ದಾಖಲೆ ಮುಂದುವರಿಸಿದ ಸೆನ್ಸೆಕ್ಸ್, ನಿಫ್ಟಿ
ಎಚ್ಡಿಎಫ್ಸಿ, ಒಎನ್ಜಿಸಿಗೆ ಲಾಭ; ಐಸಿಐಸಿಐ, ಎನ್ಟಿಪಿಸಿಗೆ ನಷ್ಟ
Team Udayavani, Dec 17, 2020, 6:00 AM IST
ಮುಂಬಯಿ: ಸತತ ನಾಲ್ಕನೇ ದಿನವೂ ಷೇರುಪೇಟೆಯ ದಾಖಲೆಯ ಓಟ ಮುಂದುವರಿದಿದೆ. ಜಾಗತಿಕ ಮಾರುಕಟ್ಟೆಗಳಲ್ಲಿನ ಸಕಾರಾತ್ಮಕ ಬೆಳವಣಿಗೆಗಳು ಹಾಗೂ ದೇಶದೊಳಗಿನ ಆರ್ಥಿಕ ಸುಧಾರಣೆಗಳು ಷೇರುಪೇಟೆಯಲ್ಲಿ ಹೊಸ ಉತ್ಸಾಹ ಮೂಡಿಸಿದೆ.
ಬುಧವಾರವೂ ಹೂಡಿಕೆದಾರರು ಷೇರುಗಳ ಖರೀದಿಯಲ್ಲಿ ಆಸಕ್ತಿ ವಹಿಸಿದ ಪರಿಣಾಮ, ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ 403.29 ಅಂಕಗಳ ಏರಿಕೆ ದಾಖಲಿಸಿ, 46,666.46ರಲ್ಲಿ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 114.85 ಅಂಕ ಏರಿಕೆಯಾಗಿ 13,682.70ರಲ್ಲಿ ಅಂತ್ಯಗೊಂಡಿದೆ.
ಬಿಎಸ್ಇ ಮತ್ತು ನಿಫ್ಟಿ ಎರಡೂ ಕೂಡ ಮಧ್ಯಾಂತರ ವಹಿವಾಟಿನ ಅವಧಿಯಲ್ಲಿ ಕ್ರಮವಾಗಿ 46,704.97 ಮತ್ತು 13,692.35ಕ್ಕೆ ತಲುಪುವ ಮೂಲಕ ಸಾರ್ವಕಾಲಿಕ ಏರಿಕೆ ದಾಖಲಿಸಿದವು.
ಎಚ್ಡಿಎಫ್ಸಿ, ಒಎನ್ಜಿಸಿ, ಭಾರ್ತಿ ಏರ್ಟೆಲ್, ಏಷ್ಯನ್ ಪೈಂಟ್ಸ್, ಟೈಟಾನ್, ಟಿಸಿಎಸ್ ಮತ್ತು ಮಹೀಂದ್ರಾ ಆ್ಯಂಡ್ ಮಹೀಂದ್ರಾ ಕಂಪನಿಗಳ ಷೇರುಗಳು ಲಾಭ ಗಳಿಸಿದವು. ಇನ್ನೊಂದೆಡೆ, ಐಸಿಐಸಿಐ ಬ್ಯಾಂಕ್, ಇಂಡಸ್ಇಂಡ್ ಬ್ಯಾಂಕ್, ಎನ್ಟಿಪಿಸಿ, ಅಲ್ಟ್ರಾಟೆಕ್ ಸಿಮೆಂಟ್, ಟೆಕ್ ಮಹೀಂದ್ರಾ ಮತ್ತು ಎಚ್ಸಿಎಲ್ ಟೆಕ್ ಭಾರೀ ನಷ್ಟ ಅನುಭವಿಸಿದವು.
