ಉಳಿತಾಯ- ಹೂಡಿಕೆ ; ಗೃಹಿಣಿಯರ ಪಾತ್ರ
Team Udayavani, Nov 29, 2020, 5:44 AM IST
ಸಾಂದರ್ಭಿಕ ಚಿತ್ರ
ದೇಶದಲ್ಲಿ ಕುಟುಂಬದ ಹಣಕಾಸು ವ್ಯವಹಾರಗಳನ್ನು ಪುರುಷರೇ ನಿರ್ವಹಿಸುವುದು ಸಾಂಪ್ರದಾಯಿಕವಾಗಿ ನಡೆದುಬಂದಿದೆ. ಆದರೆ ಬದಲಾಗುತ್ತಿರುವ ಕಾಲ ಹಾಗೂ ಹಣದುಬ್ಬರದಂತಹ ಸನ್ನಿವೇಶಗಳಿಗೆ ತಕ್ಕಂತೆ ಗೃಹಿಣಿಯರು ಹಾಗೂ ಉದ್ಯೋಗಸ್ಥೆ ಮಹಿಳೆಯರು ಕುಟುಂಬದ ಹಣಕಾಸು ವ್ಯವಹಾರಗಳನ್ನು ನೋಡಿಕೊಳ್ಳಲು ಆರಂಭಿಸಿದ್ದಾರಲ್ಲದೇ ಅದರಲ್ಲಿ ಯಶಸ್ವಿಯೂ ಆಗಿದ್ದಾರೆ.
ಪದೇಪದೆ ಏರಿಳಿತ ಕಾಣುತ್ತಿರುವ ಆರ್ಥಿಕ ಸನ್ನಿವೇಶದಲ್ಲಿ ತನ್ನ ಕುಟುಂಬದ ಹಣಕಾಸು ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸುವುದು ಪ್ರತಿಯೊಬ್ಬ ಗೃಹಿಣಿಯ ಮೇಲಿರುವ ಮಹತ್ವದ ಜವಾಬ್ದಾರಿಯಾಗಿದೆ. ಮನೆಯ ಡಬ್ಬಿಗಳಲ್ಲಿ ಹಣ ಕೂಡಿಡುವ ಹಳೇ ಸಂಪ್ರದಾಯದ ಬದಲಾಗಿ ಇಂದು ಬ್ಯಾಂಕ್‌ಗಳು ಹಾಗೂ ಹೂಡಿಕೆಯ ತಾಣಗಳನ್ನು ಗೃಹಿಣಿಯರು ಹಣ ಉಳಿತಾಯಕ್ಕೆ ಆಶ್ರಯಿಸಿದ್ದಾರೆ.
ತಾಂತ್ರಿಕವಾಗಿ ನೋಡುವುದಾ ದರೆ ಪ್ರತಿಯೊಂದೂ ಕುಟುಂಬ ದಲ್ಲಿ ಗೃಹಿಣಿ ಸಂಪಾದನೆ ಮಾಡುವ ಸದಸ್ಯೆಯಲ್ಲ, ಆದರೆ ಆಕೆಯ ಹೆಗಲ ಮೇಲೆ ಕುಟುಂಬದ ಹಣಕಾಸು ವ್ಯವಹಾರವನ್ನು ನಿಭಾಯಿಸುವ ಮಹತ್ವದ ಜವಾಬ್ದಾರಿಯಿದೆ. ಇಂದಿನ ಗೃಹಿಣಿಯರು ಸುಶಿಕ್ಷಿತರಾಗಿದ್ದು, ಸಮಾಜದ ಆಗುಹೋಗುಗಳನ್ನು ಗ್ರಹಿಸುವ ಸಾಮರ್ಥ್ಯವುಳ್ಳವರಾಗಿದ್ದಾರೆ. ಹಣಕಾಸು ಸವಾಲುಗಳನ್ನು ನಿಭಾಯಿಸಲು ಎಂದಿಗಿಂತ ಹೆಚ್ಚು ಸಮರ್ಥರಾಗಿದ್ದಾರೆ.
