ಕಡಿಮೆ ಬಡ್ಡಿದರದಲ್ಲಿ ಚಿನ್ನದ ಮೇಲೆ ಸಾಲ ನೀಡುತ್ತಿದೆ ಎಸ್ ಬಿ ಐ..! ವಿಶೇಷತೆಯೇನು..?
Team Udayavani, Mar 10, 2021, 1:57 PM IST
ನವ ದೆಹಲಿ : ಮೇಲಿಂದ ಮೇಲೆ ಹೊಸ ಕೊಡುಗೆ ನೀಡುತ್ತಿರುವ ಎಸ್ ಬಿ ಐ ಮಗದೊಂದು ಕೊಡುಗೆಯನ್ನು ತನ್ನ ಗ್ರಾಹಕರಿಗೆ ನೀಡುತ್ತಿದೆ. ನೀವು ಸ್ವಂತ ವ್ಯವಹಾರ ಆರಂಭಿಸುವ ಬಗ್ಗೆ ಯೋಚನೆಯಲ್ಲಿದ್ದರೆ, ಎಸ್ ಬಿ ಐ ನಿಮಗಾಗಿ ವಿಶೇಷ ಕೊಡುಗೆಯನ್ನು ತಂದಿದೆ.
ಎಸ್ ಬಿ ಐ ತನ್ನ ಎಸ್ ಎಮ್ ಇ ಗೋಲ್ಡ್ ಲೋನ್ ಅನ್ನು ವ್ಯಾಪಾರಿಗಳಿಗೆ ಬಹಳ ಸುಲಭವಾಗಿ ನೀಡುತ್ತಿದೆ. ಈ ಸಾಲದ ವಿಶೇಷವೆಂದರೆ, ಇದರಲ್ಲಿ ಸಾಲಕ್ಕಾಗಿ ಬ್ಯಾಂಕಿಗೆ ಕಚೇರಿಗಳಿಗೆ ಪದೆ ಪದೆ ಸುತ್ತಾಡುವ ಅಗತ್ಯವಿಲ್ಲ.
ಓದಿ : ಅಧಿವೇಶನದಲ್ಲಿ CM ಈ ರೀತಿ ಹೇಳಿರುವುದು ತಪ್ಪು: ಸಾಮಾಜಿಕ ಕಾರ್ಯಕರ್ತ ಮುಲಾಲಿ ಹೇಳಿದ್ದೇನು ?
ತುಂಬಾ ಸರಳವಾಗಿ ಈ ಲೋನ್ ನ್ನು ನೀವು ಪಡೆಯಬಹುದಾಗಿದೆ. ಇದು ಗ್ರಾಹಕ ಸ್ನೇಹಿ ಯೋಜನೆಯೆಂದು ಎಸ್ ಬಿ ಐ ಹೇಳಿಕೊಂಡಿದೆ. ನಿಮ್ಮ ಹತ್ತಿರದ ಎಸ್ ಬಿ ಐ ಶಾಖೆಗೆ ಭೇಟಿ ನೀಡುವ ಮೂಲಕ ಸಾಲದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದಾಗಿದೆ. ತಮ್ಮ ಉದ್ಯಮವನ್ನು ಮತ್ತಷ್ಟು ವೃದ್ಧಿಗೊಳಿಸಿಕೊಳ್ಳಬೇಕು ಎಂದು ಬಯಸುವ ಉದ್ಯಮಿಗಳಿಗೆ ಇದು ಅತ್ಯಂತ ಸೂಕ್ತವಾದ ಯೋಜನೆಯಾಗಿದೆ.
ಎಸ್ ಬಿ ಐ ನ ಚಿನ್ನದ ಮೇಲಿನ ಸಾಲದ ವಿಶೇಷತೆಗಳೇನು..?
ಎಸ್ ಬಿ ಐ ನ ಈ ಚಿನ್ನದ ಮೇಲಿನ ಸಾಲದ ಆಫರ್ ವ್ಯಾಪಾರ ಮಾಡುವುವವರಿಗಾಗಿ ಮಾತ್ರ ನೀಡಲಾಗುತ್ತದೆ. ಆದ್ದರಿಂದ, ಈ ಆಫರ್ ಗೆ ಎಸ್ ಎಮ್ ಇ ಗೋಲ್ಡ್ ಲೋನ್ ಎಂದು ಹೆಸರಿಸಲಾಗಿದ್ದು, ಈ ಆಫರ್ ಅಡಿಯಲ್ಲಿ 1 ಲಕ್ಷದಿಂದ 50 ಲಕ್ಷದವರೆಗಿನ ಸಾಲವನ್ನು ಪಡೆಯಬಹುದಾಗಿದೆ.
