ದೇಶಾದ್ಯಂತ ರೆನೋಲ್ಟ್ ಕ್ಯಾಪ್ಚರ್‌ ಬುಕಿಂಗ್‌ ಆರಂಭ

Team Udayavani, Sep 27, 2017, 11:41 AM IST

capter-car.jpg

ನವದೆಹಲಿ: ಆಧುನಿಕ ಕಾರು ಉತ್ಪಾದನೆ ಕ್ಷೇತ್ರದ ಪ್ರಮುಖ ಸಂಸ್ಥೆಯಾಗಿರುವ ರೆನೋಲ್ಟ್ ಇಂಡಿಯಾ ಪ್ರೈ.ಲಿ., ಪ್ರಥಮ ಬಾರಿಗೆ ಭಾರತದ ಮಾರುಕಟ್ಟೆಯಲ್ಲಿ ಎಸ್‌ಯುವಿ ಸೆಗ್ಮೆಂಟ್‌ನ “ರೆನೋಲ್ಟ್ ಕ್ಯಾಪ್ಚರ್‌’ ಕಾರಿನ ಮುಂಗಡ ಬುಕಿಂಗ್‌ಗೆ ಚಾಲನೆ ನೀಡಿದೆ.

ಹಬ್ಬದ ದಿನಗಳಾಗಿರುವ ಕಾರಣ ಸಂಸ್ಥೆ ಈಗಾಗಲೇ ರೆನೋಲ್ಟ್ ಕ್ಯಾಪ್ಚರ್‌ ಕಾರುಗಳ ಉತ್ಪಾದನೆ ಮತ್ತು ವಿನ್ಯಾಸವನ್ನು ಪೂರ್ಣಗೊಳಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುವ ಹಂತಕ್ಕೆ ತಲುಪಿದೆ. ಆ ನಿಟ್ಟಿನಲ್ಲಿ ಕ್ಯಾಪ್ಚರ್‌ ಕಾರಿನ ಮುಂಗಡ ಬುಕ್ಕಿಂಗ್‌ ಪ್ರಕ್ರಿಯೆ ಶುರುಮಾಡಿದ್ದು, ಗ್ರಾಹಕರು ಮುಂಗಡವಾಗಿ 25 ಸಾವಿರ ರೂ. ನೀಡಿ ರೆನೋಲ್ಟ್ ಕ್ಯಾಪ್ಚರ್‌ ವಾಹನವನ್ನು ಕಾಯ್ದಿರಿಸುಬಹುದಾಗಿದೆ.

ರೆನೋಲ್ಟ್ ಕ್ಯಾಪ್ಚರ್‌ ಆ್ಯಪ್‌ ಅಥವಾ ರೆನೋಲ್ಟ್ ಇಂಡಿಯಾ ವೆಬ್‌ಸೈಟ್‌ ಮೂಲಕ ಗ್ರಾಹಕರು ಮುಂಗಡ ಬುಕ್ಕಿಂಗ್‌ ಮಾಡಬಹುದು ಎಂದು ಸಂಸ್ಥೆ ತಿಳಿಸಿದೆ. ಇತೀಚೆಗೆ ದೆಹಲಿಯಲ್ಲಿ ರೆನೋಲ್ಟ್ ಇಂಡಿಯಾ ಆಪರೇಷನ್ಸ್‌ ವಿಭಾಗದ ದೇಶೀಯ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಸುಮಿತ್‌ ಸಾಹ್ನೆ ಅವರು ನೂತನ ರೆನೋಲ್ಟ್ ಕ್ಯಾಪ್ಚರ್‌ ಕಾರನ್ನು ಅನಾವರಣಗೊಳಿಸಿದರು. ಈ ವೇಳೆ ಮಾತನಾಡಿದರು.