ಐರೋಪ್ಯದಲ್ಲೂ ಏರಿಕೆ: ಬ್ರೆಕ್ಸಿಟ್ ವ್ಯಾಪಾರ ಒಪ್ಪಂದ, ಕೊರೊನಾ ಲಸಿಕೆಯ ವಿತರಣೆ ನಿರೀಕ್ಷೆಗಳು ಐರೋಪ್ಯ ಷೇರು ಮಾರುಕಟ್ಟೆಯನ್ನು 10 ತಿಂಗಳಲ್ಲೇ ಅತ್ಯಧಿಕ ಏರಿಕೆ ಕಾಣುವಂತೆ ಮಾಡಿದವು.
ರೂಪಾಯಿ ಚೇತರಿಕೆ: ಇದೇ ವೇಳೆ, ಡಾಲರ್ ಎದುರು ರೂಪಾಯಿ ಮೌಲ್ಯ ಬುಧವಾರ 5 ಪೈಸೆ ಏರಿಕೆಯಾಗಿದ್ದು, 73.58ಕ್ಕೇರಿಕೆಯಾಗಿದೆ. ವಿದೇಶಿ ಸಾಂಸ್ಥಿಕ ಹೂಡಿಕೆಯು ಹೆಚ್ಚುತ್ತಿರುವುದು ಹಾಗೂ ದೇಶೀಯ ಮಾರುಕಟ್ಟೆಯಲ್ಲಿನ ಚೇತರಿಕೆಯು ರೂಪಾಯಿಗೆ ಬಲ ನೀಡಿದೆ.
ನೇರ ತೆರಿಗೆ ಸಂಗ್ರಹ ಶೇ.17.6 ಇಳಿಕೆ
ಪ್ರಸಕ್ತ ಹಣಕಾಸು ವರ್ಷದಲ್ಲಿ ಮುಂಗಡ ತೆರಿಗೆ ಸೇರಿದಂತೆ ನೇರ ತೆರಿಗೆ ಸಂಗ್ರಹವು ಶೇ.17.6ರಷ್ಟು ಇಳಿಕೆಯಾಗಿದೆ. ಡಿ.15ರವರೆಗೆ 4.95 ಲಕ್ಷ ಕೋಟಿ ರೂ. ನೇರ ತೆರಿಗೆ ಸಂಗ್ರಹವಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ ಇದು 6.01 ಲಕ್ಷ ಕೋಟಿ ರೂ. ಆಗಿತ್ತು. ಇದು ಆರಂಭಿಕ ಮಾಹಿತಿಯಾಗಿದ್ದು, ಬ್ಯಾಂಕುಗಳಿಂದ ದತ್ತಾಂಶಗಳು ಬಂದ ಬಳಿಕ ಈ ಸಂಖ್ಯೆಯಲ್ಲಿ ಬದಲಾವಣೆ ಆಗಲಿದೆ ಎಂದು ಮೂಲಗಳು ತಿಳಿಸಿವೆ. ಡಿ.15ರವರೆಗೆ 2.26 ಲಕ್ಷ ಕೋಟಿ ರೂ. ಕಾರ್ಪೊರೇಟ್ ತೆರಿಗೆ ಸಂಗ್ರಹವಾಗಿದ್ದರೆ, ವೈಯಕ್ತಿಕ ಆದಾಯ ತೆರಿಗೆಯ ರೂಪದಲ್ಲಿ 2.57 ಲಕ್ಷ ಕೋಟಿ ರೂ. ಸಂಗ್ರಹವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
GST: ಖರೀದಿ, ಮಾರಾಟ ದರದ ವ್ಯತ್ಯಾಸಕ್ಕಷ್ಟೇ 18% ಜಿಎಸ್ಟಿ
Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್ ಸಿಇಒ ಸುಂದರ್ ಪಿಚೈ
RBI:ಸಾಲ ಮನ್ನಾ ಸೇರಿ ಉಚಿತ ಕೊಡುಗೆ ಆತಂಕಕಾರಿ- ಆರ್ಬಿಐ
Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು
Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
MT Vasudevan Nair: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ
Goa: ಕ್ಯಾಲಂಗುಟ್ ಬೀಚ್ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.