SBIನ ಯಾವುದೇ ಶಾಖೆಯಲ್ಲೂ ದಿನಕ್ಕೆ ಇಷ್ಟು ಹಣವನ್ನು ತೆಗೆಯಬಹುದು..!
Team Udayavani, May 30, 2021, 3:04 PM IST
ನವ ದೆಹಲಿ : ದೇಶದ ಅತ್ಯಂತ ದೊಡ್ಡ ನಾಗರಿಕ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಹೊಸ ಅಧಿಸೂಚನೆ ಹೊರಡಿಸಿದೆ.
ಖಾತೆಯಲ್ಲಿನ ಹಣ ವಿಥ್ ಡ್ರಾ ಮಾಡುವ ಹೊಸ ನಿಯಮಗಳ ಬಗ್ಗೆ ಹೇಳಲಾಗಿದ್ದು, ಹೋಂ ಬ್ರಾಂಚ್ ಅಥವಾ ಪ್ರಧಾನ ಶಾಖೆ ಬಿಟ್ಟು ಬೇರೆ ಶಾಖೆಗಳಲ್ಲಿ ಹಣ ವಿಥ್ ಡ್ರಾ ಮಾಡುವ ಮಿತಿಯನ್ನು ಹೆಚ್ಚಿಸಲಾಗಿದೆ.
ಇದನ್ನೂ ಓದಿ : ಕೋವಿಡ್ 19 : ದೇಶೀಯ ವಿಮಾನಯಾನ ಇನ್ಮುಂದೆ ದುಬಾರಿ..!
ಈ ಬಗ್ಗೆ ತನ್ನ ಅಧಿಕೃತ ಟ್ವೀಟರ್ ಖಾತೆಯ ಮೂಲಕ ತನ್ನ ಗ್ರಾಹಕರಿಗೆ ಮಾಹಿತಿ ನೀಡಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕೋವಿಡ್ ಸೋಂಕಿನ ಸಂದರ್ಭದಲ್ಲಿ ಗ್ರಾಹಕರಿಗೆ ಅನುಕೂಲವಾಗುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಚೆಕ್ ಅಥವಾ ಸ್ಲಿಪ್ ಮೂಲಕ ಇತರೆ ಶಾಖೆಗಳಲ್ಲಿ ಹಣ ವಿಥ್ ಡ್ರಾ ಮಾಡುವುದಕ್ಕೆ ಇದ್ದ ಮಿತಿಯನ್ನು ಹೆಚ್ಚಿಸಲಾಗಿದೆ ಎಂದು ಮಾಹಿತಿ ನೀಡಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಯಾವುದೇ ಗ್ರಾಹಕರು ಯಾವುದೇ ಎಸ್ ಬಿ ಐ ಶಾಖೆಯಲ್ಲಿ ದಿನವೊಂದಕ್ಕೆ ಉಳಿತಾಯ ಖಾತೆಯಿಂದ 25,000 ರೂಪಾಯಿಗಳನ್ನು ವಿಥ್ ಡ್ರಾ ಮಾಡಬಹುದಾಗಿದೆ.
To support our customers in this pandemic, SBI has increased the non-home cash withdrawal limits through cheque and withdrawal form.
#SBIAapkeSaath #StayStrongIndia #CashWithdrawal #Covid19 #BankSafe #StaySafe pic.twitter.com/t4AXY4Rzqh— State Bank of India (@TheOfficialSBI) May 29, 2021
ಇನ್ನು, ಚೆಕ್ ಮೂಲಕ ಹಣ ವಿತ್ ಡ್ರಾ ಮಾಡುವ ಮಿತಿ 1 ಲಕ್ಷ ರೂಪಾಯಿವರೆಗೆ ಇರಲಿದ್ದು, ಥರ್ಡ್ ಪಾರ್ಟಿಗೆ ಚೆಕ್ ಮೂಲಕ ಹಣ ವಿಥ್ ಡ್ರಾ ಮಾಡುವ ಮಿತಿಯನ್ನು 50 ಸಾವಿರ ರೂ.ಗೆ ಹೆಚ್ಚಿಸಲಾಗಿದೆ. ಈ ಹೊಸ ಅಧಿಸೂಚನೆಯ ಪ್ರಕಾರ, ಹೊಸ ನಿಯಮಗಳು ತಕ್ಷಣದಿಂದ ಜಾರಿಗೆ ತರಲಾಗಿದೆ. ಈ ನಿಯಮಗಳು ಸೆಪ್ಟೆಂಬರ್ 30, 2021 ರವರೆಗೆ ಜಾರಿಯಲ್ಲಿರುತ್ತವೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಾಹಿತಿ ನೀಡಿದೆ.
ಇದನ್ನೂ ಓದಿ : ತೆಂಕಿಲ : ಮಹಿಳೆಯೋರ್ವರ ಕರಿಮಣಿ ಸರ ಎಳೆದು ಬೈಕ್ ನಲ್ಲಿ ಪರಾರಿಯಾದ ಅಪರಿಚಿತರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Haldiram ಭುಜಿಯಾವಾಲಾದಲ್ಲಿ ₹235 ಕೋಟಿ ಹೂಡಿಕೆ ಮಾಡಿದ ಭಾರತ್ ವ್ಯಾಲ್ಯು ಫಂಡ್
Gold Rates:ಡಾಲರ್ ಬೆಲೆ ಏರಿಕೆ-18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?
Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….
Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ
Stock Market: ಟ್ರಂಪ್ ಗೆಲುವಿನ ಎಫೆಕ್ಟ್-ಬಾಂಬೆ ಷೇರುಪೇಟೆ ಸೂಚ್ಯಂಕ 1 ಸಾವಿರ ಅಂಕ ಏರಿಕೆ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.