ಸಂಗೀತಾ ಮೊಬೈಲ್ಸ್ ನಲ್ಲಿ ರೆಡ್ಮಿ ನೋಟ್4 ಮಾರಾಟ
Team Udayavani, Mar 27, 2017, 12:34 PM IST
ಬೆಂಗಳೂರು: ಇದುವರೆಗೆ ಆನ್‌ಲೈನ್‌ನಲ್ಲಿ ಮಾತ್ರ ಲಭ್ಯವಿದ್ದ ರೆಡ್ಮಿ ನೋಟ್4 ಸ್ಮಾರ್ಟ್‌ಫೋನ್‌ಗಳು ಈಗ ಆಫ್‌ಲೈನ್‌ನಲ್ಲಿ ಅಂದರೆ ಎಲ್ಲ ಸಂಗೀತಾ ಮೊಬೈಲ್ಸ್ ಶೋರೂಮ್‌ಗಳಲ್ಲಿ ದೊರೆಯಲಿವೆ. ಪ್ರಥಮ ಬಾರಿಗೆ ಸಂಗೀತಾ ಮೊಬೈಲ್ಸ್ ಪ್ರೈ.ಲಿಮಿಟೆಡ್ ಹಾಗೂ ಕ್ಸಿಯೋಮಿ ಸಂಸ್ಥೆಯ ಸಹಭಾಗಿತ್ವದಲ್ಲಿ ರೆಡ್ಮಿ ನೋಟ್4 ಮಾ.18 ರಿಂದ ಆಫ್‌ಲೈನ್ ಮಾರಾಟ ಆರಂಭವಾಗಿದೆ.
ಅತಿ ಹೆಚ್ಚು ಗ್ರಾಹಕರನ್ನು ಆಕರ್ಷಿಸಿ ಮಾರಾಟವಾಗುತ್ತಿರುವ ಸ್ಮಾರ್ಟ್‌ಫೋನ್ ಬ್ರಾoಡ್‌ಗಳಲ್ಲಿ ರೆಡ್ಮಿ ನೋಟ್4 ಕೂಡ ಒಂದಾಗಿದ್ದು, ಈಗ ಗ್ರಾಹಕರು ರೆಡ್ಮಿ ನೋಟ್ ಅನ್ನು ಎಲ್ಲ ಸಂಗೀತಾ ಮಳಿಗೆಗಳಲ್ಲಿ ಕಾಣಬಹುದು. ಸಂಗೀತಾದಲ್ಲಿ ಸ್ಮಾರ್ಟ್‌ಫೋನ್ ಖರೀದಿಸಿದ ಗ್ರಾಹಕರ ಫೋನ್‌ನ ಬೆಲೆ ದಿಢೀರ್ ಕುಸಿತವಾದರೆ, ವ್ಯತ್ಯಾಸ ಹಣವನ್ನು ಗ್ರಾಹಕರಿಗೆ ಕರೆ ಮಾಡಿ ಹಿಂತಿರುಗಿಸಲಾಗುವುದು.
ಅದೇ ರೀತಿ ಫೋನ್ ಕೈಜಾರಿ ಕೆಳಗೆ ಬಿದ್ದು ಒಡೆದುಹೋದರೆ, ಅದೇ ಬ್ರಾoಡಿನ ಹೊಸ ಫೋನನ್ನು ಅರ್ಧ ಬೆಲೆ ಕೊಟ್ಟು ಪಡೆಯಬಹುದು. ಈ ಪ್ರೈಸ್ ಪ್ರೊಟೆಕ್ಷನ್ ಮತ್ತು ಡ್ಯಾಮೇಜ್ ಪ್ರೊಟೆಕ್ಷನ್ ಸೀಮ್‌ಗಳು ಎಲ್ಲ ಸ್ಮಾರ್ಟ್‌ಫೋನ್‌ಗಳಿಗೂ ಅನ್ವಯಿಸುತ್ತವೆ ಎಂದು ಸಂಗೀತಾ ಮೊಬೈಲ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಎಲ್. ಸುಭಾಷ್ ಚಂದ್ರ ತಿಳಿಸಿದ್ದಾರೆ.
