ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಮಾರುಕಟ್ಟೆ ಬಂಡವಾಳ ಏರಿಕೆ
ಅಧಿಕ ಬಂಡವಾಳ ಹೊಂದಿದ್ದ ಮೊದಲ ಭಾರತೀಯ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರ
Team Udayavani, Nov 21, 2019, 4:33 PM IST
ಹೊಸದಿಲ್ಲಿ: ಜಿಯೋ ಸಂಸ್ಥೆ ಒಡೆಯ ಮುಖೇಶ್ ಅಂಬಾನಿ ಆಡಳಿತದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ (ಆರ್‌ಐಎಲ್) ಮಾರುಕಟ್ಟೆ ಬಂಡವಾಳ (ಎಂ ಕ್ಯಾಪಿಟಲ್) ಮೌಲ್ಯದಲ್ಲಿ ಭಾರಿ ಪ್ರಮಾಣದ ಏರಿಕೆ ಕಂಡು ಬಂದಿದ್ದು, ಸತತವಾಗಿ 11ನೇ ವರ್ಷವೂ ಬಂಡವಾಳ ಹೂಡಿಕೆಯಲ್ಲಿ ರಿಲಯನ್ಸ್ ಸಂಸ್ಥೆ ಮುಂದಿದೆ.
3.6 ಲಕ್ಷ ಕೋಟಿ ರೂ. ಸಂಪತ್ತು ಹೊಂದಿರುವ ಬಿಲಿಯನರ್ ಮುಖೇಶ್ ಅಂಬಾನಿ ಮುಖ್ಯಸ್ಥರಾಗಿರುವ ದೇಶದ ಅತ್ಯಮೂಲ್ಯ ಸಂಸ್ಥೆಯಾದ ರಿಲಯನ್ಸ್ ಇಂಡಸ್ಟ್ರೀಸ್ ಮಾರುಕಟ್ಟೆ ಮೌಲ್ಯಮಾಪನದಲ್ಲಿ ತನ್ನ ಷೇರು ಬೆಲೆಯಲ್ಲಿ ನಿರಂತರವಾಗಿ ಏರಿಕೆ ಕಂಡು ಬರುತ್ತಿದ್ದು, ಎಂ- ಕ್ಯಾಪ್ ಮೌಲ್ಯ 10 ಲಕ್ಷ ಕೋಟಿ ರೂ. ಹತ್ತಿರವಿದೆ ಎಂದು ತಿಳಿಸಿದೆ. ಜತೆಗೆ ಷೇರು ಮೌಲ್ಯದಲ್ಲಿ ಶೇ.4.10ರಷ್ಟು ಏರಿಕೆ ಕಂಡು ಬಂದಿದ್ದು, 1,571.85 ರೂ.ಗೆ ತಲುಪುವ ಮೂಲಕ ಒಟ್ಟಾರೆ ಮೌಲ್ಯದಲ್ಲಿ ಏರಿಕೆ ಕಂಡು ಬಂದಿದೆ ಎಂದು ಕಂಪನಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.
ಮುಂದಿನ ಕೆಲವು ವಾರಗಳಲ್ಲಿ ಟೆಲಿಕಾಂ ನಿಯಮಗಳಿಗೆ ಅನುಸಾರವಾಗಿ ಮೊಬೈಲ್ ಕರೆ ಮತ್ತು ಡೇಟಾ ಶುಲ್ಕ ಹೆಚ್ಚಿಸುವುದಾಗಿ ಜಿಯೋ ಮಂಗಳವಾರ ಪ್ರಕಟಣೆ ಹೊರಡಿಸಿತ್ತು. ಇದಕ್ಕೂ ಮೊದಲು ಭಾರ್ತಿ ಏರ್‌ಟೆಲ್ ಮತ್ತು ವೋಡಾಫೋನ್ ಐಡಿಯಾ ಕೂಡ ಡಿಸೆಂಬರ್‌ನಿಂದ ದರ ಹೆಚ್ಚಿಸುವುದಾಗಿ ತಿಳಿಸಿದ್ದವು.
ಬಿಎಸ್‌ಇನಲ್ಲಿ ಕಂಪನಿಯ ಮಾರುಕಟ್ಟೆ ಮೌಲ್ಯವು 32,525.22 ರೂ. ಕೋಟಿಯಿಂದ 9,90,366.80 ರೂ. (ಬೆಳಿಗ್ಗಿನ ವಹಿವಾಟು) ಕೋಟಿಗೆ ಬಂದು ತಲುಪಿದ್ದು, ಕಳೆದ ತಿಂಗಳ ಮಧ್ಯಂತರ ವಹಿವಾಟಿನಂದು 9 ಲಕ್ಷ ಕೋಟಿ ರೂ. ರಷ್ಟು ಮಾರುಕಟ್ಟೆ ಬಂಡವಾಳ ದಾಟಿದ ಮೊದಲ ಭಾರತೀಯ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮಾರುಕಟ್ಟೆಯಲ್ಲಿ ಬಂಡವಾಳ ಹೂಡಿಕೆ ಮೌಲ್ಯಮಾಪನ ಆಧಾರದಲ್ಲಿ ಕಳೆದ ವರ್ಷ ಅಗಸ್ಟ್ ನಲ್ಲಿ ದೇಶಿಯ ಕಂಪನಿಗಳ ಪೈಕಿ ಆರ್‌ಐಎಲ್ 8 ಲಕ್ಷ ಕೋಟಿ ಗಡಿ ದಾಟಿತ್ತು. ಈಗ ಅದು 10 ಲಕ್ಷ ಕೋಟಿ ತಲುಪುವ ಸನಿಹದಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್ ಸಿಇಒ ಸುಂದರ್ ಪಿಚೈ
RBI:ಸಾಲ ಮನ್ನಾ ಸೇರಿ ಉಚಿತ ಕೊಡುಗೆ ಆತಂಕಕಾರಿ- ಆರ್ಬಿಐ
Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು
Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ
ರಾಷ್ಟ್ರಾದ್ಯಂತ ಶೈಕ್ಷಣಿಕ ಪಠ್ಯಗಳ ಪೂರೈಕೆಗೆ ಫ್ಲಿಪ್ ಕಾರ್ಟ್ ಮತ್ತು NCERT ಒಪ್ಪಂದ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.