“ಫ್ರಾನ್ಸ್‌ ಮೂಲದ ರೆನೋಲ್ಟ್ ಸಂಸ್ಥೆ ಭಾರತೀಯ ಆಟೋಮೋಟಿವ್‌ ಉದ್ಯಮಕ್ಕೆ ಅಪಾರ ಕೊಡುಗೆ ನೀಡಿದೆ. ಕಳೆದ ಕೆಲ ವರ್ಷಗಳಿಂದ ನಮ್ಮ ಸಂಸ್ಥೆಯ ಎಸ್‌ಯುವಿ ಕಾರುಗಳ ಮಾರಾಟದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಜಾಗತಿಕ ಕಾರು ಮಾರುಕಟ್ಟೆಯಲ್ಲೂ ಪ್ರಿಮೀಯಂ ಎಸ್‌ಯುವಿ ರೆನೋಲ್ಟ್ ಕ್ಯಾಪ್ಚರ್‌ ಅತಿ ಹೆಚ್ಚು ಪ್ರಶಂಸೆಗೆ ಪಾತ್ರವಾಗಿದೆ,’ ಎಂದರು.

ವರ್ಷದಿಂದ ವರ್ಷಕ್ಕೆ ರೆನೋಲ್ಟ್ ಕಾರುಗಳ ಮಾರಾಟದಲ್ಲಿ ಹೆಚ್ಚಳ ಕಂಡುಬಂದಿದೆ. ಅಲ್ಲದೆ, ಫ್ರೆಂಚ್‌ ವಿನ್ಯಾಸ ಒಳಗೊಂಡಿರುವ ಅತ್ಯಾಧುನಿಕ ರೆನೋಲ್ಟ್ ಕ್ಯಾಪ್ಚರ್‌, ಐಎಲ್‌ಎಸ್‌ ಐಕಾನಿಕ್‌ ವಿನ್ಯಾಸ ಹಾಗೂ ಕಟ್ಟಿಂಗ್‌-ಎಡ್ಜ್ ತಂತ್ರಜ್ಞಾನದಿಂದ ಕೂಡಿದೆ. ಈ ಕಾರನ್ನು ಭಾರತದ ರಸ್ತೆಗಳಿಗೆ ಅನುಗುಣವಾಗಿ ರೂಪಿಸಲಾಗಿದೆ.

ಕಾರಿನ ಹೊರ ಹಾಗೂ ಒಳಾವರಣ ಅತ್ಯಾಧುನಿಕ ಪರಿಕರಗಳಿಂದ ಅಲಂಕೃತಗೊಂಡಿದ್ದು, ಸದ್ಯದಲ್ಲೇ 1.5 ಎಲ್‌ಎಚ್‌ 4ಕೆ ಪೆಟ್ರೋಲ್‌ ಎಂಜಿನ್‌ ಹಾಗೂ 1.5ಎಲ್‌ ಕೆ9ಕೆ ಡೀಸೆಲ್‌ ಎಂಜಿನ್‌ ಕಾರುಗಳು ರಸ್ತೆಗಿಳಿಯಲಿವೆ. ಎಲ್ಲ ರೀತಿ ಆಧುನಿಕ ಹಾಗೂ ಗುಣಮಟ್ಟದ ಸೌಲಭ್ಯಗಳು ಕಾರು ಪ್ರಿಯರ ಮನಮೆಚ್ಚಲಿದ್ದು, ಬೆಂಗಳೂರಿನ ಎಕ್ಸ್‌ಶೋರೂಮ್‌ ದರ 15 ಲಕ್ಷ ರೂ.ನಿಂದ 20 ಲಕ್ಷ ರೂ. ಆಗಬಹುದು ಎಂದು ಅವರು ತಿಳಿಸಿದ್ದಾರೆ.

ಟಾಪ್ ನ್ಯೂಸ್

Maharashtra Politics: ಹೋಳಾಗಿರುವ ಎನ್‌ಸಿಪಿ ಎರಡೂ ಬಣ ಶೀಘ್ರದಲ್ಲೇ ಒಂದಾಗುವ ಸಾಧ್ಯತೆ?