ಸ್ಮಾರ್ಟ್ ಫೋನ್‌ಗಳನ್ನು ಬಳಸುವವರ ಸಂಖ್ಯೆಯಲ್ಲಿ ಅಮೆರಿಕವನ್ನು ಹಿಂದಿಕ್ಕಿರುವ ಭಾರತ ವಿಶ್ವದ ಎರಡನೇ ರಾಷ್ಟ್ರವಾಗಿ ಹೊರಹೊಮ್ಮಿದೆ. ಇಲ್ಲಿನ ಗ್ರಾಹಕರು ಸದಾ ಹೊಸತನ ಹಾಗೂ ಕ್ರಿಯಾಶೀಲತೆಯುಳ್ಳ ವಸ್ತುಗಳನ್ನು ಬಯಸುತ್ತಾರೆ ಹಾಗೂ ಅವರ ಅಗತ್ಯಗಳನ್ನು ಪೂರೈಸುವ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳನ್ನು ತಮ್ಮದಾಗಿಸಿಕೊಳ್ಳಲು ಇಚ್ಛಿಸುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Stock Market: ನಿನ್ನೆಯ ಕುಸಿತದಿಂದ ಪುಟಿದೆದ್ದ ಸೆನ್ಸೆಕ್ಸ್: 566 ಅಂಕ ಏರಿಕೆ
Stock: ಟ್ರಂಪ್ ನೀತಿ ಎಫೆಕ್ಟ್-ಷೇರುಪೇಟೆ ಸೂಚ್ಯಂಕ 1,200 ಅಂಕ ಕುಸಿತ, 7 ಲಕ್ಷ ಕೋಟಿ ನಷ್ಟ
Bullet Train: ಮುಂಬೈ-ಅಹಮದಾಬಾದ್ ಹೈಸ್ಪೀಡ್ ಕಾರಿಡಾರ್ ವಿದ್ಯುದ್ದೀಕರಣ ಕಾರ್ಯ ಶುರು
The Shoolin Group: ಮಂಗಳೂರಿನ ಹೊಸ ಪ್ರೀಮಿಯಂ ಹೋಟೆಲ್ ಶೂಲಿನ್ ಕಂಫರ್ಟ್ಸ್ ಉದ್ಘಾಟನೆ
Share Market: ಷೇರುಪೇಟೆ ಸೂಚ್ಯಂಕ 300 ಅಂಕ ಜಿಗಿತ: ಲಾಭಗಳಿಸಿದ ಷೇರು ಯಾವುದು?
MUST WATCH
ಹೊಸ ಸೇರ್ಪಡೆ
Rohit, Pant, Jaiswal, Gill: ರಣಜಿ ಪುನರಾಗಮನದಲ್ಲಿ ವೈಫಲ್ಯ ಕಂಡ ಟೀಂ ಇಂಡಿಯಾ ಸ್ಟಾರ್ಸ್
UV Fusion: ಸ್ವಾಮಿ ವಿವೇಕಾನಂದರ ಕನಸಿನ ರಾಷ್ಟ್ರನಿರ್ಮಾಣದಲ್ಲಿ ಯುವಜನತೆಯ ಪಾತ್ರ
Tumkur: ತುಮುಲ್ ಅಧ್ಯಕರಾಗಿ ಕೈ ಬೆಂಬಲಿತ ಅಭ್ಯರ್ಥಿ ಗೆಲುವು
Tollywood: ಹಾಲಿವುಡ್‌ಗೆ ಜೂ. ಎನ್‌ಟಿಆರ್ ಎಂಟ್ರಿ? ಖ್ಯಾತ ನಿರ್ದೇಶಕ ಹೇಳಿದ್ದೇನು?
Shiva Rajkumar: ಜ.26ಕ್ಕೆ ಶಿವಣ್ಣ ವಾಪಸ್: ಸ್ವಾಗತಕ್ಕೆ ಅದ್ಧೂರಿ ತಯಾರಿ