ರೂಲ್ ಆಫ್ 72 : ನಿಮ್ಮ ಹಣ ಹೇಗೆ ದುಪ್ಪಟ್ಟುಗೊಳಿಸಬಹುದು..?!
Team Udayavani, Mar 29, 2021, 10:26 AM IST
ನವ ದೆಹಲಿ : ನಿಮ್ಮ ಹಣವನ್ನು ದುಪ್ಪಟ್ಟುಗೊಳಿಸಿಕೊಳ್ಳಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ಎಂದಾದರೂ ಯೋಚಿಸಿದ್ದೀರಾ..? ಸರಳ ತಂಬ್ ರೂಲ್ ನ ಸಹಾಯದ ಮೂಲಕ ನೀವು ಅದನ್ನು ತಿಳಿದುಕೊಳ್ಳಬಹುದಾಗಿದೆ.
ಈ ತಂಬ್ ರೂಲ್ ನ ಪ್ರಕಾರ, ಆದಾಯದ ಬಡ್ಡಿದರವನ್ನು 72 ರಿಂದ ಭಾಗಿಸುವುದರ ಮೂಲಕ ನಿಮ್ಮ ಹೂಡಿಕೆಗಳನ್ನು ದುಪ್ಪಟ್ಟುಗೊಳಿಸಲು ಎಷ್ಟು ಸಮಯ ಬೇಕಾಗುತ್ತದೆ ಎಂದು ತಿಳಿಯಲು ಸಾಧ್ಯ.
ಓದಿ : ಟೀ ಮಾರಿ ಕೋಟ್ಯಧಿಪತಿಯಾದ 22ರ ಯುವಕ : ಅರ್ಧಕ್ಕೆ ಶಿಕ್ಷಣ ಬಿಟ್ಟವ ಕುಬೇರನಾದ ರಿಯಲ್ ಕಹಾನಿ
ಉದಾಹರಣೆಯೊಂದಿಗೆ ವಿವರಿಸುವುದಾದರೇ, ನೀವು 1 ಲಕ್ಷವನ್ನು ಬ್ಯಾಂಕ್ ಸ್ಥಿರ ಠೇವಣಿಯಲ್ಲಿ ಶೇಕಡಾ 5 ಕ್ಕೆ ಹೂಡಿಕೆ ಮಾಡಲು ಬಯಸುತ್ತೀರಿ ಎಂದು ಭಾವಿಸೋಣ. 1 ಲಕ್ಷವು 2 ಲಕ್ಷ ಆಗಲು ತೆಗೆದುಕೊಳ್ಳುವ ಸಮಯವನ್ನು ತಿಳಿಯಲು 72 ಅನ್ನು ಬಡ್ಡಿದರದಿಂದ (5%) ಭಾಗಿಸಿ. 72/5 ಭಾಗಿಸಿದಾಗ 14.4 ವರ್ಷಗಳು ಬೇಕಾಗುತ್ತದೆ ಎಂದು ತಿಳಿಯುತ್ತದೆ. ಈ ರೂಲ್ ನ ಪ್ರಕಾರ, ನಿಮ್ಮ ಬಡ್ಡಿದರ 1 ಲಕ್ಷಕ್ಕೆ ಶೇಕಡಾ 5 ಆಗಿದ್ದರೆ ಪ್ರತಿ 14.4 ವರ್ಷಗಳಿಗೊಮ್ಮೆ, ನಿಮ್ಮ ಹಣ ದುಪ್ಪಟ್ಟಾಗುತ್ತದೆ.
ನಿಮ್ಮ ಇಕ್ವಿಟಿ ಆದಾಯವು ಪ್ರತಿವರ್ಷ ಸರಾಸರಿ ಶೇಕಡಾ 10 ಆಗಿದ್ದರೆ, ನಿಮ್ಮ ಹಣವು 7.2 ವರ್ಷಗಳಲ್ಲಿ (72/10) ದುಪ್ಪಟ್ಟಾಗುತ್ತದೆ.
