2021-ಕೇಂದ್ರ ಬಜೆಟ್ ಮಂಡನೆ ಹಿನ್ನೆಲೆ ಮುಂಬೈ ಷೇರುಪೇಟೆ ಸೆನ್ಸೆಕ್ಸ್ 861.84 ಅಂಕ ಏರಿಕೆ
ಎಚ್ ಡಿಎಫ್ ಸಿ, ಒಎನ್ ಜಿಸಿ, ಟೈಟಾನ್ ಮತ್ತು ಎಚ್ ಡಿಎಫ್ ಸಿ ಸೇರಿದಂತೆ ಪ್ರಮುಖ ಷೇರುಗಳು ಹೆಚ್ಚಿನ ಲಾಭಗಳಿಸಿವೆ.
Team Udayavani, Feb 1, 2021, 10:33 AM IST
ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2021-22ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ(ಫೆ.1, 2021) ಮುಂಬೈ ಷೇರುಪೇಟೆ ವಹಿವಾಟು ಭರ್ಜರಿ ಏರಿಕೆಯೊಂದಿಗೆ ಆರಂಭಗೊಂಡಿದೆ.
ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 861.84 ಅಂಕಗಳ ಏರಿಕೆಯೊಂದಿಗೆ 47, 145.24 ಅಂಕಗಳ ವಹಿವಾಟು ನಡೆಸಿದೆ. ನಿಫ್ಟಿ ಕೂಡಾ 246.55 ಅಂಕಗಳ ಹೆಚ್ಚಳದೊಂದಿಗೆ 13,881.15ರ ಗಡಿ ತಲುಪಿದೆ.
ಷೇರುಸೂಚ್ಯಂಕದ ಚಾರ್ಟ್ ಪ್ರಕಾರ, ಇಂಡಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಎಚ್ ಡಿಎಫ್ ಸಿ, ಒಎನ್ ಜಿಸಿ, ಟೈಟಾನ್ ಮತ್ತು ಎಚ್ ಡಿಎಫ್ ಸಿ ಸೇರಿದಂತೆ ಪ್ರಮುಖ ಷೇರುಗಳು ಹೆಚ್ಚಿನ ಲಾಭಗಳಿಸಿವೆ.
ಶುಕ್ರವಾರದ ಮುಂಬೈ ಷೇರುಪೇಟೆಯ ಸಂವೇದಿ ಸೂಚ್ಯಂಕ 588.59 ಅಂಕಗಳೊಂದಿಗೆ ಕುಸಿತ ಕಂಡು 46,285.77 ಅಂಕಗಳೊಂದಿಗೆ ವಹಿವಾಟು ಅಂತ್ಯಗೊಂಡಿತ್ತು. ನಿಫ್ಟಿ 182.95 ಅಂಕಗಳೊಂದಿಗೆ ಕುಸಿತದೊಂದಿಗೆ 13, 634.60 ಅಂಕಗಳ ಗಡಿ ತಲುಪಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.