಾ ಮಾನದಂಡಗಳನ್ನು ಹೊಂದಿರಲಿದೆ. ಸದ್ಯ ಇದರ ಗುಣಮಟ್ಟ ಮತ್ತು ಭದ್ರತೆಗಳ ಕುರಿತ ಪರೀಕ್ಷೆ ಮಧ್ಯಪ್ರದೇಶದ ಹೊಸಂಗಾಬಾದ್‌ನ ಸರ್ಕಾರಿ ಮುದ್ರಣಾಲಯದಲ್ಲಿ ನಡೆಸಲಾಗುತ್ತಿದೆ ಎಂದು
ಮೂಲಗಳು ಹೇಳಿವೆ.
“200 ರೂ. ನೋಟು ಬಿಡುಗಡೆಯಿಂದ ದಿನನಿತ್ಯದ ವ್ಯವಹಾರಗಳು ಇನ್ನೂ ಸುಗಮವಾಗಲಿದೆ’ ಎಂದು ಎಸ್‌ಬಿಐ ಗ್ರೂಪ್‌ನ ಮುಖ್ಯ ಆರ್ಥಿಕ ತಜ್ಞ ಕಾಂತಿ ಘೋಷ್ ಹೇಳಿದ್ದಾರೆ. ಅಪನಗದೀಕರಣ ಬಳಿಕ ಕೇಂದ್ರ ಸರ್ಕಾರ 200 ರೂ. ನೋಟು ಹೊರತರುವ ತೀರ್ಮಾನ ಮಾಡಿತ್ತು. ಈ ಪ್ರಸ್ತಾವನೆಯನ್ನು ರಿಸರ್ವ್ ಬ್ಯಾಂಕ್ ಅನುಮೋದಿಸಿತ್ತು. 2000
ರೂ. ಮತ್ತು 500 ರೂ. ಹೊಸ ನೋಟುಗಳ ನಡುವಿನ ಅಂತರವನ್ನು 200ರ ನೋಟು ತುಂಬಲಿದೆ ಎಂದು ಘೋಷ್ ಹೇಳಿದ್ದಾರೆ.
ಜೂ.9ಕ್ಕೆ ಕೊನೆಗೊಂಡಂತೆ ಸಾರ್ವಜನಿಕವಾಗಿ 14.6 ಲಕ್ಷ ಕೋಟಿ ರೂ.ಚಲಾವಣೆಯಲ್ಲಿದೆ. ನೋಟು ಅಮಾನ್ಯಕ್ಕೆ ಹೋಲಿಕೆ ಮಾಡಿದರೆ ಅದು ಶೇ.18.4ಕ್ಕಿಂತ ಕಡಿಮೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jio domain ಗಲಾಟೆ ನಡುವೆಯೇ “ಜಿಯೋಸ್ಟಾರ್’ ಹೊಸ ವೆಬ್‌ಸೈಟ್ ಪ್ರತ್ಯಕ್ಷ!
Haldiram ಭುಜಿಯಾವಾಲಾದಲ್ಲಿ ₹235 ಕೋಟಿ ಹೂಡಿಕೆ ಮಾಡಿದ ಭಾರತ್ ವ್ಯಾಲ್ಯು ಫಂಡ್
Gold Rates:ಡಾಲರ್ ಬೆಲೆ ಏರಿಕೆ-18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?
Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….
Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ
MUST WATCH
ಹೊಸ ಸೇರ್ಪಡೆ
KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್
Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Kinnal raj; ʼಸಿಂಹರೂಪಿಣಿʼಗೆ 25ರ ಸಂಭ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.