ಓದಿ : ಅತ್ಯಾಚಾರ ಪ್ರಕರಣ : ಆರೋಪಿಗೆ ಜೀವಾವಧಿ ಶಿಕ್ಷೆ..!
ಚಿನ್ನದ ಸಾಲದ ಮೇಲೆ ಆಕರ್ಷಕ ಬಡ್ಡಿದರ..!
ಎಸ್ ಬಿ ಐ ನ ಈ ವಿಶೇಷ ಚಿನ್ನದ ಮೇಲಿನ ಸಾಲವು ವಾರ್ಷಿಕ 7.25 ಶೇಕಡಾ ಬಡ್ಡಿದರದಲ್ಲಿ ಲಭ್ಯವಿದೆ. ಅಂದರೆ ಒಂದು ವರ್ಷಕ್ಕೆ 1 ಲಕ್ಷ ರೂಪಾಯಿಗಳ ಚಿನ್ನದ ಸಾಲವನ್ನು ತೆಗೆದುಕೊಂಡರೆ, ಇದಕ್ಕಾಗಿ ನೀವು ಕೇವಲ 7,250 ರೂಪಾಯಿಗಳನ್ನು ಬಡ್ಡಿಯಾಗಿ ಪಾವತಿಸಬೇಕಾಗುತ್ತದೆ. ಈ ಸಾಲದ ಮೇಲಿನ ಬಡ್ಡಿ ದರವು ಅತ್ಯಂತ ಅಗ್ಗವಾಗಿದೆ.
ಬ್ಯಾಲೆನ್ಸ್ ಶೀಟ್ ಇಲ್ಲದೆ ಚಿನ್ನದ ಮೇಲೆ ಸಾಲ ಪಡೆದುಕೊಳ್ಳಬಹುದು..!
ಸಾಮಾನ್ಯವಾಗಿ, ವ್ಯಾಪಾರಸ್ಥರು ಯಾವುದೇ ರೀತಿಯ ಸಾಲವನ್ನು ಪಡೆದುಕೊಳ್ಳುವ ವೇಳೆ, ಬ್ಯಾಲೆನ್ಸ್ ಶೀಟ್ ತೋರಿಸಬೇಕಾಗುತ್ತದೆ. ಆದರೆ ಎಸ್‌ಬಿ ಐನ ಈ ವಿಶೇಷ ಕೊಡುಗೆಯಲ್ಲಿ ಬ್ಯಾಲೆನ್ಸ್ ಶೀಟ್ ಅಗತ್ಯವಿಲ್ಲ. ಚಿನ್ನವನ್ನು ಅಡವಿಡುವ ಮೂಲಕ, ಸಾಲ ತೆಗೆದುಕೊಳ್ಳಬಹುದು.
ಎಸ್ ಬಿ ಐ ತನ್ನ ಅಧಿಕೃತ ಟ್ವೀಟರ್ ಖಾತೆಯಲ್ಲಿ ಚಿನ್ನದ ಮೇಲಿನ ಸಾಲದ ಬಗ್ಗೆ ಮಾಹಿತಿ ನೀಡಿದೆ. ತಮ್ಮ ಹತ್ತಿರದ ಶಾಖೆಗೆ ಭೇಟಿ ನೀಡುವ ಮೂಲಕ ಸಾಲ ಸೌಲಭ್ಯದ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಬಹುದು ಎಂದು ಎಸ್ ಬಿ ಐ ತಿಳಿಸಿದೆ.
ಓದಿ : ಬಿಜೆಪಿ ಸಂಸದ ತಿರಥ್ ಸಿಂಗ್ ರಾವತ್ ಗೆ ಉತ್ತರಾಖಂಡ್ ಮುಖ್ಯಮಂತ್ರಿ ಪಟ್ಟ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Haldiram ಭುಜಿಯಾವಾಲಾದಲ್ಲಿ ₹235 ಕೋಟಿ ಹೂಡಿಕೆ ಮಾಡಿದ ಭಾರತ್ ವ್ಯಾಲ್ಯು ಫಂಡ್
Gold Rates:ಡಾಲರ್ ಬೆಲೆ ಏರಿಕೆ-18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?
Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….
Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ
Stock Market: ಟ್ರಂಪ್ ಗೆಲುವಿನ ಎಫೆಕ್ಟ್-ಬಾಂಬೆ ಷೇರುಪೇಟೆ ಸೂಚ್ಯಂಕ 1 ಸಾವಿರ ಅಂಕ ಏರಿಕೆ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.