ಉಚಿತ ಜಿಯೋ ಫೋನ್ ಬುಕ್ಕಿಂಗ್ ಆರಂಭವಾಗಿದೆ; ಇಲ್ಲಿದೆ ಮಾಹಿತಿ
Team Udayavani, Aug 14, 2017, 7:16 PM IST
ಹೊಸದಿಲ್ಲಿ : ಉಚಿತ ಜಿಯೋ ಪೋನ್ ಬುಕ್ ಮಾಡುವ ಸುಸಮಯ ಈಗ ಒದಗಿ ಬಂದಿದೆ. ಅಧಿಕೃತ ಬುಕ್ಕಿಂಗ್ ಆಗಸ್ಟ್ 24ರಿಂದ (ಆಫ್ ಲೈನ್ ಮತ್ತು ಆನ್‌ಲೈನ್ ಎರಡರಲ್ಲೂ) ಆರಂಭವಾಗಲಿದೆಯಾದರೂ ಕೆಲವು ಜಿಯೋ ರಿಟೇಲ್ ಶಾಪ್ ಗಳಲ್ಲಿ ಈಗಾಗಲೇ ಪ್ರೀ-ಆರ್ಡರ್ ಸ್ವೀಕಾರ ಆರಂಭವಾಗಿದೆ.
ಜಿಯೋ ಫೋನ್ ಬುಕ್ ಮಾಡುವವರು ಭದ್ರತಾ ಠೇವಣಿಯಾಗಿ ಕೊಡಬೇಕಿರುವ 1,500 ರೂ.ಗಳನ್ನು ಸೆಪ್ಟಂಬರ್‌ನಲ್ಲಿ ಫೋನ್ ಡೆಲಿವರಿ ತೆಗೆದುಕೊಳ್ಳುವಾಗ ಪಾವತಿಸಿದರೆ ಸಾಕು; ಈ ಮೊತ್ತವನ್ನು ಕಂಪೆನಿಯು 36 ತಿಂಗಳ ಬಳಿಕ ಗ್ರಾಹಕರಿಗೆ ಮರುಪಾವತಿಸಲಿದೆ. ಎಂದರೆ ಜಿಯೋ ಫೋನ್ ಉಚಿತವಾಗುತ್ತದೆ.
ಆಫ್ ಲೈನ್‌ನಲ್ಲಿ ಜಿಯೋ ಫೋನ್ ಬುಕ್ ಮಾಡೋದು ಹೇಗೆ ?
* ಅಧಿಕೃತ ಜಿಯೋ ರಿಟೇಲರ್ ಅಥವಾ ರಿಲಯನ್ಸ್ ಜಿಯೋ ಶಾಪ್ ಗಳನ್ನು ಸಂದರ್ಶಿಸುವುದು .
*ಆಧಾರ್ ಬಳಸುವ ಮೂಲಕ ಒಬ್ಬ ವ್ಯಕ್ತಿ ದೇಶಾದ್ಯಂತ ಒಂದೇ ಜಿಯೋ ಪೋನ್ ಪಡೆಯಲು ಸಾಧ್ಯ – ಒಂದು ಆಧಾರ್‌ಗೆ ಒಂದು ಜಿಯೋ ಫೋನ್ ತತ್ವದಲ್ಲಿ.
* ಆಧಾರ್ ವಿವರ ಕೊಟ್ಟ ಬಳಿಕ ಅದನ್ನು ಕೇಂದ್ರೀಕೃತ ತಂತ್ರಾಂಶಕ್ಕೆ ಅಪ್‌ಲೋಡ್ ಮಾಡಲಾಗುವುದು; ಆಗ ಗ್ರಾಹಕರಿಗೆ ಟೋಕನ್ ನಂಬರ್ ಸಿಗುತ್ತದೆ.
* ಜಿಯೋ ಫೋನ್ ಡೆಲಿವರಿ ಪಡೆದುಕೊಳ್ಳುವಾಗ ಈ ಟೋಕನ್ ನಂಬರ್ ನೀಡಬೇಕು.
ಆನ್‌ಲೈನ್ ನಲ್ಲಿ ಜಿಯೋ ಫೋನ್ ಬುಕ್ ಮಾಡೋದು ಹೇಗೆ ?
*ಜಿಯೋ ಡಾಟ್ ಕಾಮ್ ಅಥವಾ ಜಿಯೋಫ್ರೀಫೋನ್ ಡಾಟ್ ಆರ್ಗ್ ಸಂದರ್ಶಿಸಬೇಕು.
* ಆನ್ ಲೈನ್ ರಿಜಿಸ್ಟ್ರೇಶನ್ ಆರಂಭವಾದೊಡನೆಯೇ ಇಮೇಜ್/ಬಟನ್ ಹೋಮ್ ಪೇಜ್‌ನಲ್ಲಿ ಕಂಡು ಬರುತ್ತದೆ.
* ಜಿಯೋ ಫ್ರೀ ಮೊಬೈಲ್ ಫೋನ್ ರಿಜಿಸ್ಟ್ರೇಶನ್/ಪ್ರೀ ಬುಕ್ಕಿಂಗ್ ಬಟನ್ ಕ್ಲಿಕ್ ಮಾಡಬೇಕು.
* ನಿಮ್ಮ ಗುರುತು ವಿವರಗಳನ್ನು ಭರ್ತಿ ಮಾಡಬೇಕು; ಜತೆಗೆ ನಿಮ್ಮ ಫೋನ್ ಸಂಪರ್ಕ ನಂಬರ್, ವಿಳಾಸ ಮತ್ತು ಇತರ ಮಾಹಿತಿಗಳನ್ನು ಕೂಡ ತುಂಬಬೇಕು.
* ಡೆಲಿವರಿ ಸಲ್ಲಬೇಕಾದ ವಿಳಾಸವನ್ನು ನಮೂದಿಸಬೇಕು.
* ಡೆಬಿಟ್/ಕ್ರೆಡಿಟ್ ಕಾರ್ಡ್ ಮೂಲಕ ಅಥವಾ ನೆಟ್ ಬ್ಯಾಂಕಿಂಗ್ ಆಯ್ಕೆ ಮೂಲಕ ಭದ್ರತಾ ಠೇವಣಿ ಮೊತ್ತ 1,500 ರೂ. ಪಾವತಿಸಬೇಕು.
*ಆಗ ಜಿಯೋ ಫೋನ್ ಬುಕ್ ಆಗುವುದು; ಮೊದಲು ಬಂದವರಿಗೆ ಮೊದಲು ಎಂಬ ನೆಲೆಯಲ್ಲಿ ಡೆಲಿವರಿ ನೀಡಲಾಗುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ಅಧಿವೇಶನ ಶತಮಾನೋತ್ಸವದಲ್ಲಿ ನಕಲಿ ಗಾಂಧಿಗಳೇ ಹೆಚ್ಚು: ಎಚ್‌ಡಿಕೆ ವ್ಯಂಗ್ಯ
Belagavi Congress Session: ಗಾಂಧೀಜಿ ಪರಂಪರೆ ಮುಂದುವರಿಸಲು ಬದ್ಧರಾಗಬೇಕು: ಸೋನಿಯಾ
Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!
Christmas, ವರ್ಷಾಂತ್ಯ ಸಂಭ್ರಮ; ಬೀಚ್‌ಗಳಿಗೆ ಜೀವಕಳೆ
Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.