ಒಂದು ನಿರ್ದಿಷ್ಟ ಸಮಯದಲ್ಲಿ ನಿಮ್ಮ ಹಣವನ್ನು ದುಪ್ಪಟ್ಟು ಮಾಡಿಕೊಳ್ಳಲು ಎಷ್ಟು ಬಡ್ಡಿದರ ಬೇಕು ಎಂದು ತಿಳಿಯಲು ನೀವು ಈ ರೂಲ್ ನ್ನು ಸ್ವಲ್ಪ ಬದಲಾಯಿಸಿಕೊಳ್ಳಬೇಕಾಗುತ್ತದೆ. ಉದಾಹರಣೆಗೆ, ನಿಮ್ಮ ಹಣವನ್ನು ನೀವು ಐದು ವರ್ಷಗಳಲ್ಲಿ ದುಪ್ಪಟ್ಟುಗೊಳಿಸಲು ಎಷ್ಟು ಬಡ್ಡಿದರದಲ್ಲಿ ನಾವು ಹಣ ಠೇವಣಿ ಮಾಡಬೇಕಾಗುತ್ತದೆ ಎಂದು ತಿಳಿದುಕೊಳ್ಳಲು, 72 ಅನ್ನು 5 ರಿಂದ ಭಾಗಿಸಿ, ಅದು ಶೇಕಡಾ. 14.4 ಆಗುತ್ತದೆ. ಆದ್ದರಿಂದ, ಐದು ವರ್ಷಗಳಲ್ಲಿ ನಿಮ್ಮ ಹಣವನ್ನು ದುಪ್ಪಟ್ಟುಗೊಳಿಸಲು ನಿಮಗೆ ಶೇಕಡಾ 14.4 ಬಡ್ಡಿದರ ಬೇಕಾಗುತ್ತದೆ.
ಓದಿ : ‘ಯುವರತ್ನ’ ಬುಕಿಂಗ್ ಜೋರು: ಏ.1 ಚಿತ್ರ ರಿಲೀಸ್
ತಂಬ್ ರೂಲ್, ವರ್ಷಗಳಲ್ಲಿ ನಿಮ್ಮ ಹೂಡಿಕೆ ಹೇಗೆ ಕಂಪೌಂಡ್ ಮಾಡುತ್ತದೆ ಎಂಬುದನ್ನು ತಿಳಿಸುತ್ತದೆ. ಶೇಕಡಾ 5 ಬಡ್ಡಿದರದ.. ಫಿಕ್ಸಡ್ ಡೆಪೋಸಿಟ್ ರಿಟರರ್ನ್ ನಲ್ಲಿ, ನಿಮ್ಮ 1 ಲಕ್ಷ ಹೂಡಿಕೆ ಸುಮಾರು 29 ವರ್ಷಗಳಲ್ಲಿ 3 ಲಕ್ಷ ಮತ್ತು ಸುಮಾರು 43 ವರ್ಷಗಳಲ್ಲಿ 6 ಲಕ್ಷ ಆಗುತ್ತದೆ. ಕಂಪೌಂಡಿಂಗ್ ಕ್ಯಾಲ್ಕುಲೇಶನ್ ನನ್ನು ಸರಳೀಕರಿಸಲು ಈ ರೂಲ್ ನಿಮಗೆ ಸಹಾಯ ಮಾಡುತ್ತದೆ.
ಓದಿ : ಮಂಗಳೂರು ವಿಮಾನ ನಿಲ್ದಾಣ: ವಿಶೇಷ ವಿನ್ಯಾಸದ ಪಾದರಕ್ಷೆಯಲ್ಲಿ ಚಿನ್ನ ಕಳ್ಳಸಾಗಾಟ ಪತ್ತೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jio domain ಗಲಾಟೆ ನಡುವೆಯೇ “ಜಿಯೋಸ್ಟಾರ್’ ಹೊಸ ವೆಬ್‌ಸೈಟ್ ಪ್ರತ್ಯಕ್ಷ!
Haldiram ಭುಜಿಯಾವಾಲಾದಲ್ಲಿ ₹235 ಕೋಟಿ ಹೂಡಿಕೆ ಮಾಡಿದ ಭಾರತ್ ವ್ಯಾಲ್ಯು ಫಂಡ್
Gold Rates:ಡಾಲರ್ ಬೆಲೆ ಏರಿಕೆ-18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?
Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….
Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.