ಮುರಿದುಬಿದ್ದ ಸ್ನ್ಯಾಪ್ ಡೀಲ್, ಫ್ಲಿಪ್ ಕಾರ್ಟ್ ವಿಲೀನ ಮಾತುಕತೆ
Team Udayavani, Jul 31, 2017, 5:34 PM IST
ನವದೆಹಲಿ: ತಮ್ಮ ಪ್ರತಿಸ್ಪರ್ಧಿ ಫ್ಲಿಪ್ ಕಾರ್ಟ್ ಜತೆಗಿನ ವಿಲೀನ ಮಾತುಕತೆ ಮುರಿದು ಬಿದ್ದಿರುವುದಾಗಿ ಭಾರತೀಯ ಇ ವಹಿವಾಟಿನ ದಿಗ್ಗಜ ಸಂಸ್ಥೆ ಗುರ್ಗಾಂವ್ ಮೂಲದ ಸ್ನ್ಪಾಪ್ ಡೀಲ್ ತಿಳಿಸಿದೆ. ತಮ್ಮ ಸಂಸ್ಥೆ ಸ್ವತಂತ್ರವಾಗಿಯೇ ವ್ಯವಹಾರ ನಡೆಸಲಿದೆ ಎಂದು ಹೇಳಿದೆ.
ವಿಲೀನ ಪ್ರಕ್ರಿಯೆಗಾಗಿ ಸ್ನ್ಯಾಪ್ ಡೀಲ್ ಕಳೆದ ಕೆಲವು ತಿಂಗಳಿಂದ ಮಾತುಕತೆ ನಡೆಸುತ್ತಿತ್ತು. ಹಲವಾರು ಆಯ್ಕೆಗಳನ್ನು ನೀಡಲಾಗಿತ್ತು. ಆದರೆ ಇದೀಗ ನಮ್ಮ ಸಂಸ್ಥೆ ಸ್ವತಂತ್ರವಾಗಿ ವಹಿವಾಟು ನಡೆಸಲು ನಿರ್ಧರಿಸಿದೆ. ಅಲ್ಲದೇ ಫ್ಲಿಪ್ ಕಾರ್ಟ್ ಜತೆಗಿನ ವಿಲೀನ ಪ್ರಕ್ರಿಯೆಯನ್ನು ರದ್ದುಗೊಳಿಸಲಾಗಿದೆ ಎಂದು ಸ್ನ್ಯಾಪ್ ಡೀಲ್ ವಕ್ತಾರ ಪತ್ರಿಕಾ ಪ್ರಕಟಣೆಯಲ್ಲಿ ಫ್ಲಿಪ್ ಕಾರ್ಟ್ ಹೆಸರನ್ನು ಉಲ್ಲೇಖಿಸಿದೆ ತಿಳಿಸಿದ್ದಾರೆ.
900, 950 ಮಿಲಿಯನ್ ಡಾಲರ್ ಮೊತ್ತಕ್ಕೆ ಸ್ನ್ಯಾಪ್ ಡೀಲ್ ಇ ವಾಣಿಜ್ಯ ಮಾರುಕಟ್ಟೆಯನ್ನು ಫ್ಲಿಪ್ ಕಾರ್ಟ್ ಗೆ ಮಾರಾಟ ಮಾಡಲು ಮಾತುಕತೆ ನಡೆಸಿತ್ತು. ಸ್ನ್ಯಾಪ್ ಡೀಲ್ ನ ಡಿಜಿಟಲ್ ಪಾವತಿ ವ್ಯವಸ್ಥೆಯಾದ ಮೊಬೈಲ್ ಪೇಮೆಂಟ್ಸ್ ವ್ಯಾಲೆಟ್ ಪ್ರೊವೈಡರ್ ಫ್ರೀಚಾರ್ಜ್ ಅನ್ನು 385 ಕೋಟಿ ಮೊತ್ತಕ್ಕೆ ಆಕ್ಸಿಸ್ ಬ್ಯಾಂಕ್ ಗೆ ಮಾರಾಟ ಮಾಡಲಾಗುತ್ತಿದೆ ಎಂದು ಸ್ನ್ಯಾಪ್ ಡೀಲ್ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jio domain ಗಲಾಟೆ ನಡುವೆಯೇ “ಜಿಯೋಸ್ಟಾರ್’ ಹೊಸ ವೆಬ್ಸೈಟ್ ಪ್ರತ್ಯಕ್ಷ!
Haldiram ಭುಜಿಯಾವಾಲಾದಲ್ಲಿ ₹235 ಕೋಟಿ ಹೂಡಿಕೆ ಮಾಡಿದ ಭಾರತ್ ವ್ಯಾಲ್ಯು ಫಂಡ್
Gold Rates:ಡಾಲರ್ ಬೆಲೆ ಏರಿಕೆ-18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?
Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….
Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.