ಸೆ. 30ರೊಳಗೆ ಈ ನಿಯಮ ಪಾಲಿಸದಿದ್ದಲ್ಲಿ 1000ರೂ. ದಂಡ..! : ಎಸ್ ಬಿ ಐ ಹೇಳಿದ್ದೇನು..?
Team Udayavani, Aug 10, 2021, 1:28 PM IST
ನವ ದೆಹಲಿ : ದೇಶದ ಅತ್ಯಂತ ದೊಡ್ಡ ನಾಗರಿಕ ಬ್ಯಾಂಕ್ ಎಂದು ಕರೆಸಿಕೊಳ್ಳುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಮಹತ್ತರವಾದ ಮಾಹಿತಿಯೊಂದನ್ನು ನೀಡಿದೆ.
ಈ ನಿಯಮವನ್ನು ಬ್ಯಾಂಕಿನ ಗ್ರಾಹಕ ಪಾಲಿಸುವುದಿಲ್ಲವೋ ಆತನ ಬ್ಯಾಂಕಿಂಗ್ ಚಟುವಟಿಕೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಕೂಡ ಬ್ಯಾಂಕ್ ಎಚ್ಚರಿಸಿದೆ.
ಸಪ್ಟೆಂಬರ್ 30ರೊಳಗೆ ಪಾನ್ ಕಾರ್ಡ್ ನನ್ನು ಆಧಾರ್ ನೊಂದಿಗೆ ಜೋಡಣೆ ಮಾಡುವಂತೆ ಸ್ಟೇಟ್ ಬ್ಯಾಂಕ್ ಎಚ್ಚರಿಸಿದೆ. ಈ ಹಿಂದೆಯೂ ಕೂಡ ಎಸ್ ಬಿ ಐ ತನ್ನ ಗ್ರಾಹಕರಿಗೆ ಎಚ್ಚರಿಸಿತ್ತು, ಆದರೇ, ಈಗ ಪಾನ್ ಹಾಗೂ ಆಧಾರ್ ಕಾರ್ಡ್ ಜಡಣೆಗೆ ಗಡಿ ವಿಸ್ತರಿಸಿದೆ.
ಇದನ್ನೂ ಓದಿ : ಇನ್ನು ಸರ್ಕಾರಿ ಕಾರ್ಯಕ್ರಮಗಳಲ್ಲಿ ಹಾರ, ತುರಾಯಿಗಿಲ್ಲ ಜಾಗ: ಸಿಎಂ ಬೊಮ್ಮಾಯಿ ಸೂಚನೆ
ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಜೋಡಣೆಗೆ ಸೆಪ್ಟೆಂಬರ್ 30, 2021 ಕೊನೆ ದಿನಾಂಕವಾಗಿದೆ. ಒಂದು ವೇಳೆ ಈ ದಿನಾಂಕವನ್ನು ಮೀರಿದರೆ ವಿಳಂಬ ಶುಲ್ಕ ಕೂಡ ಪಾವತಿಸಬೇಕಾಗಬಹುದು ಎಂದು ಬ್ಯಾಮಕ್ ಹೇಳಿದೆ.
ಈ ಹಿಂದೆ ಪಾನ್ ಕಾರ್ಡ್ ಮತ್ತು ಆಧಾರ್ ಜೋಡಣೆಗೆ ಮಾರ್ಚ್ 31, 2021 ಅಂತಿಮ ಗಡುವಾಗಿತ್ತು. ಆ ನಂತರ ಸಿಬಿಡಿಟಿಯಿಂದ ಗಡುವನ್ನು ಜೂನ್ 30ರ ತನಕ ವಿಸ್ತರಿಸಲಾಯಿತು. ಈಗ ಮತ್ತೆ ಸೆಪ್ಟೆಂಬರ್ 30ಕ್ಕೆ ಪಾನ್ ಹಾಗೂ ಆಧಾರ್ ಕಾರ್ಡ್ ಜೋಡನೆಗೆ ದಿನಾಂಕದ ಗಡುವನ್ನು ವಿಸ್ತರಿಸಿ ಆದೇಶಿಸಿದೆ.
ಸೆಪ್ಟೆಂಬರ್ 30ರೊಳಗೆ ಪಾನ್ ಕಾರ್ಡ್ ನನ್ನು ಆಧಾರ್ ಜೊತೆಗೆ ಜೋಡಣೆ ಮಾಡದಿದ್ದಲ್ಲಿ ಪಾನ್ ಕಾರ್ಡ್ ಕಾರ್ಯ ನಿರ್ವಹಿಸುವುದಿಲ್ಲ. ಅಷ್ಟೇ ಅಲ್ಲ, 1000 ರೂಪಾಯಿ ದಂಡ ಕೂಡ ವಿಧಿಸಬೇಕಾಗುತ್ತದೆ.
ಈ ದಂಡದ ಮೊತ್ತವನ್ನು ಸರ್ಕಾರ ನಿರ್ಧರಿಸುತ್ತದೆ. ಆದರೆ ಆ ಮೊತ್ತವು ರೂ. 1000 ದಾಟುವಂತಿಲ್ಲ. ಅಂದಹಾಗೆ ಪರ್ಮನೆಂಟ್ ಅಕೌಂಟ್ ನಂಬರ್ (ಪ್ಯಾನ್) ಎಂಬುದು 10 ಅಂಕಿಯ ವಿಶಿಷ್ಟ ಅಲ್ಫಾನ್ಯೂಮರಿಕ್ ಸಂಖ್ಯೆಯಾಗಿದೆ. ಇದನ್ನು ಆದಾಯ ತೆರಿಗೆ ಇಲಾಖೆಯಿಂದ ವಿತರಿಸಲಾಗುತ್ತದೆ.
ಇನ್ನು, ಯಾರಿಗೆ ಪಾನ್ ವಿತರಿಸಲಾಗಿದೆಯೋ ಮತ್ತು ಯಾರೆಲ್ಲ ಆಧಾರ್ ಸಂಖ್ಯೆ ಪಡೆದಿದ್ದಾರೋ ಅಂಥವರೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಆಧಾರ್ ಸಂಖ್ಯೆ ಬಗ್ಗೆ ಮಾಹಿತಿ ತಿಳಿಸಬೇಕು. ಒಂದು ವೇಳೆ ವಿಫಲರಾದಲ್ಲಿ ಮುಂದೆ ಆಧಾರ್ ಸಂಖ್ಯೆ ಬಗ್ಗೆ ಮಾಹಿತಿ ನೀಡುವ ತನಕ ಅಥವಾ ಜೋಡಣೆ ಆಗುವವರೆಗೆ ಪ್ಯಾನ್ ಕಾರ್ಯ ನಿರ್ವಹಿಸಲ್ಲ ಎಂದು ಆದಾಯ ತೆರಿಗೆ ಕಾಯ್ದೆ, 1961 ಸೆಕ್ಷನ್ 139ಎಎ ಹೇಳುತ್ತದೆ.
ಇದನ್ನೂ ಓದಿ : 13 ತಿಂಗಳುಗಳ ನಂತರ ಆಸ್ಪತ್ರೆಯಿಂದ ಮನೆ ತಲುಪಿದ ಆ್ಯಪಲ್ ತೂಕದ ಮಗು..!
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.