ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 600 ಅಂಕ ಕುಸಿತ, 14,000 ಗಡಿಗೆ ಕುಸಿದ ನಿಫ್ಟಿ
50,792.08 ಅಂಕಗಳೊಂದಿಗೆ ವಹಿವಾಟು ಮುಕ್ತಾಯಗೊಳಿಸಿತ್ತು.
Team Udayavani, Mar 15, 2021, 11:18 AM IST
ಮುಂಬೈ:ವಿದೇಶಿ ಹಣದ ಹೊರಹರಿವಿನ ನಡುವೆ ಹಣಕಾಸು ಷೇರುಗಳ ವಹಿವಾಟಿನಲ್ಲಿ ನಷ್ಟವುಂಟಾದ ಪರಿಣಾಮ ಸೋಮವಾರ(ಮಾರ್ಚ್ 15) ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ ಬರೋಬ್ಬರಿ 600 ಅಂಕಗಳಷ್ಟು ಕುಸಿತ ಕಂಡಿದೆ.
ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ ಆರಂಭಿಕ ಹಂತದಲ್ಲಿ 630.51 ಅಂಕ ಕುಸಿತ ಕಂಡಿದ್ದು, 50,161.57 ಅಂಕಗಳ ವಹಿವಾಟು ನಡೆಸಿದೆ. ಎನ್ ಎಸ್ ಇ ನಿಫ್ಟಿ ಕೂಡಾ 184.15 ಅಂಕಗಳಷ್ಟು ಕುಸಿತ ಕಂಡಿದ್ದು, 14,846.80ರ ಗಡಿಗೆ ಕುಸಿದಿದೆ.
ಸೆನ್ಸೆಕ್ಸ್ ಸೂಚ್ಯಂಕದ ಕುಸಿತದಿಂದ ಎಸ್ ಬಿಐ, ಮಹೀಂದ್ರ ಆ್ಯಂಡ್ ಮಹೀಂದ್ರ, ಡಾ.ರೆಡ್ಡೀಸ್ ಲ್ಯಾಬ್, ಬಜಾಜ್ ಆಟೋ, ಆಕ್ಸಿಸ್ ಬ್ಯಾಂಕ್, ಬಜಾಜ್ ಫೈನಾನ್ಸ್ ಮತ್ತು ಕೋಟಕ್ ಬ್ಯಾಂಕ್ ಷೇರುಗಳು ನಷ್ಟ ಕಂಡಿದೆ.
ಏತನ್ಮಧ್ಯೆ ಟೆಕ್ ಮಹೀಂದ್ರ ಮತ್ತು ಪವರ್ ಗ್ರಿಡ್ ಷೇರುಗಳು ಲಾಭ ಗಳಿಸಿವೆ. ಶುಕ್ರವಾರದ(ಮಾರ್ಚ್ 13) ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ 487.43 ಅಂಕ ಏರಿಕೆ ಕಂಡಿದ್ದು, 50,792.08 ಅಂಕಗಳೊಂದಿಗೆ ವಹಿವಾಟು ಮುಕ್ತಾಯಗೊಳಿಸಿತ್ತು. ನಿಫ್ಟಿ 143.85 ಅಂಕ ಏರಿಕೆಯಾಗಿದ್ದು, 15,030.95ರ ಗಡಿ ತಲುಪಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ
ರಾಷ್ಟ್ರಾದ್ಯಂತ ಶೈಕ್ಷಣಿಕ ಪಠ್ಯಗಳ ಪೂರೈಕೆಗೆ ಫ್ಲಿಪ್ ಕಾರ್ಟ್ ಮತ್ತು NCERT ಒಪ್ಪಂದ
Stock Market: ಷೇರುಪೇಟೆ ಸೂಚ್ಯಂಕ 400ಕ್ಕೂ ಅಧಿಕ ಅಂಕ ಕುಸಿತ, ನಿಫ್ಟಿಯೂ ಇಳಿಕೆ
Nestle: ಹೊಸ ವರ್ಷಕ್ಕೆ ಮ್ಯಾಗಿ ನೂಡಲ್ಸ್, ಕಿಟ್ಕ್ಯಾಟ್ ಚಾಕ್ಲೆಟ್ ಬೆಲೆ ಏರಿಕೆ?
‘DigiLocker’; ಕ್ಲೇಮ್ ಮಾಡದ ಹೂಡಿಕೆಗೆ ಪರಿಹಾರ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.