ಈ ಬಾರಿಯೂ ಬಡ್ಡಿದರ ಶೇ.0.25 ಏರಿಕೆ? ಆರ್ಬಿಐ
Team Udayavani, Apr 4, 2023, 5:45 AM IST
ಮುಂಬೈ:ಆರ್ಬಿಐನ ವಿತ್ತೀಯ ನೀತಿ ಸಲಹಾ ಸಮಿತಿ (ಎಂಪಿಸಿ) ಸಭೆ ಮುಂಬೈನಲ್ಲಿ ಸೋಮವಾರದಿಂದ ಶುರುವಾಗಿದೆ.
ಎ.6 ಗುರುವಾರ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಶೇ.0.25 ಬಡ್ಡಿ ದರ ಏರಿಕೆ ಮಾಡುವ ಬಗ್ಗೆ ನಿರ್ಧಾರ ಪ್ರಕಟಿಸುವ ಸಾಧ್ಯತೆಗಳು ಇವೆ.
ಪ್ರಸಕ್ತ ವಿತ್ತೀಯ ವರ್ಷದ ಮೊದಲ ತ್ತೈಮಾಸಿಕ ಸಭೆಯೂ ಇದಾಗಿರಲಿದೆ. ಜಗತ್ತಿನಾದ್ಯಂತ ಏರಿಕೆಯಾಗುತ್ತಿರುವ ಹಣದುಬ್ಬರ ನಿಯಂತ್ರಣಕ್ಕಾಗಿ ಅಮೆರಿಕ, ಯು.ಕೆ.ಯ ಬ್ಯಾಂಕ್ಗಳು ಬಡ್ಡಿದರ ಏರಿಕೆ ಮಾಡುವುದನ್ನು ಮುಂದುವರಿಸಿವೆ. ಅದನ್ನೇ ಆಧಾರವಾಗಿಟ್ಟುಕೊಂಡು ದೇಶದಲ್ಲಿ ಕೂಡ ಬಡ್ಡಿ ದರ ಏರಿಕೆಯಾಗುವುದು ನಿಶ್ಚಿತ ಎಂದು ಹೇಳಲಾಗುತ್ತಿದೆ.
2022ರ ಮೇನಿಂದ ಇದುವರೆಗೆ ಶೇ.2.50 (250 ಮೂಲಾಂಶ)ರಷ್ಟು ಬಡ್ಡಿ ದರ ಏರಿಕೆಯಾಗಿದೆ. 2022ರ ನವೆಂಬರ್ನಿಂದ ಡಿಸೆಂಬರ್ ಅವಧಿಯಲ್ಲಿ ಚಿಲ್ಲರೆ ಹಣದುಬ್ಬರ ಶೇ.6ಕ್ಕಿಂತ ಕಡಿಮೆಯೇ ಇತ್ತು. ಪ್ರಸಕ್ತ ವಿತ್ತೀಯ ವರ್ಷದಲ್ಲಿ ಆರ್ಬಿಐ ಒಟ್ಟು ಆರು ಎಂಪಿಸಿ ಸಭೆಗಳನ್ನು ನಡೆಸಲಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.