ಕೋವಿಡ್ ಸೋಂಕಿನ 2ನೇ ಅಲೆಯಿಂದಾಗಿ 2 ಲಕ್ಷ ಕೋಟಿ ರೂ. ಉತ್ಪಾದನಾ ನಷ್ಟ : ಆರ್ ಬಿ ಐ
Team Udayavani, Jun 18, 2021, 6:22 PM IST
ನವ ದೆಹಲಿ : ಕೋವಿಡ್ ಸೋಂಕಿನ ಎರಡನೇ ಅಲೆಯಿಂದ 2 ಲಕ್ಷ ಕೋಟಿ ರೂ. ಉತ್ಪಾದನಾ ನಷ್ಟವಾಗಿದೆ ಎಂದು ಭಾರತೀಯ ರಿಸರ್ವ ಬ್ಯಾಂಕ್ ಮಾಹಿತಿ ನೀಡಿದೆ.
ಕಳೆದ ಒಂದುವರೆ ವರ್ಷದಿಂದ ಕೋವಿಡ್ ಸೋಂಕು ದೇಶದ ಎಲ್ಲಾ ಉದ್ಯಮ ಕ್ಷೇತ್ರಗಳ ಮೇಲೆ ಗಧಾ ಪ್ರಹಾರ ಮಾಡಿದೆ. ಉದ್ಯಮ ಕ್ಷೇತ್ರಗಳು ಸ್ವಲ್ಪ ಚೇತರಿಕೆ ಕಾಣಿಸಿಕೊಳ್ಳುತ್ತಿದೆ ಎನ್ನುವಷ್ಟರಲ್ಲಿ ಮತ್ತೆ ಸೋಂಕಿನ ಎರಡನೇ ಅಲೆಯ ಕಾರಣದಿಂದಾಗಿ ಎಲ್ಲವೂ ಅಡಿಮೇಲಾಗಿದೆ ಎಂಬುವುದಕ್ಕೆ ಆರ್ ಬಿ ಐ ಹೇಳಿದ ಈ ಮಾಹಿತಿ ಸಾಕ್ಷಿ.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ವರ್ಷದಲ್ಲಿ 2 ಲಕ್ಷ ಕೋಟಿ ರೂಪಾಯಿ ನಷ್ಟವನ್ನು ಆರ್ ಬಿ ಐ(ರೀಸರ್ವ್ ಬ್ಯಾಂಕ್ ಆಫ್ ಇಂಡಿಯಾ) ಅಂದಾಜಿಸಿದೆ.
ಇದನ್ನೂ ಓದಿ : ಚಿಕ್ಕಮಗಳೂರು : ಭಾರೀ ಮಳೆಗೆ ಕುಸಿದ ಮನೆ : ಪ್ರಾಣಾಪಾಯದಿಂದ ಅಜ್ಜಿ ಪಾರು
ಮಾಸಿಕ ಬುಲೇಟಿನ್ ನಲ್ಲಿ ಆರ್ ಬಿ ಐ, ಕೋವಿಡ್ ಸೋಂಕಿನ ಎರಡನೇ ಅಲೆಯಿಂದಾಗಿ ಭಾರತದ ಆರ್ಥಿಕತೆ ಸೆಣಸಾಡುವಂತಾಗಿದೆ. ಸೋಂಕಿನ ಹಿನ್ನೆಲೆಯಲ್ಲಿ ಹೇರಲಾದ ನಿರ್ಬಂಧಗಳಿಂದಾಗಿ ನಗರಗಳನ್ನು ಒಳಗೊಂಡು ಗ್ರಾಮೀಣ ಪ್ರದೇಶಗಳಲ್ಲೂ ಬೇಡಿಕೆಗಳು ಇಳಿಮುಖ ಕಂಡಿವೆ ಎಂದಿದೆ.
ಆರ್ಥಿಕ ವರ್ಷ 2021ರ ಮೊದಲ ತ್ರೈಮಾಸಿಕದಲ್ಲಿ ಶೇಕಡಾ 24ರಷ್ಟು ಅಂದರೆ, ರಾಷ್ಟ್ರೀಯ ಉತ್ಪಾದನೆಯಲ್ಲಿ 11 ಲಕ್ಷ ಕೋಟಿ ರೂಪಾಯಿ ನಷ್ಟವುಂಟಾಗುವ ಸಾಧ್ಯತೆಯಿದೆ ಎಂದು ಆರ್ ಬಿ ಐ ಅಂದಾಜಿಸಲಾಗಿದ್ದು, ಆರ್ಥಿಕ ತಜ್ಞರ ಅಂದಾಜಿಗಿಂತ 5-6 ಲಕ್ಷ ಕಡಿಮೆಯಾಗಿದೆ.
ಎಸ್ ಬಿಐ ರಿಸರ್ಚ್ ಪ್ರಸಕ್ತ ತ್ರೈಮಾಸಿಕದ ಜಿಡಿಪಿ ನಷ್ಟವನ್ನು 6 ಲಕ್ಷ ಕೋಟಿ ರೂ ಎಂದು ಪರಿಗಣಿಸಿದರೆ, ಬಾರ್ಕ್ಲೇಸ್ ಇದನ್ನು 5.4 ಲಕ್ಷ ಕೋಟಿ ರೂ ಎಂದು ಅಂದಾಜಿಸಿದೆ.
ದೇಶಿಯ ಮಟ್ಟದ ಬೇಡಿಕೆಯಲ್ಲಿ ಕೋವಿಡ್ ಪಿಡುಗಿನಿಂದ ಭಾರಿ ಪ್ರಮಾಣದಲ್ಲಿ ಹೊಡೆತ ಬಿದ್ದರೂ, ಕೋವಿಡ್ ನಿರ್ಬಂಧಗಳ ನಡುವೆ ಕೈಗಾರಿಕೆ ಉತ್ಪಾದನೆ ಮತ್ತು ರಫ್ತು ಹೆಚ್ಚಾಗಿದೆ ಎಂದು ಆರ್ ಬಿ ಐ ಮಾಹಿತಿ ನೀಡಿದೆ.
ಇದನ್ನೂ ಓದಿ : ನಕಲಿ ಕೋವಿಡ್ 19 ಲಸಿಕೆ ಶಿಬಿರದ ಹಗರಣ ಪ್ರಕರಣ; ನಾಲ್ವರನ್ನು ಬಂಧಿಸಿದ ಮುಂಬೈ ಪೊಲೀಸ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.