ಮುಂಬಯಿ ಷೇರುಪೇಟೆ: ಸಪ್ತ ದಿನಗಳ ಏರಿಕೆಗೆ ಬ್ರೇಕ್
ಬಿಎಸ್‌ಇ ಸೂಚ್ಯಂಕ 143 ಪಾಯಿಂಟ್ಸ್ ಇಳಿಕೆ
Team Udayavani, Dec 11, 2020, 5:25 AM IST
ಮುಂಬಯಿ: ಸತತ ಏಳು ದಿನಗಳಿಂದ ಏರಿಕೆಯ ಗತಿಯಲ್ಲಿದ್ದ ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ (ಬಿಎಸ್‌ಇ)ಸೂಚ್ಯಂಕ ಗುರುವಾರ 144 ಪಾಯಿಂಟ್ಸ್‌ಗಳಷ್ಟು ಕುಸಿದಿದೆ. ನಿಫ್ಟಿ ಸೂಚ್ಯಂಕ ಕೂಡಾ 50.80 ಪಾಯಿಂಟ್ಸ್‌ಗಳಷ್ಟು ಇಳಿಕೆಯಾಗಿದೆ.
ಅಮೆರಿಕದ ಡಾಲರ್ ಎದುರು ರೂಪಾಯಿ ಕುಸಿತ, ಜಗತ್ತಿನ ಇತರ ಮಾರುಕಟ್ಟೆಗಳಲ್ಲಿ ವಹಿವಾಟುಗಳಲ್ಲಿ ಚೇತರಿಕೆ ಕಾಣದೇ ಇದ್ದದ್ದು ಬಾಂಬೆ ಷೇರು ಪೇಟೆಯ ಮೇಲೆ ಪ್ರತಿಕೂಲ ಪ್ರಭಾವ ಬೀರಿತು. ಬೆಳಗ್ಗಿನ ವೇಳೆಯ ಲ್ಲಿಯೇ ಬಿಎಸ್‌ಇ ಸೂಚ್ಯಂಕ ನಿರಾಶಾದಾಯಕವಾಗಿಯೇ ವಹಿವಾಟು ಆರಂಭಿಸಿತು. ದಿನಾಂತ್ಯಕ್ಕೆ 45,959.88 ಪಾಯಿಂಟ್‌ಗಳಷ್ಟು ಅಂದರೆ, 143.62 ರಷ್ಟು ಇಳಿಕೆಯಾಗಿದೆ. ನಿಫ್ಟಿ ಸ್ಯೂಚ್ಯಂಕ ಕೂಡ ಸತತ 7 ದಿನಗಳಿಂದ ಏರುಗತಿಯಲ್ಲಿ ಇದ್ದದ್ದು 50.80ರಷ್ಟು ಕುಸಿಯುವ ಮೂಲಕ 13, 478.30ರಲ್ಲಿ ಮುಕ್ತಾಯವಾಯಿತು.
