ಬಡ್ಡಿ ದರ, ಜಿಡಿಪಿ ಅಂದಾಜು ಯಥಾವತ್ ಉಳಿಸಿಕೊಂಡ ಆರ್‌ಬಿಐ
Team Udayavani, Dec 6, 2017, 3:17 PM IST
ಹೊಸದಿಲ್ಲಿ : ಬಡ್ಡಿ ದರ ಕಡಿತಕ್ಕೆ ಪೂರಕವಾದ ಹಣದುಬ್ಬರ ಸನ್ನಿವೇಶ ಇದ್ದ ಹೊರತಾಗಿಯೂ ಭಾರತೀಯ ರಿಸರ್ವ್ ಬ್ಯಾಂಕ್ ಇಂದು ತನ್ನ ಬಡ್ಡಿದರಗಳನ್ನು ಯಥಾವತ್ ಉಳಿಸಿಕೊಂಡಿದೆ.
ನಗದು ಹೊಂದಾಣಿಕೆ ಸೌಕರ್ಯ (ಎಲ್‌ಎಎಫ್) ಅಡಿ ಆರ್‌ಬಿಐ ತನ್ನ ಪಾಲಿಸಿ ರಿಪೋ ರೇಟನ್ನು ಶೇ.6.0 ರಲ್ಲೇ ಯಥಾವಾತ್ ಉಳಿಸಿಕೊಂಡಿದೆ. ಪರಿಣಾಮವಾಗಿ ಎಲ್‌ಎಎಫ್ ರಿವರ್ಸ್ ರಿಪೋ ರೇಟನ್ನು ಕೂಡ ಆರ್‌ಬಿಐ ಶೇ.5.75ರಲ್ಲೇ ಉಳಿಸಿಕೊಂಡಿದೆ. ಇದೇ ರೀತಿ ಮಾರ್ಜಿನಲ್ ಸ್ಟಾಂಡಿಂಗ್ ಫೆಸಿಲಿಟಿ (ಎಂಎಸ್‌ಎಫ್) ರೇಟ್ ಮತ್ತು ಬ್ಯಾಂಕ್ ರೇಟ್ ಕೂಡ ಶೇ.6.25ರಲ್ಲೇ ಉಳಿದುಕೊಂಡಿದೆ.
ಇದೇ ವೇಳೆ ಆರ್‌ಬಿಐ ಹಾಲಿ ಹಣಕಾಸು ವರ್ಷದ ಮೂರನೇ ಮತ್ತು ನಾಲ್ಕನೇ ತ್ತೈಮಾಸಿಕದಲ್ಲಿ ಹಣದುಬ್ಬರವನ್ನು ಶೇ.4.3ರಿಂದ ಶೇ.4.7ರ ಪ್ರಮಾಣದಲ್ಲಿ ಅಂದಾಜಿಸಿದೆ. ಹಾಗೆಯೇ ಆರ್ಥಿಕ ಪ್ರಗತಿಯ ಅಂದಾಜನ್ನು ಶೇ.6.7ರಲ್ಲೇ ಉಳಿಸಿಕೊಂಡಿದೆ.
ಹಣದುಬ್ಬರ ಇದೇ ರೀತಿ ಮುಂದೆಯೂ ಕೆಳಮಟ್ಟದಲ್ಲಿ ಉಳಿಯಲಾರದೆಂಬ ಕಾರಣಕ್ಕೆ ನಾವು ಬಡ್ಡಿ ದರ ಕಡಿತ ಮಾಡಿಲ್ಲ ಎಂದು ಆರ್‌ಬಿಐ ಗವರ್ನರ್ ಊರ್ಜಿತ್ ಪಟೇಲ್ ಹೇಳಿದರು.
ಆರ್‌ಬಿಐ ಈ ವರ್ಷ ಆಗಸ್ಟ್‌ನಲ್ಲಿ ತನ್ನ ಬೆಂಚ್‌ಮಾರ್ಕ್ ಸಾಲ ದರವನ್ನು ಶೇ.0.25ರಷ್ಟು ಇಳಿಸಿ ಆರು ವರ್ಷಗಳ ಕನಿಷ್ಠ ಮಟ್ಟವಾಗಿ ಶೇ.6ಕ್ಕೆ ನಿಗದಿಸಿತ್ತು.
ಆರ್‌ಬಿಐ ಇಂದು ತನ್ನ ಬಡ್ಡಿದರಗಳನ್ನು ಯಥಾವತ್ ಉಳಿಸಿಕೊಂಡ ಪರಿಣಾಮವಾಗಿ ಗೃಹ ಹಾಗೂ ಇನ್ನಿತರ ಬಗೆಯ ಸಾಲ ಪಡೆದ ಗ್ರಾಹಕರ ಇಎಂಐ ನಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ. ಹಾಗಾಗಿ ಈ ವರ್ಗಕ್ಕೆ ಸಹಜವಾಗಿಯೇ ನಿರಾಶೆ ಉಂಟಾಗಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ
ರಾಷ್ಟ್ರಾದ್ಯಂತ ಶೈಕ್ಷಣಿಕ ಪಠ್ಯಗಳ ಪೂರೈಕೆಗೆ ಫ್ಲಿಪ್ ಕಾರ್ಟ್ ಮತ್ತು NCERT ಒಪ್ಪಂದ
Stock Market: ಷೇರುಪೇಟೆ ಸೂಚ್ಯಂಕ 400ಕ್ಕೂ ಅಧಿಕ ಅಂಕ ಕುಸಿತ, ನಿಫ್ಟಿಯೂ ಇಳಿಕೆ
Nestle: ಹೊಸ ವರ್ಷಕ್ಕೆ ಮ್ಯಾಗಿ ನೂಡಲ್ಸ್, ಕಿಟ್‌ಕ್ಯಾಟ್ ಚಾಕ್ಲೆಟ್ ಬೆಲೆ ಏರಿಕೆ?
‘DigiLocker’; ಕ್ಲೇಮ್ ಮಾಡದ ಹೂಡಿಕೆಗೆ ಪರಿಹಾರ?
MUST WATCH
ಹೊಸ ಸೇರ್ಪಡೆ
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ
Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.