ಏರ್‌ಟೆಲ್, ವೋಡಾಫೋನ್ ಬಳಿಕ ಈಗ ಗ್ರಾಹಕರಿಗೆ ಐಡಿಯಾ ಬಂಪರ್ ಆಫರ್
Team Udayavani, Jan 12, 2017, 12:15 PM IST
ಹೊಸದಿಲ್ಲಿ : ರಿಲಯನ್ಸ್ ಜಿಯೋ ಒಡ್ಡಿರುವ ಕತ್ತುಕತ್ತಿನ ಸ್ಪರ್ಧೆಯನ್ನು ಎದುರಿಸಲು ಭಾರ್ತಿ ಏರ್‌ಟೆಲ್ ಮತ್ತು ವೋಡಾಫೋನ್ ಸಾಗಿರುವ ಹಾದಿಯಲ್ಲೇ ಹೆಜ್ಜೆ ಇರಿಸಿರುವ ಐಡಿಯಾ ಸೆಲ್ಯುಲರ್, ತನ್ನ ಹೊಸ 3ಜಿ/4ಜಿ ಡಾಟಾ ಪ್ಲಾನ್ಸ್ ಹಾಗೂ ಅನ್‌ಲಿಮಿಟೆಡ್ ಕಾಲಿಂಗ್ ಆಫರ್‌ಗಳೊಂದಿಗೆ ಸ್ಪರ್ಧಾ ಕಣಕ್ಕೆ ಧುಮುಕಿದೆ.
348 ರೂ.ಗಳ ರೀಚಾರ್ಜ್ ಪ್ಯಾಕ್ ಮೇಲೆ ಐಡಿಯಾ ಇದೀಗ ತನ್ನ ಪ್ರೀಪೇಡ್ ಗ್ರಾಹಕರಿಗೆ 3ಜಿಬಿ ಉಚಿತ ಡಾಟಾ ಕೊಡುಗೆಯನ್ನು ನೀಡಲು ಮುಂದೆ ಬಂದಿದೆ. ಇದರೊಂದಿಗೆ ಅನ್‌ಲಿಮಿಟೆಡ್ ವಾಯ್ಸ ಕಾಲಿಂಗ್ ಮತ್ತು ಎಸ್‌ಎಂಎಸ್ ಕೂಡ ಗ್ರಾಹಕರಿಗೆ ಸಿಗಲಿದೆ. ಐಡಿಯಾ ಸೆಲ್ಯುಲರ್ ಕಂಪೆನಿಗೆ 18.50 ಕೋಟಿ ಗ್ರಾಹಕರಿದ್ದಾರೆ.
ಹೊಸ 4ಜಿ ಹ್ಯಾಂಡ್ ಸೆಟ್ ಮೇಲೆ ರೀಚಾರ್ಜಿಂಗ್ ಪ್ಯಾಕ್ ಹಾಕಿಕೊಳ್ಳುವ ತನ್ನ ಗ್ರಾಹಕರಿಗೆ ಹೆಚ್ಚುವರಿ 1 ಜಿಬಿ ಡಾಟಾ ಸಿಗಲಿದೆ ಎಂದು ಅದು ಹೇಳಿದೆ. ಆದರೆ ಈ ಸೌಲಭ್ಯವು ಕೇವಲ 28 ದಿನಗಳಿಗೆ ಮಾತ್ರವೇ ಸೀಮಿತವಾಗಿದೆ ಮತ್ತು ವರ್ಷಕ್ಕೆ (365 ದಿನಗಳು) ಗರಿಷ್ಠ 13 ರಿಚಾರ್ಜ್‌ಗಳನ್ನು ಮಾತ್ರವೇ ಗ್ರಾಹಕರು ಪಡೆಯಬಹುದಾಗಿದೆ ಎಂದು ಅದು ಹೇಳಿದೆ.
ಪೋಸ್ಟ್ ಪೇಡ್ ಬಳಕೆದಾರರಿಗೆ ಐಡಿಯಾ ಬೇರೆಯೇ ಎರಡು ಪ್ಲಾನ್‌ಗಳನ್ನು ಪ್ರಕಟಿಸಿದೆ. ಅದರ ದರ 499 ರೂ. ಮತ್ತು 999 ರೂ. 499 ರೂ. ದರದ ಪ್ಲಾನ್ ಪಡೆಯುವ ಗ್ರಾಹಕರಿಗೆ ಅನ್‌ಲಿಮಿಟೆಡ್ ಲೋಕಲ್, ನ್ಯಾಶನಲ್ ಮತ್ತು ಇನ್‌ಕಮಿಂಗ್ ರೋಮಿಂಗ್ ಕಾಲ್‌ಗಳೊಂದಿಗೆ 4ಜಿ ಹ್ಯಾಂಡ್‌ಸೆಟ್ ಮೆಲೆ 3ಜಿಬಿ ಫ್ರೀ ಡಾಟಾ ಸಿಗಲಿದೆ.
