![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Apr 8, 2021, 10:42 AM IST
ನವ ದೆಹಲಿ : ರಾಷ್ಟ್ರೀಯ ಅತಿದೊಡ್ಡ ವ್ಯಾವಹಾರಿಕ ಬ್ಯಾಂಕ್ ಎಂದೆನಿಸಿಕೊಂಡ ಎಸ್ ಬಿ ಐ ಈಗ ತನ್ನ ಗ್ರಾಹಕರಿಗೆ ಬ್ಯಾಂಕಿಂಗ್ ವ್ಯವಹಾರವನ್ನು ಮಾಡುವುದಕ್ಕೆ ಇಂಟರ್ ನೆಟ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಕಲ್ಪಿಸುತ್ತಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್ ಬಿ ಐ) ಇಂಟರ್ ನೆಟ್ ಬ್ಯಾಂಕಿಂಗ್ ಪೋರ್ಟಲ್ ಗ್ರಾಹಕರಿಗೆ ವ್ಯಾಪಕವಾದ ಸೌಲಭ್ಯಗಳನ್ನು ಒದಗಿಸುತ್ತಿದೆ.
ಈ ಸೇವೆಯಲ್ಲಿ, ಎಸ್ ಬಿ ಐ ಗ್ರಾಹಕರು ತಮ್ಮ ಖಾತೆಯ ಬ್ಯಾಲೆನ್ಸ್ ಪರಿಶೀಲಿಸಬಹುದು, ಹಣವನ್ನು ವರ್ಗಾಯಿಸಬಹುದು, ಹೊಸ ಚೆಕ್ ಪುಸ್ತಕಕ್ಕಾಗಿ ವಿನಂತಿಸಬಹುದು ಮತ್ತು ಡೆಬಿಟ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದಾಗಿದೆ.
ಓದಿ : ಶತಕೋಟಿ ಶ್ರೀಮಂತರ ಪಟ್ಟಿ :ಭಾರತಕ್ಕೆ 3ನೇ ಸ್ಥಾನ ; ಮುಕೇಶ್ ಏಷ್ಯಾದ ಅತೀ ಸಿರಿವಂತ
ಈ ಸೇವೆಗಳ ಹೊರತಾಗಿ, ಗ್ರಾಹಕರು ಎಸ್ ಬಿ ಐನಲ್ಲಿ ಇಂಟರ್ ನೆಟ್ ಬ್ಯಾಂಕಿಂಗ್ ಮೂಲಕ ಡೆಪೊಸಿಟ್ ಹಾಗೂ ರಿಕರಿಂಗ್ ಡೆಪೊಸಿಟ್ ರಚಿಸುವ ಸೌಲಭ್ಯವನ್ನೂ ಪಡೆಯುತ್ತಾರೆ. ಆದರೇ, ಎಸ್ ಬಿ ಐ ತನ್ನ ಗ್ರಾಹಕರಿಗೆ ನೀಡುತ್ತಿರುವ ಇಂಟರ್ ನೆಟ್ ಬ್ಯಾಂಕಿಂಗ್ ಬಳಸುವುದಕ್ಕೆ ಬಳಕೆದಾರ ಹೆಸರು ಮತ್ತು ಲಾಗಿನ್ ಪಾಸ್ ವರ್ಡ್ ಅಗತ್ಯವಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕರು ಇಂಟರ್ ನೆಟ್ ಬ್ಯಾಂಕಿಂಗ್ ಮೂಲಕ ಒಟ್ಟು 8 ಬ್ಯಾಂಕಿಂಗ್ ವ್ಯವಹಾರವನ್ನು ನಿಭಾಯಿಸಬಹುದು ಎಂದು ಎಸ್ ಬಿ ಐ ತನ್ನ ಅಧಿಕೃತ ಟ್ವೀಟರ್ ಖಾತೆಯ ಮೂಲಕ ತನ್ನ ಗ್ರಾಹಕರಿಗೆ ಮಾಹಿತಿ ನೀಡಿದೆ.
ಹಣದ ವಹಿವಾಟು, ಎಟಿಎಂ ಕಾರ್ಡ್ ಗೆ ಅರ್ಜಿ, ಠೇವಣಿ ಖಾತೆಗೆ ಸಂಬಂಧಿಸಿದ ಕೆಲಸ, ಬಿಲ್ ಪಾವತಿ, ಸೇವಿಂಗ್ ಬ್ಯಾಂಕ್ ಅಕೌಂಟ್ ಸ್ಟೇಟ್ ಮೆಂಟ್, ಚೆಕ್ ಬುಕ್ ಗಾಗಿ ಅರ್ಜಿ ಸಲ್ಲಿಸುವುದು, ಯುಪಿಐ ಪ್ರಾರಂಭಿಸುವುದು ಮತ್ತು ನಿಲ್ಲಿಸುವುದು, ತೆರಿಗೆ ಪಾವತಿ ಸೌಲಭ್ಯಗಳು ಇಂಟರ್ ನೆಟ್ ಬ್ಯಾಂಕಿಂಗ್ ಮೂಲಕ ಲಭ್ಯವಿದೆ.
ಎಸ್ ಬಿ ಐ ಗೆ ಸಂಬಂಧಿಸಿದ ಬ್ಯಾಂಕಿಂಗ್ ವ್ಯವಹಾರವನ್ನು ಈ ಕೆಳಗಿನವುಗಳನ್ನು ಅನುಸರಿಸುವುದರಿಂದ ಆನ್ ಲೈನ್ ಮೂಲಕ ಮಾಡಬಹುದಾಗಿದೆ :
*ಎಸ್ ಬಿ ಐ ನೆಟ್ ಬ್ಯಾಂಕಿಂಗ್ ನ ಅಧಿಕೃತ ಹೋಮ್ ಪೇಜ್ onlinesbi.com ಗೆ ಹೋಗಿ.
