‘ಎಸ್ ಬಿ ಐ ಲೈಫ್ ಪೂರ್ಣ ಸುರಕ್ಷಾ’ : ವಿಶೇಷತೆಗಳೇನು..?
Team Udayavani, Mar 29, 2021, 11:52 AM IST
ನವ ದೆಹಲಿ : ಜೀವ ವಿಮೆ ಇಂದು ಎಲ್ಲರ ಅಗತ್ಯಗಳಲ್ಲಿ ಒಂದು ಭಾಗವಾಗಿದೆ. ಇಂದು ಜೀವ ವಿಮೆಯಂತಹ ಪಾಲಿಸಿಗಳು ಹೆಜ್ಜೆಯೊಂದಕ್ಕೊಂದು ಹುಟ್ಟಿಕೊಂಡಿರುವ ಸಂಸ್ಥೆಗಳು ಸೃಷ್ಟಿಸುತ್ತಿರುವುದರಿಂದ ಯಾವ ಪಾಲಿಸಿ ತೆಗೆದುಕೊಳ್ಳಬೇಕೆಂಬುವುದು ತಿಳಿಯುವುದಿಲ್ಲ, ಇಂತಹ ಸಂದರ್ಭದಲ್ಲಿ ಸಾಕಷ್ಟು ಯೋಚಿಸಿ ಪಾಲಸಿಯನ್ನು ತೆಗೆದುಕೊಳ್ಳಬೇಕು.
ಯಾವುದೇ ಅಹಿತಕರ ಕಾರಣದಿಂದಾಗಿ ನೀವು ಮತ್ತು ನಿಮ್ಮ ಕುಟುಂಬವನ್ನು ಯಾವುದೇ ರೀತಿಯ ಆರ್ಥಿಕ ಸಮಸ್ಯೆಯಿಂದ ಪಾರು ಮಾಡಲು ವಿಶ್ವಾಸಾರ್ಹ ಜೀವ ವಿಮೆಗಳು ಸಹಾಯ ಮಾಡುತ್ತದೆ. ತುರ್ತು ಸದರ್ಭಕ್ಕಾಗಿ ಜೀವ ವಿಮೆ ಪಾಲಿಸಿಯನ್ನು ತೆಗೆದುಕೊಳ್ಳುವುದು ಒಳ್ಳೆಯದು.
ಓದಿ : ವಿಟ್ಲ: ಮದುವೆ ಕಾರ್ಯಕ್ರಮಕ್ಕೆ ಬಂದಿದ್ದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ!
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಜಂಟಿ ಉದ್ಯಮವಾದ ಎಸ್ ಬಿ ಐ ಲೈಫ್ ‘ಎಸ್ ಬಿ ಐ ಲೈಫ್ ಪೂರ್ಣ ಸುರಕ್ಷಾ’ ಎಂಬ ವಿಮಾ ಪಾಲಿಸಿಯನ್ನು ಆರಂಭಿಸಿದೆ. ಈ ಯೋಜನೆಯಲ್ಲಿ, 30 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಪ್ರತಿದಿನ 100 ರೂಪಾಯಿ ಅಥವಾ ಅದಕ್ಕಿಂತ ಕಡಿಮೆ ಹಣವನ್ನು ಪಾವತಿಸುವ ಮೂಲಕ ಅವರಿಗೆ 2.5 ಕೋಟಿ ರೂ. ರಷ್ಟು ಪಡೆದುಕೊಳ್ಳಬಹುದಾಗಿದೆ.
ಈ ಪಾಲಸಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಎಸ್ ಬಿ ಐ ಆರಂಭಿಸಿರುವ ಈ ಯೋಜನೆಯಲ್ಲಿ, ಕೆಲವು ಗಂಭೀರ ಕಾಯಿಲೆಗಳಿಗೆ ಗುರಿಯಾದರೆ ಪ್ರೀಮಿಯಂನಲ್ಲಿ ರಿಯಾಯಿತಿ ಕೂಡ ಸಿಗಲಿದೆ.
ಈ ಯೋಜನೆಯಲ್ಲಿ 36 ಗಂಭೀರ ರೋಗಗಳು ಈ ಪಾಲಸಿ ವ್ಯಾಪ್ತಿಗೆ ಬರುತ್ತವೆ. ಅಷ್ಟೇ ಅಲ್ಲ ಸಂಪೂರ್ಣ ಪಾಲಿಸಿ ಅವಧಿಯಲ್ಲಿ ಪ್ರೀಮಿಯಂ ಸ್ಥಿರವಾಗಿರುತ್ತದೆ, ಅಂದರೆ ಹಣದುಬ್ಬರ ಹೆಚ್ಚಾದಂತೆ ಪ್ರೀಮಿಯಂ ಹೆಚ್ಚಿಸುವ ಬಗ್ಗೆ ನೀವು ಚಿಂತಿಸಬೇಕಾದ ಅವಶ್ಯಕತೆ ಇಲ್ಲ.
ಓದಿ : ನೀರನ್ನು ಯಾವ ಪ್ರಮಾಣದಲ್ಲಿ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು?
ಈ ಪಾಲಸಿಯ ಬಗ್ಗೆ ತಿಳಿಯಬೇಕಾದ ಕೆಲ ಅಂಶಗಳು ಇಂತಿವೆ :
ಈ ಪಾಲಿಸಿಯನ್ನು ಪಡೆಯಲು ಕನಿಷ್ಠ 18 ಮತ್ತು ಗರಿಷ್ಟ 65 ವರ್ಷ ಆದವರು ಈ ಪಾಲಿಸಿಯನ್ನು ತೆಗೆದುಕೊಳ್ಳಬಹುದು.
ಕನಿಷ್ಠ 28 ಮತ್ತು ಗರಿಷ್ಟ 75 ವರ್ಷ ಈ ಪಾಲಿಸಿಯ ಮ್ಯಾಚುರಿಟಿ ವಯಸ್ಸಾಗಿದೆ.
ಕನಿಷ್ಠ 20 ಲಕ್ಷ ಹಾಗೂ ಗರಿಷ್ಟ 2.5 ಕೋಟಿ ರೂ. ಈ ಪಾಲಿಸಿಯ ಬೇಸಿಕ್ ಸ್ಯಾಮ್ ಅಷ್ಯೂರ್ಡ್ ಆಗಿದೆ.
ವಾರ್ಷಿಕ/ಅರ್ಧ ವಾರ್ಷಿಕ/ ತ್ರಿಮಾಸಿಕದಂತಹ ಪ್ರಿಮಿಯಂ ಮೋಡ್ ಈ ಪಾಲಿಸಿಗಿದೆ.
ಮಾಸಿಕ ಪ್ರಿಮಿಯಂ ಮೋಡ್ ನಲ್ಲಿ ಮೊದಲ ಮೂರು ತಿಂಗಳ ಪ್ರಿಮಿಯಂ ಅಡ್ವಾನ್ಸ್ ಪಾವತಿಸಬೇಕಾಗುತ್ತದೆ.
ಇನ್ನು ಈ ಪಾಲಸಿಯ ಅವಧಿ 10, 15, 20, 25 ಹಾಗೂ 30 ವರ್ಷಗಳಾಗಿವೆ.
ಓದಿ : ತಮಿಳು ನಾಡು : ದೇವರು ಖಂಡಿತವಾಗಿ ಶಿಕ್ಷಿಸುತ್ತಾನೆ : ಪಳನಿಸ್ವಾಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.