999 ರೂ. ದರದ ಪ್ಲಾನ್‌ನಡಿ ಗ್ರಾಹರಿಗೆ ಅನ್‌ಲಿಮಿಟೆಡ್, ಲೋಕಲ್, ನ್ಯಾಶನಲ್ ಮತುತ ರೋಮಿಂಗ್ ಕಾಲ್‌ಗಳು ಹಾಗೂ ಅದರ ಜತೆಗೆ 8 ಜಿಬಿ ಫ್ರೀ ಡಾಟಾ (4ಜಿ ಹ್ಯಾಂಡ್ ಸೆಟ್ ಮೇಲೆ) ಮತ್ತು ಬೇರೆ ಯಾವುದೇ ಹ್ಯಾಂಡ್ ಸೆಟ್ ಮೇಲೆ 5ಜಿಬಿ ಡಾಟಾ ಸಿಗಲಿದೆ.
ಹೆಚ್ಚುವರಿಯಾಗಿ ಈ ಪ್ಲಾನ್‌ಗಳ ಮೇಲೆ ಗ್ರಾಹರಿಗೆ ಮ್ಯೂಸಿಕ್ ಮತ್ತು ಮೂವೀ ಪ್ಯಾಕ್ ಗೆ ಉಚಿತ ಸಬ್‌ಸ್ಕ್ರಿಪ್‌ಶನ್ ಸಿಗಲಿದೆ.
4ಜಿ ಹ್ಯಾಂಡ್‌ಸೆಟ್‌ಗೆ ಅಪ್‌ಗೆÅàಡ್ ಮಾಡಿಕೊಳ್ಳುವ ಎಲ್ಲ ಹೊಸ ಮತ್ತು ಹಾಲಿ ಗ್ರಾಹಕರಿಗೆ ಕಂಪೆನಿಯು ಹೆಚ್ಚುವರಿ 3 ಜಿಬಿ ಡಾಟಾವನ್ನು ಇದೇ ದರಗಳ ಪ್ಲಾನ್‌ನಲ್ಲಿ, 2017ರ ಡಿಸೆಂಬರ್ 31ರ ವರಗೆ, ಒದಗಿಸಲಿದೆ.
ಕಂಪೆನಿಯ ಪ್ರಕಾರ ಹೊಸ 4ಜಿ ಹ್ಯಾಂಡ್‌ಸೆಟ್ ಗ್ರಾಹಕರಿಗೆ ಹೆಚ್ಚುವರಿಯಾಗಿ ಸಿಗಲಿರುವ 3 ಜಿಬಿ ಡಾಟಾವು, ಅನುಕ್ರಮವಾಗಿ 499 ಮತ್ತು 999 ರೂ.ಗಳ ಪ್ಲಾನ್‌ಗಳ ಮೇಲೆ ಪ್ರತೀ ತಿಂಗಳು 6 ಜಿಬಿ ಮತ್ತು 11 ಜಿಬಿ ಫ್ರೀ ಡಾಟಾ ಗ್ರಾಹಕರಿಗೆ ಸಿಕ್ಕಂತಾಗುತ್ತದೆ.
ಪ್ರೀಪೇಡ್ ಗ್ರಾಹಕರು ತತ್‌ಕ್ಷಣದಿಂದಲೇ ಈ ಕೊಡುಗೆಯನ್ನು ಪಡೆಯಲು ಅರ್ಹರಿರುತ್ತಾರೆ ಎಂದು ಐಡಿಯಾ ಕಂಪೆನಿ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಿಲಯನ್ಸ್‌ನಿಂದ ‘ರಸ್‌ಕಿಕ್’ ಎನರ್ಜಿ ಡ್ರಿಂಕ್ ಬಿಡುಗಡೆ
Table Space: ಟೇಬಲ್ ಸ್ಪೇಸ್ ಸ್ಥಾಪಕ ಅಮಿತ್ ಬ್ಯಾನರ್ಜಿ ಹೃದಯಾಘಾತದಿಂದ ನಿಧನ
Stock Market: HMPV ಎಫೆಕ್ಟ್ – ಷೇರುಪೇಟೆ ಸೆನ್ಸೆ*ಕ್ಸ್ 1,000ಕ್ಕೂ ಅಧಿಕ ಅಂಕ ಕುಸಿತ!
2024ರಲ್ಲಿ ಆಟೋ ಮೊಬೈಲ್ ಕ್ಷೇತ್ರಕ್ಕೆ ಲಾಭ: ದಾಖಲೆ ಮಾರಾಟ
Share Market: ಹೊಸ ವರ್ಷದ ಮೊದಲ ದಿನ 368 ಅಂಕ ಏರಿದ ಸೆನ್ಸೆಕ್ಸ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.