ಸಂಪತ್ತಿಗೆ ಸವಾಲ್: ಕೋವಿಡ್ ಕಾಲದಲ್ಲೂ 2020 ಶ್ರೀಮಂತರಿಗೆ ಬಂಪರ್
Team Udayavani, Dec 27, 2020, 12:12 AM IST
2020ರ ಬಹುತೇಕ ಕಾಲಾವಧಿಯನ್ನು ಲಾಕ್‌ಡೌನ್ ನುಂಗಿಹಾಕಿದ್ದರೂ ಇದರಿಂದ ಭಾರತದ ಟಾಪ್-10 ಅಗರ್ಭ ಶ್ರೀಮಂತರಿಗೆ ಕಿಂಚಿತ್ತೂ ನಷ್ಟವಾಗಿಲ್ಲ. 2020ರಲ್ಲಿ ಈ ಸೂಪರ್ ಸಿರಿವಂತರ ಕ್ಲಬ್ ಭರ್ಜರಿ 9 ಲಕ್ಷ ಕೋಟಿ ರೂ.ಗೂ ಅಧಿಕ ನಿವ್ವಳ ಆದಾಯ ಹೆಚ್ಚಿಸಿಕೊಂಡಿದೆ!
ದೇಶದ ಜಿಡಿಪಿ ಗಿಂತ 5 ಪಟ್ಟು ಹೆಚ್ಚು ಗಳಿಕೆ!
ಪ್ರಸ್ತುತ ಭಾರತದ ಅಗ್ರ ಟಾಪ್-10 ಶ್ರೀಮಂತರ ನಿವ್ವಳ ಸಂಪತ್ತು 35.5 ಲಕ್ಷ ಕೋಟಿ ರೂ.! 2019ರ ಡಿಸೆಂಬರ್‌ನಲ್ಲಿ ಇವರ ಒಟ್ಟು ಆದಾಯ 26.8 ಲಕ್ಷ ಕೋಟಿ ರೂ. ಇತ್ತು. ಅಂದರೆ, ಶತಕೋಟ್ಯಾಧಿಪತಿಗಳು ಈ ಒಂದು ವರ್ಷದಲ್ಲಿ ತಮ್ಮ ಆದಾಯವನ್ನು ದೇಶದ ಜಿಡಿಪಿಗಿಂತ (2.6 ಲಕ್ಷ ಕೋಟಿ ರೂ.) 5 ಪಟ್ಟು ಹೆಚ್ಚಿಸಿಕೊಂಡಿದ್ದಾರೆ!
ಅಂಬಾನಿ ಮತ್ತೆ ನಂ.1
ದೇಶದ ಆಗರ್ಭ ಶ್ರೀಮಂತರ ಪಟ್ಟಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿ. ದಿಗ್ಗಜ ಮುಕೇಶ್ ಅಂಬಾನಿ ನಂ.1 ಸ್ಥಾನ ಕಾಯ್ದುಕೊಂಡಿದ್ದು, 6.44 ಲಕ್ಷ ಕೋಟಿ ರೂ.ಗೆ ನಿವ್ವಳ ಸಂಪತ್ತು ಹೆಚ್ಚಿಸಿಕೊಂಡಿದ್ದಾರೆ. ಕೇವಲ 12 ತಿಂಗಳಲ್ಲಿ ಇವರ ಗಳಿಕೆ ಶೇ.37.2ರಷ್ಟು ಏರಿದೆ. ಅಂದರೆ, ಈ ವರ್ಷ ಅಂಬಾನಿ ಬೊಕ್ಕಸಕ್ಕೆ 1.58 ಲಕ್ಷ ಕೋಟಿ ರೂ. ಜಮೆ ಆಗಿದೆ!
ಅದಾನಿ - ರಾಮ್‌ದೇವ್ ಸೂಪರ್‌ಫಾಸ್ಟ್!
ಅದಾನಿ ಗ್ರೂಪ್‌ನ ಗೌತಮ್ ಅದಾನಿ ಈ ವರ್ಷ ದಾಖಲೆಯೆಂಬಂತೆ ಶೇ.113ರಷ್ಟು ಅದಾಯ ಹೆಚ್ಚಿಸಿಕೊಂಡು ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದರು. ಇವರ ನಿವ್ವಳ ಆದಾಯ 3.02 ಲಕ್ಷ ಕೋಟಿ ರೂ.! ಹಾಗೆಯೇ ಪತಂಜಲಿ, ರುಚಿ ಸೋಯಾ ಒಡೆತನದ ಬಾಬಾ ರಾಮ್‌ದೇವ್ ಮತ್ತು ಆಚಾರ್ಯ ಬಾಲಕೃಷ್ಣ ಈ ವರ್ಷ ಭಾರೀ ದಾಖಲೆಯೆಂಬಂತೆ 19,968 ಕೋಟಿ ರೂ. ನಿವ್ವಳ ಆದಾಯವನ್ನು ಗಳಿಸಿದ್ದಾರೆ.