ಅಲ್ಟ್ರಾ ಟೆಕ್ ಸಿಮೆಂಟ್ ಬಿಎಸ್‌ಇ ನಲ್ಲಿ ಅತ್ಯಂತ ಹೆಚ್ಚು ನಷ್ಟಕ್ಕೆ ಒಳಗಾಗಿದೆ. ಭಾರತೀಯ ಸ್ಪರ್ಧಾತ್ಮಕ ಆಯೋಗ (ಸಿಸಿಐ) ಸಿಮೆಂಟ್ ಕಂಪೆನಿಗಳ ವಿರುದ್ಧ ತನಿಖೆಗೆ ಸೂಚಿಸಿದ್ದು, ಆ ಕ್ಷೇತ್ರದ ಷೇರು ಗಳಿಗೆ ಕಡಿಮೆ ಬೇಡಿಕೆ ಉಂಟಾಗಲು ಕಾರಣವಾಯಿತು. ಮಹೀಂದ್ರಾ ಆ್ಯಂಡ್ ಮಹೀಂದ್ರಾ, ಇಂಡಸ್‌ಇಂಡ್ ಬ್ಯಾಂಕ್, ಆ್ಯಕ್ಸಿಸ್ ಬ್ಯಾಂಕ್, ಬಜಾಜ್ ಫೈನಾನ್ಸ್, ಎನ್‌ಟಿಪಿಸಿ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಶೇ.2.50ರಷ್ಟು ಕುಸಿತ ಕಂಡವು. ನೆಸ್ಲೆ ಇಂಡಿಯಾ ಶೇ.4.17, ಐಟಿಸಿ ಶೇ.3.58, ಎಚ್‌ಯುಎಲ್ ಶೇ. 2.51ರಷ್ಟು ಚೇತರಿಕೆ ಕಂಡವು. ಕೊಟಕ್ ಬ್ಯಾಂಕ್, ಎಲ್ ಆ್ಯಂಡ್ ಟಿ, ಟಾಟಾ ಸ್ಟೀಲ್ ಮತ್ತು ಒಎನ್‌ಜಿಸಿ ಷೇರುಗಳೂ ಶೇ.1.13ರ ವರೆಗೆ ಏರಿಕೆ ಕಂಡವು. ಹಾಂಕಾಂಗ್, ಸಿಯೋಲ್ ಮತ್ತು ಟೋಕಿಯೊ ಎಕ್ Õ ಚೇಂಜ್‌ಗಳಲ್ಲಿಯೂ ವಹಿವಾಟು ಚೇತೋಹಾರಿಯಾಗಿರಲಿಲ್ಲ.
ಇಳಿಕೆಗೆ ಕಾರಣಗಳೇನು?
ಏಷ್ಯಾ, ಜಗತ್ತಿನ ಇತರ ಷೇರು ಮಾರುಕಟ್ಟೆಗಳಲ್ಲಿಯೂ ನಿರಾಶಾದಾಯಕ ವಹಿವಾಟು.
ಅಮೆರಿಕದ ಷೇರು ಮಾರುಕಟ್ಟೆಗಳಲ್ಲಿ ಷೇರುಗಳ ಮಾರಾಟ ಪ್ರಕ್ರಿಯೆ. ಆ ದೇಶದಲ್ಲಿ ಉಂಟಾಗಬಹುದಾದ ಆರ್ಥಿಕ ಶಟ್‌ಡೌನ್ ತಪ್ಪಿಸಲು ನಡೆದಿರುವ ಮಾತುಕತೆ 9 ಪೈಸೆ ಕುಸಿತ
ಮೂರು ದಿನಗಳಿಂದ ಅಮೆರಿಕದ ಡಾಲರ್ ಎದುರು ಏರಿಕೆ ಹಂತದಲ್ಲಿದ್ದ ರೂಪಾಯಿ 9 ಪೈಸೆ ಕುಸಿದಿದೆ. ದಿನದ ಮುಕ್ತಾಯದಲ್ಲಿ ಡಾಲರ್ ಎದುರು 73. 66 ರೂ. ಆಗಿತ್ತು. ದಿನದ ಆರಂಭದಲ್ಲಿ 73.68ರಲ್ಲಿ ಶುರುವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್ ಸಿಇಒ ಸುಂದರ್ ಪಿಚೈ
RBI:ಸಾಲ ಮನ್ನಾ ಸೇರಿ ಉಚಿತ ಕೊಡುಗೆ ಆತಂಕಕಾರಿ- ಆರ್ಬಿಐ
Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು
Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ
ರಾಷ್ಟ್ರಾದ್ಯಂತ ಶೈಕ್ಷಣಿಕ ಪಠ್ಯಗಳ ಪೂರೈಕೆಗೆ ಫ್ಲಿಪ್ ಕಾರ್ಟ್ ಮತ್ತು NCERT ಒಪ್ಪಂದ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.