100 GB free 4G data:ರಿಲಯನ್ಸ್ ಜಿಯೋ ಸಮ್ಮರ್ ಸರ್‌ಪ್ರೈಸ್ ಆಫರ್
Team Udayavani, Apr 5, 2017, 7:36 PM IST
ಹೊಸದಿಲ್ಲಿ : ರಿಲಯನ್ಸ್ ಜಿಯೋ ತನ್ನ ಪ್ರೈಮ್ ಸದಸ್ಯರಿಗೆ ಉಚಿತ ಕೊಡುಗೆಯನ್ನು ಮೂರು ತಿಂಗಳಿಗೆ ವಿಸ್ತರಿಸಿದೆ.
ಪ್ರೈಮ್ ಮೆಂಬರ್‌ಶಿಪ್ ಶುಲ್ಕವನ್ನು ಪಾವತಿಸಿದವರು ಮತ್ತು ಕನಿಷ್ಠ 303 ರೂ.ಗಳ ರೀಚಾರ್ಜ್ ಮಾಡಿಸಿಕೊಂಡವರು ಈಗಿನ್ನು ರಿಲಯನ್ಸ್ ಜಿಯೋ ದ ಸಮ್ಮರ್ ಸರ್‌ಪ್ರೈಸ್ ಕೊಡುಗೆಯಡಿ ಇನ್ನೂ ಮೂರು ತಿಂಗಳ ಉಚಿತ ಸೇವೆಯನ್ನು ಪಡೆಯಲಿದ್ದಾರೆ.
ಇದರ ಅರ್ಥವೇನೆಂದರೆ ನಿಮ್ಮ ರೀಚಾರ್ಜ್ ಅನ್ನು ನೀವು ಯಾವುದೇ ಪ್ಯಾಕ್‌ನಡಿ ಮಾಡಿಕೊಂಡಿದ್ದರೆ, ಜುಲೈನಿಂದ ಆರಂಭವಾಗುವಂತೆ ಅದು ನಿಮಗೆ ಅನ್ವಯವಾಗುತ್ತದೆ.
ಇದೀಗ ಹೊಸ ಕೊಡುಗೆಯನ್ವಯ ಜಿಯೋ ತನ್ನ ಬಳಕೆದಾರರಿಗೆ 100 ಜಿಬಿ ಡಾಟಾವನ್ನು ಉಚಿತವಾಗಿ ಕೊಡಲಿದೆ. ಈ ಕೊಡುಗೆಯು 999 ರೂ. ಅಥವಾ ಅದಕ್ಕೂ ಹೆಚ್ಚಿನ ಪ್ಯಾಕ್‌ಗಳಿಗೆ ರೀಚಾರ್ಜ್ ಮಾಡಿಸಿಕೊಂಡವರಿಗೆ ಈ ಕೊಡುಗೆಯು ಅನ್ವಯವಾಗುತ್ತದೆ.
4ಜಿ ಇಂಟರ್‌ನೆಟ್‌ನಲ್ಲಿ ನೀವು 100 ರೂ. ಉಚಿತವಾಗಿ ಪಡೆಯುವುದು ಹೇಗೆ ?
ನೀವು 99 ರೂ. ಪಾವತಿಸಿ ಜಿಯೋ ಪ್ರೈಮ್ ಮೆಂಬರ್‌ಶಿಪ್ ಪಡೆದಿರುವಿರಿ ಎನ್ನೋಣ. ನೀವು 303 ರೂ.ಗಳ ರೀಚಾರ್ಜ್ ಪ್ಲಾನ್ ಆಯ್ಕೆ ಮಾಡಿರುವುದಾದಲ್ಲಿ ನಿಮಗೆ ಹ್ಯಾಪಿ ನ್ಯೂಇಯರ್ ಆಫರ್ ಅಡಿ ಮುಂದಿನ ಮೂರು ತಿಂಗಳ ಕಾಲ ನಿಮಗೆ ದಿನಕ್ಕೆ 1 ಜಿಬಿ ಉಚಿತ ಇಂಟರ್‌ನೆಟ್ ಸಿಗಲಿದೆ.
ಅಥವಾ ನೀವು ಹೆಚ್ಚಿನ ಮೌಲ್ಯದ ಟ್ಯಾರಿಫ್ ಪ್ಲಾನನ್ನು ಆಯ್ಕೆ ಮಾಡಿಕೊಂಡಿರುವಿರಾದರೆ ನಿಮಗೆ 100 ಜಿಬಿಗಳ 4ಜಿ ಡಾಟಾ ಸಿಗಲಿದೆ. ನಿಮ್ಮ ಸ್ಮಾರ್ಟ್ ಫೋನ್‌ನಲ್ಲಿ ನೀವು ಮೈ ಜಿಯೋ ಆ್ಯಪ್‌ನಲ್ಲಿ ಈ ಕೊಡುಗೆಗಳನ್ನು ಕಾಣಬಹುದಾಗಿದೆ.
ಜಿಯೋದ ಸ್ವಂತ ವೆಬ್‌ಸೈಟ್‌ನಲ್ಲೇ ನೀವು ರೀಚಾರ್ಜ್ ಮಾಡಬಹುದಾಗಿದೆ. ಅಲ್ಲಿಗೆ ನೀವು ಹೋದಿರೆಂದರೆ, ಸಮ್ಮರ್ ಸರ್‌ಪ್ರೈಸ್ ನಡಿ ನೀವು ರೀಚಾರ್ಜ್ ಆಯ್ಕೆಗೆ ಹೋಗಬೇಕಾಗುತ್ತದೆ.
ಅದಾದ ಬಳಿಕ ನೀವು ನಿಮ್ಮ ಜಿಯೋ ನಂಬರನ್ನು ಎಂಟ್ರಿ ಮಾಡಿ ರೀಚಾರ್ಜ್‌ಗಳ ಹಲವು ಆಯ್ಕೆಗಳನ್ನು ಪಡೆಯಬಹುದಾಗಿದೆ.
ಸಮ್ಮರ್ ಸರ್‌ಪ್ರೈಸ್‌ಗೆ ಅರ್ಹತೆ ಪಡೆಯಲು ಇರುವ ರೀಚಾರ್ಜ್ ಮೌಲ್ಯಗಳು ಹೀಗಿವೆ :999 ರೂ., 1,999 ರೂ., 4,999 ರೂ ಮತ್ತು 9,999 ರೂ.
ಮುಂದಿನ ವರ್ಷ ಮಾರ್ಚ್ 31ರ ತನಕ, ಜಿಯೋ ಪ್ರೈಮ್ ಒಂದು ವರ್ಷದ ಸಿಂಧುತ್ವ ಹೊಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jio domain ಗಲಾಟೆ ನಡುವೆಯೇ “ಜಿಯೋಸ್ಟಾರ್’ ಹೊಸ ವೆಬ್‌ಸೈಟ್ ಪ್ರತ್ಯಕ್ಷ!
Haldiram ಭುಜಿಯಾವಾಲಾದಲ್ಲಿ ₹235 ಕೋಟಿ ಹೂಡಿಕೆ ಮಾಡಿದ ಭಾರತ್ ವ್ಯಾಲ್ಯು ಫಂಡ್
Gold Rates:ಡಾಲರ್ ಬೆಲೆ ಏರಿಕೆ-18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?
Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….
Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.