ಭಾರತದ ಟಾಪ್-5 ಆಗರ್ಭ ಸಿರಿವಂತರು
1. ಮುಕೇಶ್ ಅಂಬಾನಿ
ಸಂಸ್ಥೆ: ರಿಲಯನ್ಸ್ ಇಂಡಸ್ಟ್ರೀಸ್ ಲಿ.
ನಿವ್ವಳ ಸಂಪತ್ತು: 6.43 ಲಕ್ಷ ಕೋಟಿ
ಈ ವರ್ಷ ಹೆಚ್ಚಿದ್ದು: 37.2 %
2. ಗೌತಮ್ ಅದಾನಿ
ಸಂಸ್ಥೆ: ಅದಾನಿ ಪೋರ್ಟ್ಸ್ ಮತ್ತು ಎಸ್‌ಇಝಡ್
ನಿವ್ವಳ ಸಂಪತ್ತು: 3.02 ಲಕ್ಷ ಕೋಟಿ ರೂ.
ಈ ವರ್ಷ ಹೆಚ್ಚಿದ್ದು: 113.0%
3. ಅಜೀಮ್ ಪ್ರೇಮ್‌ಜಿ
ಸಂಸ್ಥೆ: ವಿಪ್ರೊ ನಿವ್ವಳ
ಸಂಪತ್ತು: 1.62 ಲಕ್ಷ ಕೋಟಿ ರೂ.
ಈ ವರ್ಷ ಹೆಚ್ಚಿದ್ದು: 55.4%
4. ಶಿವ್ ನಾಡಾರ್
ಸಂಸ್ಥೆ: ಎಚ್‌ಸಿಎಲ್ ಟೆಕ್ನಾಲಜೀಸ್
ನಿವ್ವಳ ಸಂಪತ್ತು: 1.51 ಲಕ್ಷ ಕೋಟಿ ರೂ.
ಈ ವರ್ಷ ಹೆಚ್ಚಿದ್ದು: 62.7%
5. ಅಶ್ವಿನ್ ದಾನಿ
ಸಂಸ್ಥೆ: ಏಷ್ಯನ್ ಪೇಂಟ್ಸ್
ನಿವ್ವಳ ಸಂಪತ್ತು: 1.34 ಲಕ್ಷ ಕೋಟಿ ರೂ.
ಈ ವರ್ಷ ಹೆಚ್ಚಿದ್ದು: 48.3%
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್ ಸಿಇಒ ಸುಂದರ್ ಪಿಚೈ
RBI:ಸಾಲ ಮನ್ನಾ ಸೇರಿ ಉಚಿತ ಕೊಡುಗೆ ಆತಂಕಕಾರಿ- ಆರ್‌ಬಿಐ
Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು
Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ
ರಾಷ್ಟ್ರಾದ್ಯಂತ ಶೈಕ್ಷಣಿಕ ಪಠ್ಯಗಳ ಪೂರೈಕೆಗೆ ಫ್ಲಿಪ್ ಕಾರ್ಟ್ ಮತ್ತು NCERT ಒಪ್ಪಂದ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
PAK Vs SA: ಸರಣಿ ಕ್ಲೀನ್ ಸ್ವೀಪ್ ಗೈದ ಪಾಕಿಸ್ಥಾನ
Eshwara Khandre; ಕುಕ್ಕೆ, ಧರ್ಮಸ್ಥಳದಲ್ಲಿ: ಕಸ್ತೂರಿ ರಂಗನ್ ವರದಿ ಸಂಪೂರ್ಣ ತಿರಸ್ಕಾರ
BCCI: ಇನ್ನೆರಡು ಟೆಸ್ಟ್ ನಿಂದ ಮೊಹಮ್ಮದ್ ಶಮಿ ಹೊರಕ್ಕೆ
Dakshina Kannada; ಜಿಲ್ಲಾ ಕೆಡಿಪಿ ಸಭೆ: ಕರಾವಳಿ ನಿರ್ಲಕ್ಷ್ಯ ಆರೋಪಿಸಿ ಬಿಜೆಪಿ ಸಭಾತ್ಯಾಗ
Khel Ratna ನಾಮನಿರ್ದೇಶಿತರ ಪಟ್ಟಿಯಲ್ಲಿ ಭಾಕರ್ ಹೆಸರಿಲ್ಲ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.