ಸಾಲದ ಆ್ಯಪ್ ಗಳಿಗೆ ಲಗಾಮು; ಆರ್‌ಬಿಐ ಮಾರ್ಗಸೂಚಿ ಬಿಡುಗಡೆ
Team Udayavani, Aug 11, 2022, 5:50 AM IST
ಡಿಜಿಟಲ್ ಲೆಂಡಿಂಗ್ ಅಪ್ಲಿಕೇಶನ್‌ಗಳಿಂದಾಗಿ ಆಗುತ್ತಿರುವ ಅನಾಹುತಗಳನ್ನು ತಡೆಯಲು, ನಿಗಾ ಇಡಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮಾರ್ಗಸೂಚಿ ಬಿಡುಗಡೆ ಮಾಡಿದೆ.
ವರ್ಕಿಂಗ್ ಗ್ರೂಪ್ ಆನ್ ಡಿಜಿಟಲ್ ಲೆಂಡಿಂಗ್ ಕಂಪೆನಿಗಳು ಸಲ್ಲಿಸಿದ್ದ ಮನವಿ ಮೇರೆಗೆ ಆರ್‌ಬಿಐ ಈ ನಿರ್ಧಾರ ಕೈಗೊಂಡಿದೆ. ಇತ್ತೀಚೆಗೆ ಡಿಜಿಟಲ್ ಸಾಲ ವಿತರಿಸುವ ಕೆಲವು ಕಂಪೆನಿಗಳ ಮಾನಸಿಕ ಹಿಂಸೆಯಿಂದ ಕೆಲವು ಗ್ರಾಹಕರು ಆತ್ಮಹತ್ಯೆಗೆ ಶರಣಾಗಿದ್ದರು.
ನಿಯಮಗಳೇನು?
-ಎಲ್ಲ ರೀತಿಯ ಡಿಜಿಟಲ್ ಸಾಲಗಳು ಹಾಗೂ ಸಾಲ ಮರುಪಾವತಿಯು, ಸಾಲ ನೀಡುವವರ, ಪಡೆಯುವವರ ಹಾಗೂ ಬ್ಯಾಂಕ್ ಖಾತೆಗಳ ಮಧ್ಯೆ ನಡೆಯಬೇಕು. ಲೆಂಡಿಂಗ್ ಸರ್ವೀಸ್ ಪ್ರೊವೈಡರ್‌ಗಳ (ಎಲ್‌ಬಿಎಸ್) ಪೂಲ್ ಖಾತೆಗಳು ಅಥವಾ ಯಾವುದೇ ಮಧ್ಯವರ್ತಿ (ಥರ್ಡ್ ಪಾರ್ಟಿ) ಮೂಲಕ ನಡೆಯುವಂತಿಲ್ಲ.
-ಕ್ರೆಡಿಟ್ ಇಂಟರ್‌ಮೀಡಿಯೇಟ್ ಪ್ರೊಸೆಸ್‌ನಡಿ ಎಲ್‌ಬಿಎಸ್‌ಗಳ ಮೇಲೆ ವಿಧಿಸುವ ಶುಲ್ಕವನ್ನು ಆಯಾ ಕಂಪೆನಿ ಕಟ್ಟಬೇಕೇ ಹೊರತು, ಗ್ರಾಹಕರ ಮೇಲೆ ಹೇರುವಂತಿಲ್ಲ.
-ಗ್ರಾಹಕನಿಗೆ ಸಾಲ ನೀಡುವ ಕಂಪೆನಿಯು ಪ್ರಮಾಣೀಕೃತವಾದ ಕೀ ಫ್ಯಾಕ್ಟ್ ಸ್ಟೇಟ್‌ಮೆಂಟ್‌ನ್ನು ಕಡ್ಡಾಯವಾಗಿ ನೀಡಬೇಕು.
-ಸಾಲದ ಬಗೆಗಿನ ಎಲ್ಲ ಮಾಹಿತಿಯನ್ನು ಸಾಲ ನೀಡುವ ಮೊದಲೇ ಗ್ರಾಹಕರಿಗೆ ತಿಳಿಸಬೇಕು.
-ಗ್ರಾಹಕರ ಒಪ್ಪಿಗೆಯಿಲ್ಲದೆ ಸ್ವಯಂಚಾಲಿತವಾಗಿ ಕ್ರೆಡಿಟ್ ಲಿಮಿಟ್ ಹೆಚ್ಚಿಸುವಂತಿಲ್ಲ.