*”New User Registration/Activation” ಮೇಲೆ ಕ್ಲಿಕ್ ಮಾಡಿ.
* ಖಾತೆ ಸಂಖ್ಯೆ, ಸಿಐಎಫ್ ಸಂಖ್ಯೆ, ಶಾಖೆ ಕೋಡ್, ದೇಶ, ನೋಂದಾಯಿತ ಮೊಬೈಲ್ ಸಂಖ್ಯೆ, ಅಗತ್ಯವಿರುವ ಸೌಲಭ್ಯವನ್ನು ನಮೂದಿಸಿದ ನಂತರ “ಸಬ್ ಮಿಟ್” ಬಟನ್ ಕ್ಲಿಕ್ ಮಾಡಿ.
*ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ.
*ಎಟಿಎಂ ಕಾರ್ಡ್ ಆಯ್ಕೆಮಾಡಿ ಮತ್ತು ಎಟಿಎಂ ಕಾರ್ಡ್ ಇಲ್ಲದಿದ್ದರೆ, ಬ್ಯಾಂಕ್ ಮುಂದಿನ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತದೆ.
*ತಾತ್ಕಾಲಿಕ ಬಳಕೆದಾರ ಹೆಸರನ್ನು ಗಮನಿಸಿ ಮತ್ತು ಲಾಗಿನ್ ಪಾಸ್ ವರ್ಡ್ ನ್ನು ಕ್ರಿಯೇಟ್ ಮಾಡಿ. ಪಾಸ್ ವರ್ಡ್ ನನ್ನು ಮತ್ತೆ ನಮೂದಿಸಿ ಮತ್ತು ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ‘ಸಬ್ ಮಿಟ್’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಓದಿ :ಎರಡನೇ ಡೋಸ್ ಕೋವಿಡ್ ಲಸಿಕೆ ಪಡೆದ ಪ್ರಧಾನಿ ನರೇಂದ್ರ ಮೋದಿ
*ತಾತ್ಕಾಲಿಕ ಬಳಕೆದಾರ ಹೆಸರು ಮತ್ತು ಹೊಸ ಪಾಸ್ ವರ್ಡ್ ನೊಂದಿಗೆ ಲಾಗ್ ಇನ್ ಮಾಡಿ.
*ನಿಯಮಗಳು ಮತ್ತು ಷರತ್ತುಗಳನ್ನು ಒಪ್ಪಿಕೊಂಡ ನಂತರ ಮತ್ತು ಲಾಗಿನ್ ಪಾಸ್ ವರ್ಡ್ ಮತ್ತು ಪ್ರೊಫೈಲ್ ಪಾಸ್ ವರ್ಡ್ ನನ್ನು ಹೊಂದಿಸಿ
*ಹುಟ್ಟಿದ ದಿನಾಂಕ, ಹುಟ್ಟಿದ ಸ್ಥಳ ಮತ್ತು ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
* ಬ್ಯಾಂಕ್ ಖಾತೆ ಮಾಹಿತಿಯನ್ನು ನೋಡಲು “ಅಕೌಂಟ್ ಸಮ್ಮರಿ” ಲಿಂಕ್ ಅನ್ನು ಕ್ಲಿಕ್ ಮಾಡಿ.
* ನೀವು “View only right” ಎಂದು ನೋಂದಾಯಿಸಿದ್ದರೆ, ನಿಮ್ಮ ಆನ್ ಲೈನ್ ನೋಂದಣಿ ಪ್ರಕ್ರಿಯೆಯ ಮುದ್ರಣದೊಂದಿಗೆ ನಿಮ್ಮ “ಟ್ರಾನ್ಸ್ ಕೇಶನ್ ರೈಟ್” ಅನ್ನು ಸಕ್ರಿಯಗೊಳಿಸಲು ನಿಮ್ಮ ಶಾಖೆಯನ್ನು ಸಂಪರ್ಕಿಸಿ.
ಓದಿ : ತಂದೆ ಪರ ಮಾತಾಡಿದ ಮಗುವನ್ನು ಕೊಂದ ತಾಯಿ: ಗೋಬಿ ಮಂಚೂರಿ ಕೊಡಿಸಲು ಕರೆದೊಯ್ದು ಕೊಲೆ!
Stock market :ವಿದೇಶಿ ಬಂಡವಾಳ ಹಿಂತೆಗೆತ: ಸತತ 8ನೇ ದಿನವೂ ಸೆನ್ಸೆಕ್ಸ್ ಕುಸಿತ
New Income Tax Bill: ಹೊಸ ಆದಾಯ ತೆರಿಗೆ ಮಸೂದೆ ಮಂಡಿಸಿದ ಕೇಂದ್ರ ವಿತ್ತ ಸಚಿವೆ
Less Burden: ಆರ್‌ಬಿಐ ರೆಪೋ ದರ ಕಡಿತದ ಬೆನ್ನಲ್ಲೇ ಗೃಹ ಸಾಲಗಳಿಗೂ ರಿಲೀಫ್
Stock Market: ಷೇರುಪೇಟೆ ಸೂಚ್ಯಂಕ 448 ಅಂಕ ಏರಿಕೆ; ಜಿಗಿತಕ್ಕೆ ಈ 3 ಅಂಶಗಳು ಕಾರಣ!
Gold-Silver: ಬೆಂಗಳೂರಲ್ಲಿ 10 ಗ್ರಾಂ ಚಿನ್ನಕ್ಕೆ 710 ರೂ. ಇಳಿಕೆ, ಬೆಳ್ಳಿ ಏರಿಕೆ
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
You seem to have an Ad Blocker on.
To continue reading, please turn it off or whitelist Udayavani.