Maharashtra Politics: ಹೋಳಾಗಿರುವ ಎನ್‌ಸಿಪಿ ಎರಡೂ ಬಣ ಶೀಘ್ರದಲ್ಲೇ ಒಂದಾಗುವ ಸಾಧ್ಯತೆ?

RSS ಭಾಗವತ್‌ರ ಮಂದಿರ ಮಸೀದಿ ಹೇಳಿಕೆಗೆ ಈಗ “ಪಾಂಚಜನ್ಯ’ ಸಮರ್ಥನೆ

RSS ಭಾಗವತ್‌ರ ಮಂದಿರ ಮಸೀದಿ ಹೇಳಿಕೆಗೆ ಈಗ “ಪಾಂಚಜನ್ಯ’ ಸಮರ್ಥನೆ

Supreme Court: ತೀರ್ಪಿನಲ್ಲಿ ಲವ್‌ ಜೆಹಾದ್‌ ಉಲ್ಲೇಖ ತೆಗೆದುಹಾಕಲು ಸುಪ್ರೀಂ ಕೋರ್ಟ್‌ ನಕಾರ

Supreme Court: ತೀರ್ಪಿನಲ್ಲಿ ಲವ್‌ ಜೆಹಾದ್‌ ಉಲ್ಲೇಖ ತೆಗೆದುಹಾಕಲು ಸುಪ್ರೀಂ ಕೋರ್ಟ್‌ ನಕಾರ

Kumbh Mela: ನೇಪಾಲ, ಉತ್ತರಾಖಂಡದಿಂದ ಪೂಜಾ ಸಾಮಗ್ರಿ ಖರೀದಿ

Kumbh Mela: ನೇಪಾಲ, ಉತ್ತರಾಖಂಡದಿಂದ ಪೂಜಾ ಸಾಮಗ್ರಿ ಖರೀದಿ

ಪ್ರಧಾನಿ ಭೇಟಿಯಾದ ದಿಲ್ಜೀತ್‌ ವಿರುದ್ಧ ರೈತರ ಆಕ್ರೋಶ

ಪ್ರಧಾನಿ ಭೇಟಿಯಾದ ದಿಲ್ಜೀತ್‌ ವಿರುದ್ಧ ರೈತರ ಆಕ್ರೋಶ

PM Modi: ಶಿವ ದೇಗುಲ ವಿವಾದದ ಮಧ್ಯೆ ಅಜ್ಮೇರ್ ದರ್ಗಾಗೆ ಮೋದಿ ಚಾದರ್‌ ಅರ್ಪಣೆ

PM Modi: ಶಿವ ದೇಗುಲ ವಿವಾದದ ಮಧ್ಯೆ ಅಜ್ಮೇರ್ ದರ್ಗಾಗೆ ಮೋದಿ ಚಾದರ್‌ ಅರ್ಪಣೆ

ರಾಜ್ಯಕ್ಕೆ ನಡ್ಡಾ ಆಗಮನ: ರಾಜ್ಯ ನಾಯಕರ ಜತೆ ಚರ್ಚೆ

BJP: ರಾಜ್ಯಕ್ಕೆ ನಡ್ಡಾ ಆಗಮನ: ರಾಜ್ಯ ನಾಯಕರ ಜತೆ ಚರ್ಚೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3

Bengaluru:ಬೈಕ್ ಶೋರೂಂನಲ್ಲಿ ಬೆಂಕಿ ಅವಘಡ; ಸುಟ್ಟು ಹೋದ 50ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು

New Year: ಎಂ.ಜಿ.ರಸ್ತೆ ಸುತ್ತ 15 ಮೆ.ಟನ್‌ ಕಸ!

New Year: ಎಂ.ಜಿ.ರಸ್ತೆ ಸುತ್ತ 15 ಮೆ.ಟನ್‌ ಕಸ!