-ಪಡೆದ ಸಾಲವನ್ನು ನಿಗದಿತ ಅವಧಿಗಿಂತ ಮೊದಲು ಬಡ್ಡಿ ಸಹಿತ ತೀರಿಸುವ ಸೌಲಭ್ಯವನ್ನು ಗ್ರಾಹಕರಿಗೆ ಕಡ್ಡಾಯವಾಗಿ ನೀಡಬೇಕು.
-ಸಾಲ ಪಡೆದ ಗ್ರಾಹಕರು ನಿಗದಿತ ಅವಧಿಯಲ್ಲಿ ಸಾಲ ಹಿಂದಿರುಗಿಸದೇ ಇದ್ದಲ್ಲಿ ಕ್ರೆಡಿಟ್ ಸಿಐಸಿ ಎಂಬ ನಿಯಂತ್ರಣ ಪ್ರಾಧಿಕಾರಕ್ಕೆ ಆಯಾ ಕಂಪೆನಿಯು ದೂರು ಕೊಡಬೇಕು.
ಗ್ರಾಹಕರು ಕಂಪೆನಿಯಲ್ಲಿ ತಮ್ಮ ವ್ಯವಹಾರಕ್ಕೆ ಸಂಬಂಧಿಸಿದಂತೆ ಆಗಿರುವ ತೊಂದರೆಯ ಬಗ್ಗೆ ದೂರು ಕೊಟ್ಟರೆ ಅದನ್ನು 30 ದಿನಗಳಲ್ಲಿ ಬಗೆಹರಿ ಸಬೇಕು. ಅಲ್ಲಿ ಸಮಸ್ಯೆ ಇತ್ಯರ್ಥ ವಾಗದಿದ್ದರೆ, ಆರ್‌ಬಿಐ ನಿಯಂತ್ರಣ ದಲ್ಲಿರುವ ಇಂಟಿಗ್ರೇಟೆ ಡ್ ಒಂಬುಡ್ಸ್ ಮನ್ ಸ್ಕೀಂ (ಆರ್‌ಬಿ- ಐಒಎಸ್)ಗೆ ದೂರು ಸಲ್ಲಿಸಬಹುದು.
-ಆ್ಯಪ್ ತಮಗೆ ಅಗತ್ಯವಿದ್ದಷ್ಟೇ ಮಾಹಿತಿ ಯನ್ನು ಆಯಾ ಗ್ರಾಹಕರ ಒಪ್ಪಿಗೆ ಪಡೆದೇ ಸಂಗ್ರಹಿಸಬೇಕು. ಈ ದತ್ತಾಂಶ ಬಳಸುವ ಮೊದಲು ಗ್ರಾಹಕರ ಒಪ್ಪಿಗೆ ಪಡೆಯಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RBI:ಸಾಲ ಮನ್ನಾ ಸೇರಿ ಉಚಿತ ಕೊಡುಗೆ ಆತಂಕಕಾರಿ- ಆರ್‌ಬಿಐ
Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು
Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ
ರಾಷ್ಟ್ರಾದ್ಯಂತ ಶೈಕ್ಷಣಿಕ ಪಠ್ಯಗಳ ಪೂರೈಕೆಗೆ ಫ್ಲಿಪ್ ಕಾರ್ಟ್ ಮತ್ತು NCERT ಒಪ್ಪಂದ
Stock Market: ಷೇರುಪೇಟೆ ಸೂಚ್ಯಂಕ 400ಕ್ಕೂ ಅಧಿಕ ಅಂಕ ಕುಸಿತ, ನಿಫ್ಟಿಯೂ ಇಳಿಕೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Arrest Warrant: ರಾಬಿನ್ ಉತ್ತಪ್ಪ ವಿರುದ್ದ ಬಂಧನ ವಾರೆಂಟ್; ಜೈಲು ಪಾಲಾಗ್ತಾರಾ ಕ್ರಿಕೆಟಿಗ
Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ
M. Chinnaswamy ಸ್ಟಾಂಡ್‌ಗೆ ಶಾಂತಾ ರಂಗಸ್ವಾಮಿ ಹೆಸರಿಡಲು ಯಾಕೆ ಹಿಂದೇಟು? ಏನಿದು ವಿವಾದ?
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mangaluru: ಸಹಬಾಳ್ವೆ ಬೆಸೆಯುತ್ತಿದೆ ‘ಕುಸ್ವಾರ್’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.