ಹಣಕಾಸು ನಿರ್ವಹಣೆ
ಉಳಿತಾಯ ಮಾಡುವ ವಿಷಯದಲ್ಲಿ ಮಹಿಳೆಯರು ಹೆಚ್ಚು ಚಾಣಾಕ್ಷರು. ಮನೆ ಹಾಗೂ ಮಕ್ಕಳ ಭವಿಷ್ಯದ ಬಗೆಗಿನ ಹಣಕಾಸು ಯೋಜನೆಗಳನ್ನು ಮಹಿಳೆಯರು ಉತ್ತಮವಾಗಿ ನಿರ್ಧರಿಸಬಲ್ಲರು. ಹಣಕಾಸು ವ್ಯವಹಾರ/ ಯೋಜನೆಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸುವುದು ಅತ್ಯಗತ್ಯವಾಗಿದೆ.
ಗೃಹಿಣಿಯರ ಉಳಿತಾಯಕ್ಕೆ ಸರಳ ಸೂತ್ರಗಳು
– ಕುಟುಂಬದ ಹಣಕಾಸು ವ್ಯವಹಾರ, ಹೂಡಿಕೆ, ವಿಮೆ ಮೊದಲಾದ ವಿಚಾರಗಳಲ್ಲಿ ಗೃಹಿಣಿಯರು ಆಸಕ್ತಿ ವಹಿಸಬೇಕು. ಗೃಹಿಣಿಯಾಗಿರುವ ನೆಲೆಯಲ್ಲಿ, ತಮ್ಮದೇ ಆದ ಬ್ಯಾಂಕ್ ಖಾತೆಯನ್ನು ತೆರೆದು, ಉಳಿತಾಯ ಮಾಡುವ ಹಣವನ್ನು ಅದರಲ್ಲಿ ಜಮೆ ಮಾಡಬಹುದಾಗಿದೆ. ಫಿಕ್ಸೆಡ್ ಠೇವಣಿ ಖಾತೆ ತೆರೆದು, ಹಣವನ್ನು ಜಮೆ ಮಾಡುವ ಮೂಲಕ ಅದನ್ನು ವೃದ್ಧಿಸಬಹುದು.
– ಪ್ರತೀ ಹೂಡಿಕೆ ಯೋಜನೆಯಲ್ಲಿ ತನ್ನನ್ನು ಸಹ-ಖಾತೆದಾರ (Joint Holder) ರನ್ನಾಗಿ ಮಾಡುವಂತೆ ಪತಿಗೆ ಹೇಳಬೇಕು. ಒಂದು ವೇಳೆ ಅದು ಸಾಧ್ಯವಿಲ್ಲದಿದ್ದಲ್ಲಿ ಅಥವಾ ಪಿಂಚಣಿ ಖಾತೆ ಮುಂತಾದವುಗಳಲ್ಲಿ ಪತ್ನಿಯ ಹೆಸರನ್ನು ನಾಮಿನಿ (ನಾಮನಿರ್ದೇಶನ)ಯಾಗಿ ಸೇರ್ಪಡೆಗೊಳಿಸುವಂತೆ ತಿಳಿಸಬೇಕು. ಇದು ಭವಿಷ್ಯದಲ್ಲಿ ನೆರವಾಗುತ್ತದೆ.
– ಪತಿಯ ಪ್ರತೀ ಹೂಡಿಕೆ, ಬ್ಯಾಂಕ್ ಖಾತೆ, ದಾಖಲೆಗಳು, ಲಾಗಿನ್ ಐಡಿ ಮುಂತಾದವುಗಳ ವಿವರಗಳನ್ನು ಗೃಹಿಣಿಯು ತನ್ನ ಬಳಿ ಇಟ್ಟುಕೊಳ್ಳಬೇಕು. ವಿಮೆ, ಆರೋಗ್ಯ ವಿಮೆ, ಪಿಪಿಎಎಫ್, ಬ್ಯಾಂಕ್ ಖಾತೆ, ಫಿಕ್ಸೆಡ್ ಡಿಪಾಸಿಟ್ ಖಾತೆ ಮುಂತಾದವುಗಳ ಬಗ್ಗೆ ತಿಳಿದುಕೊಂಡಿರಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
US Election 2024, Kamala Vs Trump: ಅಮೆರಿಕ ಅಧ್ಯಕ್ಷರ ಚುನಾವಣೆ ಹೇಗೆ? ಏನು? ಎತ್ತ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.