Namma Metro: ನಮ ಮೆಟ್ರೋದಲ್ಲಿ ಒಂದೇ ದಿನ 8.6 ಲಕ್ಷ ಜನ  

Namma Metro: ನಮ ಮೆಟ್ರೋದಲ್ಲಿ ಒಂದೇ ದಿನ 8.6 ಲಕ್ಷ ಜನ  

Fraud Case: ಐಶ್ವರ್ಯಗೌಡ ಮನೆಯಲ್ಲಿ 29 ಕೆಜಿ ಬೆಳ್ಳಿ ಜಪ್ತಿ

Fraud Case: ಐಶ್ವರ್ಯಗೌಡ ಮನೆಯಲ್ಲಿ 29 ಕೆಜಿ ಬೆಳ್ಳಿ ಜಪ್ತಿ

Atul Subhash: ಟೆಕಿ ಅತುಲ್‌ ಪತ್ನಿ ಬೇಲ್‌ ಅರ್ಜಿ ನಾಡಿದ್ದು ಇತ್ಯರ್ಥಪಡಿಸಿ: ಕೋರ್ಟ್ ‌

Atul Subhash: ಟೆಕಿ ಅತುಲ್‌ ಪತ್ನಿ ಬೇಲ್‌ ಅರ್ಜಿ ನಾಡಿದ್ದು ಇತ್ಯರ್ಥಪಡಿಸಿ: ಕೋರ್ಟ್ ‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

puttige-4

Udupi; ಗೀತಾರ್ಥ ಚಿಂತನೆ 144: ವೇದಗಳಿಗೆ ಇನ್ನೊಂದು ಅಪೌರುಷೇಯವಿಲ್ಲ

Maharashtra Politics: ಹೋಳಾಗಿರುವ ಎನ್‌ಸಿಪಿ ಎರಡೂ ಬಣ ಶೀಘ್ರದಲ್ಲೇ ಒಂದಾಗುವ ಸಾಧ್ಯತೆ?

Maharashtra Politics: ಹೋಳಾಗಿರುವ ಎನ್‌ಸಿಪಿ ಎರಡೂ ಬಣ ಶೀಘ್ರದಲ್ಲೇ ಒಂದಾಗುವ ಸಾಧ್ಯತೆ?

RSS ಭಾಗವತ್‌ರ ಮಂದಿರ ಮಸೀದಿ ಹೇಳಿಕೆಗೆ ಈಗ “ಪಾಂಚಜನ್ಯ’ ಸಮರ್ಥನೆ

RSS ಭಾಗವತ್‌ರ ಮಂದಿರ ಮಸೀದಿ ಹೇಳಿಕೆಗೆ ಈಗ “ಪಾಂಚಜನ್ಯ’ ಸಮರ್ಥನೆ

Supreme Court: ತೀರ್ಪಿನಲ್ಲಿ ಲವ್‌ ಜೆಹಾದ್‌ ಉಲ್ಲೇಖ ತೆಗೆದುಹಾಕಲು ಸುಪ್ರೀಂ ಕೋರ್ಟ್‌ ನಕಾರ

Supreme Court: ತೀರ್ಪಿನಲ್ಲಿ ಲವ್‌ ಜೆಹಾದ್‌ ಉಲ್ಲೇಖ ತೆಗೆದುಹಾಕಲು ಸುಪ್ರೀಂ ಕೋರ್ಟ್‌ ನಕಾರ

Kumbh Mela: ನೇಪಾಲ, ಉತ್ತರಾಖಂಡದಿಂದ ಪೂಜಾ ಸಾಮಗ್ರಿ ಖರೀದಿ

Kumbh Mela: ನೇಪಾಲ, ಉತ್ತರಾಖಂಡದಿಂದ ಪೂಜಾ ಸಾಮಗ್ರಿ ಖರೀದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.